ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ವಿಮಾನ ಪ್ರಯಾಣಿಕರ ಅಚ್ಚು ಮೆಚ್ಚಿನ ಏರ್ಲೈನ್ಸ್ ಆಗಿದ್ದ ಇಂಡಿಗೋ ವಿರುದ್ಧ ಈಗ ಪ್ರಯಾಣಿಕರು ಆಕ್ರೋಶ ಹೊರ ಹಾಕ್ತಿದ್ದಾರೆ. ಯಾಕಂದ್ರೆ ಕಳೆದ 4 ದಿನಗಳಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ಭಾರೀ ಏರುಪೇರಾಗಿದೆ. ನಿತ್ಯ 500, 600 ವಿಮಾನಗಳ ಹಾರಾಟದ ರದ್ದಾಗುತ್ತಿವೆ. ಇದರಿಂದ ಮೊಲದೇ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಇಂಡಿಗೋ ವಿಮಾನವೊಂದು ಪ್ರಯಾಣಿಕರನ್ನು ಅರ್ಧಕ್ಕೆ ಬಿಟ್ಟು ಹೋಗಿದೆ.
ಬೆಂಗಳೂರು, (ಡಿಸೆಂಬರ್ 05): ವಿಮಾನ ಪ್ರಯಾಣಿಕರ ಅಚ್ಚು ಮೆಚ್ಚಿನ ಏರ್ಲೈನ್ಸ್ ಆಗಿದ್ದ ಇಂಡಿಗೋ ವಿರುದ್ಧ ಈಗ ಪ್ರಯಾಣಿಕರು ಆಕ್ರೋಶ ಹೊರ ಹಾಕ್ತಿದ್ದಾರೆ. ಯಾಕಂದ್ರೆ ಕಳೆದ 4 ದಿನಗಳಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ಭಾರೀ ಏರುಪೇರಾಗಿದೆ. ನಿತ್ಯ 500, 600 ವಿಮಾನಗಳ ಹಾರಾಟದ ರದ್ದಾಗುತ್ತಿವೆ. ಇದರಿಂದ ಮೊಲದೇ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಇಂಡಿಗೋ ವಿಮಾನವೊಂದು ಪ್ರಯಾಣಿಕರನ್ನು ಅರ್ಧಕ್ಕೆ ಬಿಟ್ಟು ಹೋಗಿದೆ. ಹೌದು… ಅಯ್ಯಪ್ಪ ಮಾಲಾಧಾ ಶಬರಿಮಲೆಗೆ ತೆರಳುವ ಸಂಬಂಧ ಹೈದರಾಬಾದಿನಿಂದ ಕೇರಳಕ್ಕೆ ವಿಮಾನ ಬುಕ್ ಮಾಡಿದ್ದಾರೆ. ಆದ್ರೆ, ವಿಮಾನ ಆಂಧ್ರದಿಂದ ಪ್ರಯಾಣಿಕರನ್ನು ಹೊತ್ತುತಂದು ಬೆಂಗಳೂರಿನಲ್ಲೇ ಬಿಟ್ಟಿದೆ. ಬೆಂಗಳೂರಿನಿಂದ ಕೇರಳದ ಕೊಚ್ಚಿ ಏರ್ ಪೋರ್ಟ್ ಗೆ ಹೋಗಬೇಕಿದ್ದ ಅಯ್ಯಪ್ಪ ಮಾಲಾಧಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಿಂದ ಕೇರಳಕ್ಕೆ ಫ್ಲೈಟ್ ಕ್ಯಾನ್ಸಲ್ ಆಗಿದೆ ಎಂದ ಇಂಡಿಗೋ ಸಿಬ್ಬಂದಿ ಹೇಳುತ್ತಿದ್ದಂತೆಯೇ ಅಯ್ಯಪ್ಪ ಮಾಲಾಧಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಮಗಾದ ಅವ್ಯವಸ್ಥೆ ಕೇಂದ್ರ ಸರ್ಕಾರ, ಕೇರಳ ಸರಕಾರ ಗಮನಿಸಬೇಕು. ಈಗಾಗಲೇ ಆಗಿರುವ ಬುಕಿಂಗ್ ವಿಳಂಬವನ್ನ ಕೇರಳ ಸರ್ಕಾರ ಮನ್ನಿಸಬೇಕು. ಅಯ್ಯಪ್ಪಸ್ವಾಮಿ ದರ್ಶನಕ್ಕೆ ಕೇರಳ ಸರ್ಕಾರ ಅವಕಾಶ ಮಾಡಬೇಕೆಂದು ಆಗ್ರಹಿಸಿದರು.
ಬೇರೆ ಧರ್ಮದವರಿಗೆ ಸರ್ಕಾರಗಳು ಸೂಕ್ತ ವ್ಯವಸ್ಥೆ ಮಾಡಿಕೊಡುತ್ತೆ. ಮೆಕ್ಕಾಗೆ ಹೋಗಲು ಫ್ರೀ ಟಿಕೆಟ್ ಕೊಟ್ಟು ಎಲ್ಲಾ ವ್ಯವಸ್ಥೆಗಳನ್ನ ಮಾಡ್ತಾರೆ. ಆದ್ರೆ, ಹಿಂದೂಗಳು ಪ್ರಯಾಣ ಬೆಳೆಸಬೇಕಾದರೆ ಇಷ್ಟೊಂದು ಸಮಸ್ಯೆ ಆಗದೆ ಎಂದು ಅಸಮಾಧಾನ ಹೊರಹಾಕಿದರು.

