ಕನಿಷ್ಠ ಬೆಂಬಲ ಬೆಲೆ, ರೈತರ ಅನಿಶ್ಚಿತ ಆದಾಯ, ಎಪಿಎಂಸಿ ಬಗ್ಗೆ ಪ್ರಕಾಶ್ ಕಮ್ಮರಡಿ ಎಕ್ಸ್​ಕ್ಲೂಸಿವ್ ಸಂದರ್ಶನ

ಮಾರ್ಚ್ 5- 6ನೇ ತಾರೀಕು ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲನಾ ಸಮಿತಿಯ ಯೋಗೇಂದ್ರ ಯಾದವ್ ಕರ್ನಾಟಕಕ್ಕೆ ಬಂದು ಹೋದ ಮೇಲೆ ಎದ್ದಿರುವ ಹಲವು ಪ್ರಶ್ನೆಗಳಿಗೆ ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಉತ್ತರ ನೀಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ, ರೈತರ ಅನಿಶ್ಚಿತ ಆದಾಯ, ಎಪಿಎಂಸಿ ಬಗ್ಗೆ ಪ್ರಕಾಶ್ ಕಮ್ಮರಡಿ ಎಕ್ಸ್​ಕ್ಲೂಸಿವ್ ಸಂದರ್ಶನ
ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ
Follow us
Srinivas Mata
|

Updated on:Mar 12, 2021 | 5:22 PM

ಎಪಿಎಂಸಿಯ ಉಳಿವು ಹಾಗೂ ಅಳಿವಿನ ಬಗ್ಗೆ ಪ್ರಶ್ನೆ ಎದುರಾಗಿದೆ. ಮಾರ್ಚ್ 5- 6ನೇ ತಾರೀಕು ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲನಾ ಸಮಿತಿಯ ಯೋಗೇಂದ್ರ ಯಾದವ್ ಕರ್ನಾಟಕಕ್ಕೆ ಬಂದಿದ್ದರು. ಈ ವೇಳೆ ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಅವರೂ ಸೇರಿದಂತೆ ಇತರರ ಜತೆಗೂಡಿ ಕಲಬುರಗಿ ಹಾಗೂ ಬಳ್ಳಾರಿ ಎಪಿಎಂಸಿಗಳಲ್ಲಿ ಪರಿಸ್ಥಿತಿ ಹೇಗಿದೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಸಿಗುತ್ತಿದೆಯೇ ಎಂಬ ರಿಯಾಲಿಟಿ ಚೆಕ್ ತಮ್ಮದೇ ರೀತಿಯಲ್ಲಿ ಮಾಡಿದರು. ಕಲಬುರಗಿಯ ಎಪಿಎಂಸಿಯಲ್ಲಿ ಅಲ್ಪ ಪ್ರಮಾಣದಲ್ಲಿದ್ದ ತೊಗರಿ ಬೆಳೆಗೆ ಕೇಂದ್ರದ ಬೆಂಬಲ ಬೆಲೆಗಿಂತ ಹೆಚ್ಚು ಬೆಲೆ ಸಿಕ್ಕಿದೆ ಅನ್ನೋದು ಮಾತು. ಆದರೆ ಬಳ್ಳಾರಿ ಎಪಿಎಂಸಿಯಲ್ಲಿ ರೈತರು ಬೆಳೆದ ಯಾವ ಬೆಳೆಗೂ ಕನಿಷ್ಠ ಬೆಂಬಲ ಬೆಲೆ ದೊರೆತಿಲ್ಲ ಎಂಬುದು ಸಹ ಈಗ ಕೇಳಿಬರುತ್ತಿದೆ.

ಆ ದಿನ ನಡೆದಿದ್ದೇನು? ಎಪಿಎಂಸಿಯ ಸುತ್ತ ಹಾಗೂ ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಅಂಥವರ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು ಕುರಿತು ಟಿವಿ9ಕನ್ನಡ ವೆಬ್​ನಿಂದ ಸಂದರ್ಶನ ನಡೆಸಲಾಗಿದೆ. ಸ್ವತಃ ಪ್ರಕಾಶ್ ಕಮ್ಮರಡಿ ಈ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ. ಸಂದರ್ಶನ ಆಯದ ಭಾಗದ ಪ್ರಶ್ನೋತ್ತರಗಳು ಇಲ್ಲಿವೆ:

1. ಯೋಗೇಂದ್ರ ಯಾದವ್ ಅವರು ಬಂದಿದ್ದ ದಿನ ಕಲಬುರಗಿ, ಬಳ್ಳಾರಿಯಲ್ಲಿ ಆಗಿದ್ದೇನು? ಪ್ರ.ಕ.: ಕೇಂದ್ರ ಸರ್ಕಾರ ಹೇಳಿದಂತೆಯೇ ಬೆಂಬಲ ಬೆಲೆ ಸಿಗುತ್ತಿದೆಯೇ ಎಂದು ತಿಳಿದುಕೊಳ್ಳುವುದಕ್ಕೆ ಯೋಗೇಂದ್ರ ಯಾದವ್ ಅವರು ಪ್ರಯತ್ನ ಮಾಡಿದರು. ಕಲಬುರ್ಗಿಯಲ್ಲಿ ಕಡಲೆ, ತೊಗರಿ, ಮುಸುಕಿನ ಜೋಳ, ಜೋಳ ನೋಡಿದೆವು. ಆ ದಿನ ಕಡಲೆ ಬೆಳೆಗೆ ಒಳ್ಳೆ ಬೆಲೆ ಸಿಕ್ಕಿಲ್ಲ. ಇನ್ನು ಈಗ ತೊಗರಿ ಸೀಸನ್ ಅಲ್ಲ. ಅಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದ್ದ ತೊಗರಿಯು ಸರ್ಕಾರ ನಿಗದಿ ಮಾಡಿದ ಬೆಂಬಲ ಬೆಲೆಗಿಂತ ಸ್ವಲ್ಪ ಹೆಚ್ಚಿನ ದರಕ್ಕೆ ಹೋಗಿತ್ತು. ಆದರೆ ಅದು ಕೂಡ ತುಂಬ ಒಳ್ಳೆ ಬೆಲೆ ಅಂತೇನೂ ಅಲ್ಲ. ನಾವು ಹೋಗಿದ್ದ ವಾರದ ಹಿಂದೆ ಕೂಡ ತೊಗರಿಗೆ ಬೆಂಬಲ ಬೆಲೆ ಸಿಕ್ಕಿರಲಿಲ್ಲ. ಇನ್ನು 2019- 20ನೇ ಇಸವಿಯ ಒಟ್ಟಾರೆ ಲೆಕ್ಕ ಹೇಳಿಬಿಡ್ತೀನಿ ಕೇಳಿ: ಆ ವರ್ಷ ರಾಜ್ಯದಲ್ಲಿ 56 ಲಕ್ಷ ಟನ್ ಭತ್ತ ಉತ್ಪಾದನೆ ಆಗಿತ್ತು. ಅದು ಸೋನಾಮಸೂರಿಯಾದ್ದರಿಂದ ಶೇ 69ರಷ್ಟು ಬೆಳೆಗೆ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಸಿಕ್ಕಿದೆ. ರಾಗಿ 11.43 ಲಕ್ಷ ಟನ್ ಮಾರುಕಟ್ಟೆಗೆ ಬಂದರೆ ಶೇ 1.65ರಷ್ಟು ಮಾತ್ರ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಸಿಕ್ಕಿದೆ. ಹೈಬ್ರೀಡ್ ಜೋಳ ಶೇ 5ಕ್ಕೂ ಹೆಚ್ಚು, ತೊಗರಿಗೆ 11 ಲಕ್ಷ ಟನ್ ಪೈಕಿ 3.49 ಲಕ್ಷ ಟನ್​ಗೆ , ಕಡಲೆ ಬೆಳೆಗೆ ಶೇಕಡಾ 6ರಷ್ಟು ಮಾತ್ರ ಬೆಂಬಲ ಬೆಲೆ ಸಿಕ್ಕಿದೆ. ಒಟ್ಟಾರೆಯಾಗಿ ನೋಡಿದಾಗ ಬೆಂಬಲ ಬೆಲೆಗಿಂತ ಹೆಚ್ಚು ಮಾರಾಟ ಆಗಿರುವುದು ಶೇಕಡಾ 34ರಷ್ಟು ಮಾತ್ರ. ಇದು ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ

2. ಎಪಿಎಂಸಿಗಿಂತ ಹೊರಗೆ ಒಳ್ಳೆ ದರ ಸಿಗುತ್ತಿದೆಯಲ್ಲಾ? ಪ್ರ.ಕ.: ಎಪಿಎಂಸಿ ಹೊರಗಿನ ಲೆಕ್ಕ ನಮಗೆ ಗೊತ್ತಿಲ್ಲ. ನಮ್ಮ ಬಳಿ ಇರುವುದು ಎಪಿಎಂಸಿಯ ಲೆಕ್ಕಾಚಾರ. ಇದು ಕೃಷಿ ಮಾರಾಟ ವಾಹಿನಿಯಲ್ಲಿ ಎಲ್ಲರಿಗೂ ಸಿಗುತ್ತದೆ. ಎಪಿಎಂಸಿಯಲ್ಲೇ ಮಾರಾಟ ಮಾಡಿದರೆ ತೂಕದಲ್ಲಿ ಮೋಸ ಆಗಲ್ಲ. ಹಣಪಾವತಿಗೆ ಮೋಸ ಇಲ್ಲ. ಇದು ನಿಯಂತ್ರಿತ ಮಾರುಕಟ್ಟೆ. ಇಲ್ಲಿ ನಡೆಯುವುದು ಸ್ಪರ್ಧಾತ್ಮಕ ಬಿಡ್ಡಿಂಗ್. ಅತಿ ಹೆಚ್ಚು ಬಿಡ್ಡಿಂಗ್ ಮಾಡಿದವರು ಯಾರು ಎಂದು ರೈತರಿಗೆ ತಿಳಿಸಲಾಗುತ್ತದೆ. ಆ ದರದ ಬಗ್ಗೆ ಸಮಾಧಾನ ಇದ್ದಲ್ಲಿ ಮಾರಬಹುದು. ಇಲ್ಲದಿದ್ದಲ್ಲಿ ಮಾರದೆಯೂ ಇರಬಹುದು. ಆದರೆ ಎಪಿಎಂಸಿ ಹೊರಗೆ ಖಾಸಗಿಯವರೇ ಖರೀದಿ ಮಾಡುತ್ತಾರೆ. ಸೆಸ್ ಕೂಡ ಯಾವುದೂ ಹಾಕಲ್ಲ. ಸರ್ಕಾರದ ಯಾವುದೇ ನಿಯಂತ್ರಣ ಇರುವುದಿಲ್ಲ. 15-5-2020ರಂದು ಎಪಿಎಂಸಿ ಬಗ್ಗೆ ಸುಗ್ರೀವಾಜ್ಞೆ ಬಂದ ಮೇಲೆ 3-3-2021ರ ತನಕದ ಕೃಷಿ ಉತ್ಪನ್ನಗಳ ಉತ್ಪಾದನೆ ಶೇಕಡಾ 8ರಷ್ಟು ಜಾಸ್ತಿ ಆಗಿದೆ. ಆದರೆ ಎಪಿಎಂಸಿಗೆ ಬರುವುದರ ಪ್ರಮಾಣ ಶೇಕಡಾ 27ರಷ್ಟು ಕಡಿಮೆ ಆಗಿದೆ.

3. ನಿಮ್ಮ ಪ್ರಕಾರ ರೈತರ ಹಿತಕ್ಕೆ ಅಡ್ಡಿ ಆಗಿರುವವರು ಯಾರು? ಪ್ರ.ಕ.: ತನ್ನ ಜವಾಬ್ದಾರಿಗಳಿಂದ ನುಣುಚಿಕೊಂಡು, ಅಂಬಾನಿ, ಅದಾನಿಯಂಥ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಣೆ ಹಾಕುತ್ತಿರುವ ಸರ್ಕಾರವೇ ರೈತರ ಹಿತಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.

4. ನೀವು ಯಾವಾಗೂ ಕಾಂಗ್ರೆಸ್ ಪರವಾಗಿ, ಬಿಜೆಪಿ ವಿರುದ್ಧವಾಗಿ ಮಾತನಾಡ್ತೀರಿ ಎಂಬ ಆರೋಪವಿದೆಯಲ್ಲಾ? ಪ್ರ.ಕ.: ರಾಜ್ಯ ಸರ್ಕಾರವು 2018ರಲ್ಲಿ ಮಾರುಕಟ್ಟೆಯಿಂದ ಖರೀದಿ ಮಾಡುವ ಮೊದಲೇ ಶೇ 43 ತೊಗರಿ, ಶೇ 40 ಉದ್ದು, ಶೇ 48 ಕಡಲೆ ಮಾರಾಟ ಆಗಿತ್ತು. ನೀವು ತಡವಾಗಿ ಮಾರುಕಟ್ಟೆಗೆ ಬಂದು ವ್ಯಾಪಾರಿಗಳಿಗೆ ಲಾಭ ಮಾಡಿಕೊಟ್ಟಿರಿ ಎಂದು ಹೇಳಿದ್ದೆ. ಇನ್ನು ಮಳೆಯಾಶ್ರಿತ ಬೆಳೆಯ ಲೆಕ್ಕಾಚಾರದಲ್ಲಿ ಭತ್ತಕ್ಕೆ ರೂ. 3031 ಎಕರೆಗೆ, ರಾಗಿಗೆ 8914 ರೂ., ಉದ್ದು 10585 ರೂ., ಸಜ್ಜೆ 14000 ಹೀಗೆ ಒಟ್ಟಾರೆ ಕೃಷಿ ಬೆಳೆಗೆ 6594 ರೂಪಾಯಿ ನಷ್ಟವಾಗಿದೆ ಅಂತ ಲೆಕ್ಕ ಮುಂದಿಟ್ಟಿದೆ. ಅದೇ ರೀತಿ ಒಟ್ಟು ಉತ್ಪನ್ನದ ಶೇಕಡಾ 23ರಷ್ಟು ಮಾತ್ರ ನಿಯಂತ್ರಿತ ಮಾರುಕಟ್ಟೆಗೆ ಬರುತ್ತಿದೆ ಎಂದು ತಿಳಿಸಿದ್ದೆ. 2018ರಲ್ಲಿ ಶೇ 41ರಷ್ಟು ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ಸಿಕ್ಕಿತ್ತು. ಇವೆಲ್ಲ ಆಗಿನ ಕಾಂಗ್ರೆಸ್ ಸರ್ಕಾರ ಆದ ಮುಜುಗರ ಅಲ್ಲವಾ? ಈಗ ಶೇಕಡಾ 34ರಷ್ಟು ಬೆಳೆಗಳಿಗೆ ಮಾತ್ರ ಬೆಂಬಲ ಬೆಲೆ ಸಿಕ್ಕುತ್ತಿದೆ ಅನ್ನೋದನ್ನೂ ಹೇಳುತ್ತಿದ್ದೇನೆ, ಅಷ್ಟೇ.

5. ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ನೀವು ಹಾಗೂ ಸ್ವಾಮಿನಾಥನ್ ಮಾಡಿದ್ದ ಶಿಫಾರಸುಗಳಿಗೆ ಎಷ್ಟು ವ್ಯತ್ಯಾಸ ಇದೆ? ಪ್ರ.ಕ.: 2018ರ ಲೆಕ್ಕ ಹೇಳುವುದಾದರೆ, ಭತ್ತಕ್ಕೆ ಕೇಂದ್ರ ಸರ್ಕಾರ ನೀಡಿದ ಬೆಂಬಲ ಬೆಲೆ ರೂ. 1750. ಸ್ವಾಮಿನಾಥನ್ ಅವರ ಶಿಫಾರಸು 2340 ಹಾಗೂ ನನ್ನ ವರದಿಯಲ್ಲಿ ಶಿಫಾರಸು ಮಾಡಿದ್ದು 2762. ಅದೇ ರೀತಿ ಜೋಳಕ್ಕೆ ಸರ್ಕಾರ ಘೋಷಿಸಿದ್ದು 2430, ಸ್ವಾಮಿನಾಥನ್ ಶಿಫಾರಸು 3275 ಹಾಗೂ ನನ್ನ ಶಿಫಾರಸು ರೂ. 4470. ರಾಗಿಗೆ 2897- 3555- 5085, ಮುಸುಕಿನ ಜೋಳ 1700- 2220- 2256 ಹಾಗೂ ತೊಗರಿಗೆ ಸರ್ಕಾರ ಘೋಷಿಸಿದ್ದು 5675, ಸ್ವಾಮಿನಾಥನ್ ಶಿಫಾರಸು ರೂ. 7472 ಹಾಗೂ ನಾನು ಶಿಫಾರಸು ಮಾಡಿದ್ದು 10,676 ರೂ. ಇಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ ಎಂದು 6000 ರೂಪಾಯಿಗೆ 30 ಲಕ್ಷ ಕ್ವಿಂಟಲ್ ಖರೀದಿಗೆ ಸಿದ್ದರಾಮಯ್ಯ ಅವರ ಸರ್ಕಾರ ಘೋಷಣೆ ಮಾಡಿತು.

6. ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೀತರು ಆತ್ಮಹತ್ಯೆ ಮಾಡಿಕೊಂಡರಲ್ಲಾ? ಪ್ರ.ಕ.: ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಇರುವ ಅತಿ ಮುಖ್ಯ ಕಾರಣ ಏನೆಂದರೆ, ಅನಿಶ್ಚಿತವಾದ ಆದಾಯ. ಆ ವರ್ಷ ಅತಿ ಹೆಚ್ಚು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಮಹಾರಾಷ್ಟ್ರದಲ್ಲಿ. ಆ ನಂತರ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ. ಇನ್ನು ಮಾಧ್ಯಮಗಳಲ್ಲೂ ಆರ್ಥಿಕ ಸಮಸ್ಯೆಗೆ ಮತ್ತೊಬ್ಬ ರೈತ ಆತ್ಮಹತ್ಯೆ ಎಂದು ತೋರಿಸುತ್ತಿರುತ್ತಾರೆ. ಇದು ಸಮೂಹ ಮಾನಸಿಕ ಸ್ಥಿತಿ. ಜತೆಗೆ ಬ್ಯಾಂಕ್​ಗಳಿಂದ ನೋಟಿಸ್ ಬರುತ್ತದೆ. ಇಂಥ ಅಂಶಗಳೆಲ್ಲ ಇವೆ.

ಇದನ್ನೂ ಓದಿ: ಎಲ್ಲಿದೆ ಕನಿಷ್ಠ ಬೆಂಬಲ ಬೆಲೆ ಎಂದು ಅಂಕಿ-ಅಂಶಗಳ ಜತೆಗೆ ಸರ್ಕಾರದ ವಿರುದ್ಧ ಯೋಗೇಂದ್ರ ಯಾದವ್ ಕಿಡಿ

ಇದನ್ನೂ ಓದಿ: ಕರ್ನಾಟಕ ಬಜೆಟ್ 2021ರಲ್ಲಿ ಕೃಷಿ ಕ್ಷೇತ್ರದ ನಿರೀಕ್ಷೆ ಬಗ್ಗೆ ಪ್ರಕಾಶ್ ಕಮ್ಮರಡಿ ಹೇಳೋದೇನು?

Published On - 5:17 pm, Fri, 12 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ