AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ವಡಾ ಕೊಂಬ್ಡಾ ನೀವೂ ಮಾಡಬಹುದು!

ಮಾತು ಬಲ್ಲವರಿಗೆ ಜಗಳವಿಲ್ಲ.. ಊಟಬಲ್ಲವರಿಗೆ ರೋಗವಿಲ್ಲ ಎಂಬ ಮಾತಿದೆ.. ಅದರಂತೆ ದಿನವೂ ಹೊಸ ಹೊಸ ಮಾದರಿಯ ಭೋಜನಗಳನ್ನು ಸವಿದು ಸಂತೋಷದಿಂದ ಬಾಳಬೇಕು. ಹಾಗಾಗೆ ನಾವು ನಿಮಗೆ ಇಂದು ಒಂದು ಹೊಸ ರೆಸಿಪಿಯನ್ನು ತೋರಿಸಿಕೊಡುತ್ತಿದ್ದೇವೆ.

ಬಾಯಲ್ಲಿ ನೀರೂರಿಸುವ ಕೊಂಕಣಿ ಶೈಲಿಯ ವಡಾ ಕೊಂಬ್ಡಾ ನೀವೂ ಮಾಡಬಹುದು!
ಕೊಂಕಣಿ ಶೈಲಿಯ ವಡಾ ಕೊಂಬ್ಡಾ
ಆಯೇಷಾ ಬಾನು
| Updated By: Skanda|

Updated on: Mar 13, 2021 | 8:15 AM

Share

ಭಾರತದಲ್ಲಿ ಸಿಗುವ ಸಾಂಬಾರು ಪದಾರ್ಥಗಳಿಗೆ ಅದರದೇ ಆದ ಸ್ವಾದ, ವೈಶಿಷ್ಟ್ಯವಿದೆ. ಅದರಲ್ಲೂ ವಿವಿಧ ಶೈಲಿಯ ಭಕ್ಷ್ಯ ಭೋಜನ, ತಿಂಡಿ, ಚಾಟ್​ಗಳಿಗೆ ಭಾರತ ತುಂಬಾ ಫೇಮಸ್. ಇಲ್ಲಿ ಸಿಗುವ ಡಿಫೆರಂಟ್ ಕಾಂಬಿನೇಷನ್ ತಿನಿಸುಗಳು ಜನರ ಬಾಯಲ್ಲಿ ನೀರೂರಿಸದೇ ಇರದು. ದಕ್ಷಿಣ ಭಾರತದ ಕರಾವಳಿ ಶೈಲಿಯ ತಿನಿಸಿನಿಂದ ಹಿಡಿದು ಮಹಾರಾಷ್ಟ್ರದ ಕೊಂಕಣಿ ಪ್ರದೇಶಗಳ ಸುವಾಸನೆ ಭರಿತ ತಿನಿಸಿನವೆರೆಗೂ ಅಡುಗೆಯಲ್ಲಿ ಅನ್ವೇಷಣೆಗಳು ತುಂಬಾ ಇವೆ.

ಕೊಂಕಣಿ ಶೈಲಿಯ ವಡಾ ಕೊಂಬ್ಡಾವನ್ನು ಹೇಗೆ ತಯಾರಿಸುವುದು ಎಂಬುದನ್ನು ನಾವು ಇವತ್ತು ನಿಮಗೆ ತಿಳಿಸುತ್ತೇವೆ. ಮನೆಯಲ್ಲಿ ಮಾಡಿ ಇದರ ರುಚಿ ನೋಡಿ. ಕೊಂಕಣಿಯ ವಡಾ ಮತ್ತು ಚಿಕನ್ ಕರಿಯ ವಿಶಿಷ್ಟ ಸಂಯೋಜನೆಯೇ ವಡಾ ಕೊಂಬ್ಡಾ. ಟೇಸ್ಟಿ ಅಂಡ್ ಸ್ಪೈಸಿ ಬಾಯಲ್ಲಿ ನೀರು ತರಿಸುವ ಚಿಕನ್ ಕರಿಯ ಜೊತೆ ವಡಾಗಳನ್ನು ಅದ್ದಿ ತಿನ್ನುವುದೇ ಒಂದು ರೀತಿಯ ಆನಂದ. ನಾನ್​ವೆಜ್ ಪ್ರಿಯರಿಗೆ ಇದೊಂದು ಅದ್ಭುತವಾದ ಕಾಂಬಿನೇಷನ್.

ವಡಾ ಕೊಂಬ್ಡಾವನ್ನು ತಯಾರಿಸುವುದು ಹೇಗೆ? ವಡಾ ಕೊಂಬ್ಡಾ ಮಾಡುವುದು ತುಂಬಾ ಸರಳವಾಗಿದೆ. ಆದರೆ ಇದು ತಯಾರಿಸಲು ಸಮಯ ಬೇಕು. ಮೊದಲಿಗೆ ಚಿಕನ್ ಕರಿಯನ್ನು ತಯಾರಿಸಿಕೊಳ್ಳಬೇಕು. ಇದರಲ್ಲಿ ಮನೆಯಲ್ಲೇ ತಯಾರಿಸಿದ ಮಸಾಲೆ ಜೊತೆಗೆ ಕಾಲಾ ಮಸಾಲ ಬೆರೆಸಬೇಕು. ಕಾಲಾ ಮಸಾಲ ಅಂದರೆ ಜೀರಿಗೆ, ಏಲಕ್ಕಿ, ಲವಂಗದಿಂದ ಹಿಡಿದು ಸೋಂಪು, ಮತ್ತು ಜಾಯಿಕಾಯಿ ಎಲ್ಲದರ ಸಮೃದ್ಧ ಮಿಶ್ರಣವಾಗಿದೆ. ಕರಿ ಮಸಾಲಾ, ಗಸಗಸೆ-ಎಳ್ಳು, ಉಪ್ಪು, ಈರುಳ್ಳಿ-ಟೊಮೆಟೊ ಪೇಸ್ಟ್ ಜೊತೆಗೆ ತುರಿದ ತೆಂಗಿನಕಾಯಿಯ ಹಾಲಿನೊಂದಿಗೆ ಚಿಕನ್  ಬೇಯಿಸಬೇಕು. ಬಳಿಕ ಇದನ್ನು ಒಂದು ಬಟ್ಟಲಿನಲ್ಲಿ ಹಾಕಿಕೊಳ್ಳಿ.

ಇನ್ನು ಉದ್ದಿನ ಬೇಳೆ, ಜೀರಿಗೆ ಮತ್ತು ಮೆಂತ್ಯೆ ಕಾಳುಗಳನ್ನು ನೆನಸಿಟ್ಟು ಮಿಕ್ಸಿಯಿಂದ ರುಬ್ಬಿ ಕೊಳ್ಳಿ. ಬಳಿಕ ರುಬ್ಬಿದ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮತ್ತು ಗೋಧಿ ಹಿಟ್ಟು, ಸ್ವಲ್ಪ ಅರಿಶಿಣ, ಉಪ್ಪು, ಎಣ್ಣೆ ಮತ್ತು ನೀರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಚಪಾತಿ ಹಿಟ್ಟಿನಂತೆ ಮೃದುವಾಗುವವರೆಗೆ ಮಿಕ್ಸ್ ಮಾಡಿ. ಬಳಿಕ ಇದನ್ನು ಪೂರಿ ಮಾದರಿಯಲ್ಲಿ ಚಿಕ್ಕದಾಗಿ ತಟ್ಟಿ ಅದನ್ನು ಕಾದ ಎಣ್ಣೆಯಲ್ಲಿ ತೇಲಿ ಬಿಡಿ. ವಡಾ ತಯಾರಾದ ಬಳಿಕ ಅದನ್ನು ಚಿಕನ್ ಕರಿಯ ಜೊತೆ ಸೇವಿಸಿ. ಅಥವಾ ವಡಾವನ್ನು ಹಾಗೇ ಸಹ ತಿನ್ನಬಹುದು.

ಕಲಾ ಮಸಾಲ ತಯಾರಿಸುವ ವಿಧಾನ 1. ಎಲ್ಲಾ ಸಾಂಬಾರು ಪದಾರ್ಥಗಳನ್ನು ಬಣ್ಣ ಬದಲಾಯಿಸುವವರೆಗೆ ಪ್ರೈ ಮಾಡಿ ಬಳಿಕ ಅದನ್ನು ತಣ್ಣಗಾಗಿಸಿ ಚನ್ನ್ಆಗಿ ಪುಡಿಮಾಡಿ. ಚಿಕನ್ ಕರಿ ತಯಾರಿಸುವ ವಿಧಾನ 1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಕಂದು ಬಣ್ಣ ಬರುವವರೆಗೆ ಪ್ರೈ ಮಾಡಿ 2. ಬೇಯಿಸಿದ ಈರುಳ್ಳಿ ಪೇಸ್ಟ್ ಸೇರಿಸಿ ಮತ್ತು 10 ನಿಮಿಷ ಬೇಯಿಸಿ. 3.ಈಗ ರುಬ್ಬಿದ ಟೊಮೆಟೊ ಸೇರಿಸಿ ಮತ್ತು 5 ನಿಮಿಷ ಬೇಯಿಸಿ, 4. ಗಸಗಸೆ-ಎಳ್ಳು ಪೇಸ್ಟ್ ಸೇರಿಸಿ ಮತ್ತು ಸ್ವಲ್ಪ ಸಮಯ ಬೇಯಿಸಿ. 5. ಮಸಾಲೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. 6. ಈಗ ಚಿಕನ್ ಸೇರಿಸಿ ಮತ್ತು ಸ್ಪಲ್ಪ ನೀರು ಸೇರಿಸಿ ಚಿಕನ್್ ಅನ್ನು ಸರಿಯಾಗಿ ಬೇಯಿಸಿ 7. ಕಾಲಾ ಮಸಾಲ ಮತ್ತು ತುರಿದ ತೆಂಗಿನಕಾಯಿಯ ಹಾಲನ್ನು ಸೇರಿಸಿ ಮತ್ತು ಗ್ರೇವಿಯಾಗುವವರೆಗೆ ಬೇಯಿಸಿ.

ಇದನ್ನೂ ಓದಿ: ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!