ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಭ್ರಷ್ಟಾಚಾರ ಆರೋಪ ಮಾಡಿದ ಜೆಡಿಎಸ್ ಎಂಎಲ್ಗೆ ಎಂಬಿ ಪಾಟೀಲ್ ಎಚ್ಚರಿಕೆ
ಕರ್ನಾಟಕದಲ್ಲಿ 63 ಪರ್ಸೆಂಟ್ ಭ್ರಷ್ಟಾಚಾರ ಇದೆ ಎಂದು ಉಪಲೋಕಾಯುಕ್ತ ವೀರಪ್ಪ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣಸಲ್ಲಿ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಭಾರೀ ಭ್ರಷ್ಟಾಚಾರವಾಗಿದೆ ಎಂದು ಕೆ ಆರ್ ಪೇಟೆ ಶಾಸಕ ಮಂಜು ಗಂಭೀರ ಆರೋಪ ಮಾಡಿದ್ದಾರೆ. ಸಚಿವರು ಕಿಕ್ ಬ್ಯಾಕ್ ಮಾಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದಕ್ಕೆ ಸಚಿವ ಎಂಪಿ ಪಾಟೀಲ್ ಗರಂ ಆಗಿದ್ದಾರೆ,
ಬೆಂಗಳೂರು, (ಡಿಸೆಂಬರ್ 05): ಕರ್ನಾಟಕದಲ್ಲಿ 63 ಪರ್ಸೆಂಟ್ ಭ್ರಷ್ಟಾಚಾರ ಇದೆ ಎಂದು ಉಪಲೋಕಾಯುಕ್ತ ವೀರಪ್ಪ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣಸಲ್ಲಿ ಸಂಚಲನ ಮೂಡಿಸಿದ್ದು, ಇದರ ಬೆನ್ನಲ್ಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಭಾರೀ ಭ್ರಷ್ಟಾಚಾರವಾಗಿದೆ ಎಂದು ಕೆ ಆರ್ ಪೇಟೆ ಶಾಸಕ ಮಂಜು ಗಂಭೀರ ಆರೋಪ ಮಾಡಿದ್ದಾರೆ. ಸಚಿವರು ಕಿಕ್ ಬ್ಯಾಕ್ ಪಡೆದಿದ್ದಾರೆಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದಕ್ಕೆ ಸಚಿವ ಎಂಪಿ ಪಾಟೀಲ್ ಗರಂ ಆಗಿದ್ದು, ಮಂಜುರವರ ಆರೋಪವನ್ನು ತಿಳಿದು ಅದಕ್ಕೆ ಸ್ಪಷ್ಟೀಕರಣ ಕೊಡುತ್ತೇವೆ. KSDIL ನಲ್ಲಿ ಏನಾದರೂ ಅವ್ಯವಹಾರ ಆಗಿದ್ರೆ, ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇವೆ. ಇದು ಮಾಡಾಳ್ ವಿರೂಪಾಕ್ಷ ನವರ ಸರ್ಕಾರ ಅಲ್ಲ, ಇದು ನಮ್ಮ ಸರ್ಕಾರ. ಕಿಕ್ ಬ್ಯಾಕ್ ಅಂತಾ ಸಚಿವರ ಹೆಸರು ತಗೊಂಡು ಹೇಳಿದ್ರೆ ಅವನನ್ನು ಒದ್ದು ಒಳಗೆ ಹಾಕ್ತೀನಿ. ಅಲ್ಲಿ ಎಂಡಿ ಇರುತ್ತಾರೆ, ಏನೇ ಆದರೂ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ.ಸಚಿವರು ತನಕ ಏನು ಬರುವುದಿಲ್ಲ. ಏನಾದರೂ ಇದ್ದರೆ ಅದಕ್ಕೆ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಆದರೆ ಸುಖಾ ಸುಮ್ಮನೆ ಆರೋಪ ಮಾಡೋದು ಸರಿಯಲ್ಲ.ಅವರು ಆರೋಪಕ್ಕೂ ತಕ್ಕ ಉತ್ತರ ಕೊಡುತ್ತೇವೆ. ಸುಳ್ಳು ಆಪಾದನೆ ಮಾಡಿದ್ರೆ ಅವನ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಗೂ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

