ರಾಬರ್ಟ್ ಸಿನಿಮಾ ಪೈರಸಿ ಕಾಪಿ ಹರಿಬಿಟ್ಟ ವ್ಯಕ್ತಿ ಅರೆಸ್ಟ್​; ಪೊಲೀಸರಿಂದ ಖಡಕ್​ ವಾರ್ನಿಂಗ್​

ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸತತ ಮೂರು ದಿನಗಳಿಂದ ‘ರಾಬರ್ಟ್’​ ಸಿನಿಮಾವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಚಿತ್ರಮಂದಿರದ ಮಾಲೀಕರಿಗೆ ಸಂಶಯ ಬಂದಿದ್ದು, ಚಿತ್ರತಂಡಕ್ಕೆ ಮಾಹಿತಿ ನೀಡಿದ್ದಾರೆ. ಇಂದು ಕೂಡ ಒಂದೂವರೆ ಗಂಟೆ ಸಿನಿಮಾ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಸದ್ಯ ಪುಟ್ಟೇನಹಳ್ಳಿ ಠಾಣೆಯ ಪೊಲೀಸರಿಗೆ ಚಿತ್ರತಂಡ ಒಪ್ಪಸಿದೆ.

ರಾಬರ್ಟ್ ಸಿನಿಮಾ ಪೈರಸಿ ಕಾಪಿ ಹರಿಬಿಟ್ಟ ವ್ಯಕ್ತಿ ಅರೆಸ್ಟ್​; ಪೊಲೀಸರಿಂದ ಖಡಕ್​ ವಾರ್ನಿಂಗ್​
ಮಧು ಕೆ.ಬಿ
Follow us
preethi shettigar
| Updated By: ರಾಜೇಶ್ ದುಗ್ಗುಮನೆ

Updated on: Mar 13, 2021 | 3:38 PM

ಬೆಂಗಳೂರು: ಶಿವರಾತ್ರಿಯಂದು ಅದ್ದೂರಿಯಾಗಿ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಕನ್ನಡದಲ್ಲಿ ಅಷ್ಟೇ ಅಲ್ಲ ತೆಲುಗಿನಲ್ಲೂ ಕೂಡ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಮಧ್ಯೆಯೇ ಸಿನಿಮಾ ಪೈರಸಿಗೂ ಕೂಡ ಒಳಗಾಗಿತ್ತು. ಇದಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಅರೆಸ್ಟ್​​​ ಮಾಡಿದ್ದಾರೆ.

ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಸತತ ಮೂರು ದಿನಗಳಿಂದ ‘ರಾಬರ್ಟ್’​ ಸಿನಿಮಾವನ್ನು ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಚಿತ್ರಮಂದಿರದ ಮಾಲೀಕರಿಗೆ ಸಂಶಯ ಬಂದಿದ್ದು, ಚಿತ್ರತಂಡಕ್ಕೆ ಮಾಹಿತಿ ನೀಡಿದ್ದಾರೆ. ಇಂದು ಕೂಡ ಅದೇ ವ್ಯಕ್ತಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ರೆಕಾರ್ಡ್​ ಮಾಡುತ್ತಿದ್ದ. ಒಂದೂವರೆ ಗಂಟೆ ಸಿನಿಮಾ ರೆಕಾರ್ಡ್ ಕೂಡ ಆಗಿತ್ತು. ಈ ವ್ಯಕ್ತಿಯನ್ನು ಸದ್ಯ ಪುಟ್ಟೇನಹಳ್ಳಿ ಠಾಣೆಯ ಪೊಲೀಸರಿಗೆ ಚಿತ್ರತಂಡ ಒಪ್ಪಿಸಿದೆ.

ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲಗಳಿಗೆ ರಾಬರ್ಟ್‌ ಬೆಳ್ಳಿತೆರೆ ಮೇಲೆ ಉತ್ತರ ಕೊಟ್ಟಿದ್ದು, ದರ್ಶನ್‌ ಅಭಿಮಾನಿಗಳು ಮತ್ತು ಪ್ರೇಕ್ಷಕರು ಮೊದಲ ದಿನವೇ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ. ರಾಬರ್ಟ್‌ ಚಿತ್ರದ ಟಿಕೆಟ್‌ ಮುಂಗಡವಾಗೇ ಸೋಲ್ಡ್‌ ಔಟ್‌ ಆಗಿದ್ದರಿಂದ ಮೊದಲ ದಿನ ರಾಜ್ಯದೆಲ್ಲೆಡೆ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಂಡಿದ್ದವು.

ಕನ್ನಡ, ತೆಲುಗು ಸೇರಿದಂತೆ 1500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಬರ್ಟ್‌ ತೆರೆಕಂಡಿದೆ. ಮೊದಲ ದಿನ 20 ಕೋಟಿ ಗಡಿ ದಅಟಿರುವುದರಿಂದ ರಾಬರ್ಟ್‌ ಹೊಸ ದಾಖಲೆ ನಿರ್ಮಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಮಾತ್ರ 17 ಕೋಟಿ ಕಲೆಹಾಕಿದೆ.

ಇನ್ನು ಎರಡನೇ ದಿನ ವಿಕೇಂಡ್ ಆಗಿರುವುದರಿಂದ ರಾಬರ್ಟ್ ಅಬ್ಬರ ಜೋರಾಗಿ ಇತ್ತು. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡ ರಾಬರ್ಟ್ ಕರ್ನಾಟಕದಲ್ಲಿ 12 ಕೋಟಿಗು ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ 30 ಕೋಟಿ ಕ್ಲಬ್ ಸೇರಿದೆ ರಾಬರ್ಟ್ ಸಿನಿಮಾ.

ಹೀಗೆ ಗೆಲುವಿನ ಹಾದಿ ಹಿಡಿದಿರುವ ರಾಬರ್ಟ್​ಗೆ ಪೈರಸಿ ಕಂಟಕ ಶುರುವಾಗಿದೆ. ರಿಲೀಸ್‌ ಬೆನ್ನಲ್ಲೇ ರಾಬರ್ಟ್​ನ ಲಿಂಕ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2 ಸಾವಿರಕ್ಕೂ ಹೆಚ್ಚು ಲಿಂಕ್‌ ಸೃಷ್ಟಿ ಆಗಿವೆ. ಆದರೆ ಚಿತ್ರತಂಡಕ್ಕೆ ಇದರಿಂದ ಸದ್ಯ ಟೆನ್ಷನ್‌ ಇಲ್ಲ. ಎಕೆಂದರೆ ಚಿತ್ರತಂಡ ಪೈರಸಿ ವಿಚಾರವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿತ್ತು.

40 ಜನರ ಟೀಂ ರಾಬರ್ಟ್‌ ಚಿತ್ರದ ಪೈರೆಸಿ ತಡೆಗೆ ಕೆಲಸ ಮಾಡಿದೆ. ಹೀಗಾಗಿ ಪೈರಸಿ ಆಗಿರುವ ಲಿಂಕ್‌ನಲ್ಲಿ ಸಿನಿಮಾ ಪ್ರದರ್ಶನವಾಗಲು ಸಾಧ್ಯವಾಗುತ್ತಿಲ್ಲ.. ಸದ್ಯ ಚಿತ್ರತಂಡ ನಿಟ್ಟುಸಿರುಬಿಟ್ಟಿದೆ. ಒಟ್ಟಿನಲ್ಲಿ ಉತ್ತಮ ಚಿತ್ರಗಳಿಗೂ ಪೈರಸಿ ಭೂತ ಬೆನ್ನತ್ತಿದ್ದು, ಚಿತ್ರರಂಗವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆದರೆ ರಾಬರ್ಟ್ ಸಿನಿಮಾ ಅದೆಲ್ಲವನ್ನೂ ಮೀರಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ.

ಇದನ್ನೂ ಓದಿ: ಎರಡನೇ ದಿನವೂ ಬಾಕ್ಸ್​ ಆಫೀಸ್​ನಲ್ಲಿ ರಾಬರ್ಟ್​ ಹವಾ..ಮೂರೇ ದಿನಕ್ಕೆ 50 ಕೋಟಿ ದಾಟಲಿದೆ ಕಲೆಕ್ಷನ್​? 

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?