ಕನ್ನಡಿಗ ಗೂಂಡಾಗಳಿಗೆ ಧಿಕ್ಕಾರ -ಬೆಳಗಾವಿಯಲ್ಲಿ MES, ಶಿವಸೇನೆ ಕಾರ್ಯಕರ್ತರ ನಾಡದ್ರೋಹಿ ಘೋಷಣೆ
ನಗರದಲ್ಲಿರುವ ಶಿವಸೇನೆ ಕಚೇರಿಗೆ ನುಗ್ಗಲು ಕರವೇ ಕಾರ್ಯಕರ್ತರು ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ MES ಹಾಗೂ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಶಿವಸೇನೆ ಮತ್ತು MES ಕಾರ್ಯಕರ್ತರು ನಗರದ ರಾಮಲಿಂಗಖಿಂಡ ಗಲ್ಲಿಯಿಂದ ಪ್ರತಿಭಟನಾ ಱಲಿ ನಡೆಸಿದರು.
ಬೆಳಗಾವಿ: ನಗರದಲ್ಲಿರುವ ಶಿವಸೇನೆ ಕಚೇರಿಗೆ ನುಗ್ಗಲು ಕರವೇ ಕಾರ್ಯಕರ್ತರು ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ MES ಹಾಗೂ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಶಿವಸೇನೆ ಮತ್ತು MES ಕಾರ್ಯಕರ್ತರು ನಗರದ ರಾಮಲಿಂಗಖಿಂಡ ಗಲ್ಲಿಯಿಂದ ಪ್ರತಿಭಟನಾ ಱಲಿ ನಡೆಸಿದರು.
ಪ್ರತಿಭಟನೆಯಲ್ಲಿ ಶಿವಸೇನೆ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟಿಕೆ ಮೆರೆದರು. ಕನ್ನಡಿಗ ಗೂಂಡಾಗಳಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಬಳಿಕ, ಸಂಭಾಜಿ ವೃತ್ತಕ್ಕೆ ಡಿಸಿಪಿ ವಿಕ್ರಂ ಆಮಟೆ ಭೇಟಿ ಕೊಟ್ಟರು. ಈ ವೇಳೆ, ಕರವೇ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸುವಂತೆ ಶಿವಸೇನೆ ಕಾರ್ಯಕರ್ತರು ಆಗ್ರಹಿಸಿದರು. ಈ ಮಧ್ಯೆ, ಪೊಲೀಸರು ಹಾಗೂ ಧರಣಿನಿರತರ ನಡುವೆ ಮಾತಿನ ಚಕಮಕಿ ಸಹ ಉಂಟಾಯಿತು. ಧರಣಿ ಕೈಬಿಡುವಂತೆ ಪೊಲೀಸರು ಮನವಿ ಮಾಡಿದರೂ ಕಾರ್ಯಕರ್ತರು ಕೇಳದೇ ಪ್ರತಿಭಟನೆ ಮುಂದುವರಿಸಿದರು.
ಅಂದ ಹಾಗೆ, ಈ ಹಿಂದೆ MES ಹಾಗೂ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡ ನಾಮಫಲಕಗಳಿಗೆ ಮಸಿ ಬಳಿದಿದ್ದರು. ಇದನ್ನು ಖಂಡಿಸಿ ಬೆಳಗಾವಿಯಲ್ಲಿ ಕರವೇ ಕಾರ್ಯಕರ್ತರು ನಗರದಲ್ಲಿದ್ದ ಮರಾಠಿ ನಾಮಫಲಕಗಳಿಗೆ ಮಸಿ ಬಳಿದು ಪ್ರತಿಭಟಿಸಿದ್ದರು.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮತ್ತೆ ಶಿವಸೇನೆ ಪುಂಡಾಟಿಕೆ ಅತ್ತ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮತ್ತೆ ಶಿವಸೇನೆ ಪುಂಡಾಟಿಕೆ ಮೆರೆದಿದೆ. ಕೊಲ್ಹಾಪುರ ಬಸ್ ನಿಲ್ದಾಣಕ್ಕೆ ನುಗ್ಗಿದ ಶಿವಸೇನೆ ಪುಂಡರು ಕಪ್ಪು ಮಸಿಯಿಂದ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ಗಳ ಮೇಲೆ ಮರಾಠಿ ಬರಹ ಬರೆದಿದ್ದಾರೆ. ಜೈ ಮಹಾರಾಷ್ಟ್ರ ಅಂತಾ ಕರ್ನಾಟಕ ಬಸ್‌ಗಳ ಮೇಲೆ ಬರೆದ ಪುಂಡರು ಕೊಲ್ಹಾಪುರದಲ್ಲಿ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಪುಂಡಾಟಿಕೆ ಮೆರೆದಿದ್ದಾರೆ.
ಶಿವಸೇನೆ ಪುಂಡರು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕರ್ನಾಟಕ ಬಸ್ಗಳನ್ನ ಬಸ್ ನಿಲ್ದಾಣದಿಂದ ವಾಪಸ್ ಕಳುಹಿಸಿದರು.
ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಚುನಾವಣೆ ಬಹಿಷ್ಕಾರ ಇತ್ತ, ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧಾರ ಮಾಡಿರುವ ಘಟನೆ ಕಾಫಿನಾಡಲ್ಲಿ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾ.ಪಂ ವ್ಯಾಪ್ತಿಯ ಊರುಬಗೆ, ಸತ್ತಿಗನಹಳ್ಳಿ, ಬೈರಾಪುರ, ಹೊಸಕೆರೆ, ಗೌಡಹಳ್ಳಿ, ಮೇಕನಗದ್ದೆ, ಬಾಳೆಗದ್ದೆ, ಯು.ಹೊಸಳ್ಳಿ ಗ್ರಾಮಸ್ಥರಿಂದ ಗ್ರಾ.ಪಂ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಸೂಕ್ತ ಬೆಳೆ ಪರಿಹಾರ ಮತ್ತು ಕಾಡಾನೆಗಳ ಸ್ಥಳಾಂತರಕ್ಕೆ ಆಗ್ರಹ ಸಹ ಮಾಡಿದರು. ಇದೀಗ, ಜಿಲ್ಲಾಡಳಿತ ಮೇಲೆ ಮತ್ತೆ ಒತ್ತಡ ಹೇರಲು ಎಲೆಕ್ಷನ್ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ:ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ; ಮೇ 24 ರಿಂದ ಜೂನ್ 16 ರ ತನಕ ಪರೀಕ್ಷೆ
Published On - 5:05 pm, Fri, 12 March 21