ಕೊರೊನಾ ಲಸಿಕೆ ಪಡೆದ ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್
ರಾಜ್ಯದ ಜನರಿಗೆ ಮಾದರಿಯಾಗಲು ಮುಂದಾದ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಕೊರೊನಾ ಲಸಿಕೆ ಪಡೆದರು. ನಗರದ ವಿಕ್ಟೋರಿಯಾ ಕ್ಯಾಂಪಸ್ನಲ್ಲಿರುವ PMSSY ಆಸ್ಪತ್ರೆಯಲ್ಲಿ ಬಿಎಸ್ವೈ ಲಸಿಕೆ ಪಡೆದರು.
ಬೆಂಗಳೂರು: ರಾಜ್ಯದ ಜನರಿಗೆ ಮಾದರಿಯಾಗಲು ಮುಂದಾದ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಕೊರೊನಾ ಲಸಿಕೆ ಪಡೆದರು. ನಗರದ ವಿಕ್ಟೋರಿಯಾ ಕ್ಯಾಂಪಸ್ನಲ್ಲಿರುವ PMSSY ಆಸ್ಪತ್ರೆಯಲ್ಲಿ ಬಿಎಸ್ವೈ ಲಸಿಕೆ ಪಡೆದರು. ವ್ಯಾಕ್ಸಿನ್ ಪಡೆದ ನಂತರ ಸುಮಾರು ಅರ್ಧಗಂಟೆ ವೈದ್ಯರ ನಿಗಾದಲ್ಲಿ ಸಹ ಇದ್ದರು. ಸಿಎಂ ಯಡಿಯೂರಪ್ಪ ಜೊತೆಗೆ ಆರೋಗ್ಯ ಸಚಿವ ಕೆ.ಸುಧಾಕರ್ ಸಹ ಲಸಿಕೆ ಪಡೆದರು. ಮುಖ್ಯಮಂತ್ರಿಗಳ ಜೊತೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ಪಡೆದರು.
ಲಸಿಕೆ ಪಡೆದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಇಂದು ನಾನು ಕೊರೊನಾ ಲಸಿಕೆಯನ್ನ ಹಾಕಿಸಿಕೊಂಡಿದ್ದೇನೆ. ಪ್ರಧಾನಿಯವರ ತಾಯಿ ಕೂಡ ಲಸಿಕೆ ಪಡೆದಿದ್ದಾರೆ. ಹೀಗಾಗಿ, ನಾನು ರಾಜ್ಯದ ಜನತೆಗೆ ಕರೆ ಕೊಡುತ್ತೇನೆ. ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದು ಹೇಳಿದರು.
ಇನ್ನು, ಆರೋಗ್ಯ ಸಚಿವ ಡಾ. ಸುಧಾಕರ್ ಮಾತನಾಡಿ ದೇಶೀಯ ಲಸಿಕೆಯನ್ನ ಸಿಎಂ ಪಡೆದಿದ್ದಾರೆ. ವೈದ್ಯರ ಸಲಹೆಯಂತೆ ಅರ್ಧ ಗಂಟೆ ವಿಶ್ರಾಂತಿ ಪಡೆದರು. ಅವರ ಬಿಪಿ, ಶುಗರ್ ಯಾವುದೂ ಹೆಚ್ಚಾಗಿಲ್ಲ. ಯಾವುದೇ ಅಡ್ಡ ಪರಿಣಾಮ ಸಹ ಆಗಿಲ್ಲ ಎಂದು ಹೇಳಿದರು.
ವ್ಯಾಕ್ಸಿನ್ ಪಡೆದು ಸಿಎಂ ಸ್ಪಷ್ಟ ಸಂದೇಶ ನೀಡಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಯನ್ನ ಹಾಕಿಸಿಕೊಳ್ಳುವಂತೆ ಸಂದೇಶ ನೀಡಿದ್ದಾರೆ. 60 ವರ್ಷ ಮೇಲ್ಪಟ್ಟು ರಾಜ್ಯದಲ್ಲಿ 50 ಲಕ್ಷ ಜನ ಇದ್ದಾರೆ. 45 ವರ್ಷ ಮೇಲ್ಪಟ್ಟವರು ಅನಾರೋಗ್ಯಕ್ಕೆ ಒಳಗಾಗಿದ್ರೆ ಅವರೂ ಲಸಿಕೆ ಪಡೆಯಬಹುದು. ಪ್ರತೀ ದಿನ ಸೋಂಕಿನ ಸಂಖ್ಯೆ ಏರಿಕೆಯಾಗ್ತಿದೆ. ಸದ್ಯ ಸೋಂಕು ಬಹಳ ನಿಯಂತ್ರಣದಲ್ಲಿದೆ. ನೆರೆಯ ರಾಜ್ಯಕ್ಕೆ ಹೋಲಿಸಿಕೊಂಡ್ರೆ ನಮ್ಮಲ್ಲಿ ಕಡಿಮೆ ಇದೆ. ಕೊರೊನಾ ನಿಯಂತ್ರಣಕ್ಕೆ ಸಿಎಂ ಅವರೇ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮಾಡಲಿದ್ದಾರೆ ಎಂದು ಸಹ ಹೇಳಿದರು.
ಇತ್ತ, ರಾಜ್ಯದಲ್ಲಿ ಕೊವಿಡ್ ಆತಂಕ ಮುಂದುವರಿದಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಿಎಸ್ವೈ ಸಂವಾದ ನಡೆಸಲಿದ್ದಾರೆ. ಲಸಿಕೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.
ಇದನ್ನೂ ಓದಿ: ಕನ್ನಡಿಗ ಗೂಂಡಾಗಳಿಗೆ ಧಿಕ್ಕಾರ -ಬೆಳಗಾವಿಯಲ್ಲಿ MES, ಶಿವಸೇನೆ ಕಾರ್ಯಕರ್ತರ ನಾಡದ್ರೋಹಿ ಘೋಷಣೆ
Published On - 5:15 pm, Fri, 12 March 21