AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು

ಆ ತಾಯಿಗೆ ನಾಲ್ವರು ಹೆಣ್ಣು ಮಕ್ಕಳು. ಅವರವರ ಪತಿ ಮನೆಯಲ್ಲಿದ್ದರು. ಹೀಗಾಗಿ 64 ವರ್ಷ ವರ್ಷದ ವೃದ್ಧೆ ತನ್ನ ಸ್ವಗ್ರಾಮದಲ್ಲಿ ಒಬ್ಬಳೇ ವಾಸವಿದ್ದಳು. ಆದ್ರ, ಬೆಳಿಗ್ಗೆ ಹೊರಗೆ ಬರಲಿಲ್ಲ. ಮೇಲಾಗಿ ಮನೆಯ ಬಾಗಿಲು ಸಹ ಓಪನ್ ಇತ್ತು. ಆದರೂ ವೃದ್ಧೆ ಮನೆಯಿಂದ ಹೊರಗೇ ಬರಲೇ ಇಲ್ಲ. ಹೋಗಿ ನೋಡಿದಾಗ ವೃದ್ಧೆ ಸತ್ತು ಬಿದ್ದಿದ್ದಳು.ಹಾರ್ಟ್ ಅಟ್ಯಾಕ್ ಆಗಿದೆ ಎಂದು ಶವ ಸಂಸ್ಕಾರಕ್ಕೆ ಸಿದ್ದತೆ ನಡೆಸಲಾಗಿತ್ತು. ಆದ್ರೆ, ಸಂಬಂಧಿಕನಿಗೆ ಬಂದ ಅನುಮಾನದಿಂದ ವೃದ್ಧೆ ಸಾವಿನ ರಹಸ್ಯ ಬಟಾಬಯಲಾಗಿದೆ.

ವೃದ್ಧೆ ಅನುಮಾಸ್ಪದ ಸಾವು: ಇನ್ನೇನು ಅಂತ್ಯಕ್ರಿಯೆ ಮಾಡ್ಬೇಕು ಎನ್ನುವಷ್ಟರಲ್ಲೇ ಸಾವಿನ ರಹಸ್ಯ ಬಯಲು
Kamalamma And Abhishek
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Feb 23, 2026 | 8:26 PM

Share

ದಾವಣಗೆರೆ, (ಫೆಬ್ರವರಿ 23): ಜಿಲ್ಲೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಇದೇ ತಿಂಗಳ 2ರಂದು ಗ್ರಾಮಸ್ಥರೆಲ್ಲ ಊರ ಹಬ್ಬದ ಖುಷಿಯಲ್ಲಿದ್ದರು. ಆದ್ರೆ ಮಾರನೇ ದಿನವೇ ಗ್ರಾಮದ 64 ವರ್ಷದ ಕಮಲಮ್ಮ ಮೃತಪಟ್ಟಿದ್ಳು. ಒಂಟಿ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂದುಕೊಂಡಿದ್ದರು. ಆದ್ರೆ, ಅಂತ್ಯಕ್ರಿಯೆ ಹೊತ್ತಲ್ಲಿ ವೃದ್ಧೆಯ ಮೈಮೇಲಿದ್ದ ಒಡವೆ ಕಾಣೆಯಾಗಿರುವುದು ಸಂಬಂಧಿಯೊಬ್ಬರಿಗೆ ಸಂಶಯ ಬಂದಿದೆ. ಈ ವಿಷಯ ತಿಳಿದು ಅಖಾಡಕ್ಕಿಳಿದ ಪೊಲೀಸರು ವೃದ್ಧೆಯ ಸಾವಿನ ರಹಸ್ಯ ಬಯಲಿಗೆ ಬಂದಿದ್ದು, ವೃದ್ಧೆ ಹೃದಯಾಘಾತದಿಂದ ಮೃತಪಟ್ಟಿಲ್ಲ. ಬದಲಾಗಿ ಅಭಿಷೇಕ್ ಎನ್ನುವಾತನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಹಂತಕ ಶಿವಮೊಗ್ಗ ಮೂಲದ ಅಭಿಷೇಕ್ Msc ಓದಿದ್ದ. ಆನ್​ಲೈನ್ ಗೇಮ್ ಚಟಕ್ಕೆ ಬಿದ್ದು 20ರಿಂದ 25 ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲಕೊಟ್ಟವರ ಕಾಟ ಜಾಸ್ತಿ ಆಗ್ತಿದ್ದಂತೆ ಊರು ಬಿಟ್ಟೋನು 2 ತಿಂಗಳ ಕಾಲ ಅಲ್ಲಿ ಇಲ್ಲಿ ಸುತ್ತಾಡಿ ಫೆಬ್ರವರಿ 2ರಂದು ದಾವಣಗೆರೆಯ ಆರುಂಡಿ ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದ. ಈ ವೇಳೆ ವೃದ್ಧೆ ಕಮಲಮ್ಮನ ನೋಡ್ತಿದ್ದಂತೆ ಪಾಪಿಯ ಕಣ್ಣು ಒಡವೆ ಮೇಲೆ ಬಿದ್ದಿತ್ತು.

ಇದನ್ನೂ ಒದಿ: ಸಾಕು ಮಗ-ತಂಗಿಯಿಂದಲೇ ಮಹಿಳೆಯ ಹತ್ಯೆ: ಓರ್ವ ವ್ಯಕ್ತಿಯಿಂದ ಬಯಲಾಯ್ತು ಕೊಲೆ ರಹಸ್ಯ

ಎಲ್ಲರೂ ಊರ ಹಬ್ಬದ ಖುಷಿಯಲ್ಲಿದ್ರೆ, ಇವನು ಸದ್ದಿಲ್ಲದೆ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದು 8 ಲಕ್ಷ 44 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಬಳಿಕ ಅದೇ ಒಡವೆ ಅಡವಿಟ್ಟು ಮತ್ತೆ ಆನ್​ಲೈನ್ ಗೇಮ್ ಆಡಿದ್ದ. ಸದ್ಯ ಪೊಲೀಸರು ಅಭಿಷೇಕ್​ಗೆ ಜೈಲು ದಾರಿ ತೋರಿಸಿದ್ದಾರೆ. ಚೆನ್ನಾಗಿ ಓದಿರುವ ವಿದ್ಯಾವಂತರೇ ಹೀಗೆ ದುಶ್ಚಟಗಳಿಗೆ ಬಿದ್ದು ಕೊಲೆ, ಸುಲಿಗೆ ಮಾಡ್ತಿರೋದು ಜನರನ್ನ ಬೆಚ್ಚಿ ಬೀಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು