AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅರಣ್ಯಾಧಿಕಾರಿಗಳ ಮುಂದೆ ದೊಡ್ಡದಾಗಿ ಬಾಯಿ ಬಿಟ್ಟ ದೈತ್ಯ ಹೆಬ್ಬಾವು

Video: ಅರಣ್ಯಾಧಿಕಾರಿಗಳ ಮುಂದೆ ದೊಡ್ಡದಾಗಿ ಬಾಯಿ ಬಿಟ್ಟ ದೈತ್ಯ ಹೆಬ್ಬಾವು

ಅಕ್ಷಯ್​ ಪಲ್ಲಮಜಲು​​
|

Updated on:Dec 05, 2025 | 4:25 PM

Share

ಮೈಸೂರಿನ ನಂಜನಗೂಡು ತಾಲ್ಲೂಕಿನ ಮಹಾದೇವನಗರದ ಕೋಡಹಳ್ಳಿ ಬಳಿ ದೈತ್ಯ ಹೆಬ್ಬಾವು ಸೆರೆಹಿಡಿಯಲಾಗಿದೆ. ರೈತರ ಕುರಿ ಮತ್ತು ಮೇಕೆಗಳನ್ನು ನುಂಗಿ ಭಾರೀ ತೊಂದರೆ ನೀಡುತ್ತಿದ್ದ ಈ ಹೆಬ್ಬಾವು ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಮತ್ತು ಉರಗ ತಜ್ಞ ಸಂಜಯ್ ಸಹಕಾರದಿಂದ ಇದನ್ನು ರಕ್ಷಿಸಲಾಗಿದ್ದು, ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಹುಣಸೂರು ನಂತರ ಇದೇ ರೀತಿಯ ಘಟನೆ ಮೈಸೂರು ಭಾಗದಲ್ಲಿ ನಡೆದಿದೆ.

ಮೈಸೂರು, ಡಿ.5: ಹುಣಸೂರು ನಂತರ ನಂಜನಗೂಡು ತಾಲ್ಲೂಕಿನ ಮಹಾದೇವನಗರದ ಕೋಡಹಳ್ಳ ಸಮೀಪದಲ್ಲಿ ದೈತ್ಯ ಹೆಬ್ಬಾವನ್ನು ಸೆರೆಹಿಡಿಯಲಾಗಿದೆ. ರೈತರಲ್ಲಿ ಆತಂಕ ಸೃಷ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ಉರಗ ತಜ್ಞ ಸಂಜಯ್‌ ರಕ್ಷಣೆ ಮಾಡಿದ್ದಾರೆ. ರೈತರು ಜಮೀನಿಗೆ ತೆರಳುತ್ತಿದ್ದ ವೇಳೆ ಈ ಹೆಬ್ಬಾವು ಕಾಣಿಸಿಕೊಂಡಿದೆ. ಇದೇ ಹೆಬ್ಬಾವು ಕುರಿ ಹಾಗೂ ಮೇಕೆಗಳನ್ನು ನುಂಗಿ ರೈತರಿಗೆ ಭಾರೀ ತೊಂದರೆಯನ್ನು ನೀಡುತ್ತಿತ್ತು. ಇದೀಗ ಹೆಬ್ಬಾವನ್ನು ಪತ್ತೆ ಮಾಡಿ ಸೆರೆ ಹಿಡಿಯಲಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 05, 2025 04:23 PM

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More