ಸಿಕ್ಕಿಬಿದ್ದ ‘ರಾಬರ್ಟ್​’ ಪೈರಸಿ ಮಾಡುತ್ತಿದ್ದ ವ್ಯಕ್ತಿ! ‘ದುಡ್ಡು ಕೊಟ್ಟರೆ ಹೊಸ ಕಾಪಿ ಶೇರ್ ಮಾಡ್ತೀನಿ’ ಎನ್ನುತ್ತಿದ್ದ ಆರೋಪಿ!

ಒಂದೆಡೆ ರಾಬರ್ಟ್​ ಸಿನಿಮಾ ಅದ್ಭುತ ಕಲೆಕ್ಷನ್​ ಮಾಡುತ್ತಿದೆ. ಇನ್ನೊಂದೆಡೆ ಪೈರಸಿ ಹಾವಳಿ ಶುರು ಆಗಿದೆ. ಪೈರಸಿ ಮಾಡುವ ವ್ಯಕ್ತಿಗಳನ್ನು ಚಿತ್ರತಂಡ ಪತ್ತೆ ಹಚ್ಚಿದೆ.

  • TV9 Web Team
  • Published On - 13:10 PM, 14 Mar 2021
ಸಿಕ್ಕಿಬಿದ್ದ ‘ರಾಬರ್ಟ್​’ ಪೈರಸಿ ಮಾಡುತ್ತಿದ್ದ ವ್ಯಕ್ತಿ! ‘ದುಡ್ಡು ಕೊಟ್ಟರೆ ಹೊಸ ಕಾಪಿ ಶೇರ್ ಮಾಡ್ತೀನಿ’ ಎನ್ನುತ್ತಿದ್ದ ಆರೋಪಿ!
ದರ್ಶನ್​ ರಾಬರ್ಟ್​ ಸಿನಿಮಾ ಪೋಸ್ಟರ್​

ಇನ್ನೇನು ಕನ್ನಡ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ ಎನ್ನವಾಗಲೇ ಒಂದು ದೊಡ್ಡ ಸಮಸ್ಯೆ ಕಾಡುತ್ತಿದೆ. ಅದುವೇ ಪೈರಸಿ. ಹೌದು, ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳು ಪೈರಸಿಗೆ ಬಲಿ ಆಗುತ್ತಿವೆ. ರಾಜ್ಯಾದ್ಯಂತ ಅಬ್ಬರಿಸುತ್ತಿರುವ ‘ರಾಬರ್ಟ್​’ ಸಿನಿಮಾ ಕೂಡ ಈ ಸಮಸ್ಯೆಯಿಂದ ಬಚಾವ್​ ಆಗಲು ಸಾಧ್ಯವಾಗಿಲ್ಲ. ಹಾಗಂತ ಚಿತ್ರತಂಡ ಕೈಕಟ್ಟಿ ಕುಳಿತಿಲ್ಲ.

ಪೈರಸಿ ಮಾಡುವವರನ್ನು ಪತ್ತೆ ಹಚ್ಚುವ ಕೆಲಸದಲ್ಲಿ ರಾಬರ್ಟ್​ ತಂಡದವರು ನಿರತರಾಗಿದ್ದಾರೆ. ಎಲ್ಲಿಂದ ಪೈರಸಿ ಆಗುತ್ತಿದೆ ಎಂಬುದನ್ನು ಕಂಡು ಹಿಡಿದು, ಅಂಥವರಿಗೆ ತಕ್ಕ ಪಾಠ ಕಲಿಸುವ ಕಾಯಕ ನಡೆಯುತ್ತಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಥಿಯೇಟರ್​ನಲ್ಲಿ ಚಿತ್ರದ ಪೈರಸಿ ಕಾಪಿ ಮಾರುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೆ, ಆತನ ವಿರುದ್ದ ಎಫ್​ಐಆರ್​ ಕೂಡ ದಾಖಲಿಸಲಾಗಿದೆ.

‘ಚಿತ್ರದ ಪೈರಸಿ ಕಾಪಿಯನ್ನು ತನ್ನ ಮೊಬೈಲ್​ನಲ್ಲಿ ಸೆರೆಹಿಡಿದು ಇಟ್ಟುಕೊಂಡು, ರಾಬರ್ಟ್ ಚಿತ್ರವನ್ನು ನೋಡಲು ಬರುವ ಜನರ ಬಳಿ ನನ್ನತ್ರ ರಾಬರ್ಟ್ ಚಿತ್ರದ ಹೊಸ ಕಾಪಿ ಇದೆ ದುಡ್ಡು ಕೊಟ್ಟರೆ ನಿಮಗೆ ಶೇರ್​ ಮಾಡುತ್ತೇನೆ ಎಂದು ಹೇಳಿ ಹಲವರ ಬಳಿ ಶೇರ್ ಮಾಡಿ ದುಡ್ಡು ಪಡೆದು ಹಂಚುತ್ತಿರುವುದು ನಮ್ಮ ರಾಬರ್ಟ್ ಚಿತ್ರತಂಡದ ಗಮನಕ್ಕೆ ಬಂತು. ಆರೋಪಿಯನ್ನು ಹಿಡಿದು ವಿಚಾರಿಸಿದಾಗ ಇವನ ಜೊತೆ ಇನ್ನೂ ಇಬ್ಬರು ಸೇರಿ ಪೈರಸಿ ಮಾಡಿ ಅದನ್ನು ಶೇರ್ ಮಾಡಿ ಹಣ ಪಡೆದಿರುವ ಬಗ್ಗೆ ತಿಳಿದ ಮೇಲೆ ವಿಶ್ವನಾಥ ಎಂಬ ವ್ಯಕ್ತಿಯನ್ನು ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಒಪ್ಪಿಸಿ, ದೂರು ನೀಡಿರುತ್ತೇವೆ. ಈತನ ವಿರುದ್ಧ ಎಫ್ಐಆರ್ ದಾಖಲಾಗಿದೆ’ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಪೈರಸಿ ಹಾವಳಿ ಏನೇ ಇದ್ದರೂ ಭರ್ಜರಿ ಕಮಾಯಿ ಮಾಡುವಲ್ಲಿ ರಾಬರ್ಟ್​ ಸಿನಿಮಾ ಹಿಂದೆ ಬಿದ್ದಿಲ್ಲ. ಮೊದಲ ಮೂರು ದಿನ ಎಲ್ಲ ಕಡೆ ಹೌಸ್​ ಫುಲ್​ ಪ್ರದರ್ಶನ ಕಂಡಿದೆ. ಪರಿಣಾಮವಾಗಿ ಅಂದಾಜು 47.33 ಕೋಟಿ ರೂ. ಕಲೆಕ್ಷನ್​ ಆಗಿದೆ. ಇದರಲ್ಲಿ ಮೊದಲ ದಿನ ತೆಲುಗು ವರ್ಷನ್​ ಮಾಡಿದ ಗಳಿಕೆ ಕೂಡ ಸೇರಿದೆ. ಎರಡು ಮತ್ತು ಮೂರನೇ ದಿನ ತೆಲುಗು ವರ್ಷನ್​ನಿಂದ ಎಷ್ಟು ಆದಾಯ ಬಂದಿದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಭಾನುವಾರ (ಮಾ.14) ಕೂಡ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿದ್ದು ದೊಡ್ಡ ಮಟ್ಟದ ಕಲೆಕ್ಷನ್​ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Roberrt Piracy : ‘ರಾಬರ್ಟ್​’ ಚಿತ್ರದ 3 ಸಾವಿರ ಪೈರಸಿ ಲಿಂಕ್​ ಪತ್ತೆ! ದರ್ಶನ್​ ಸಿನಿಮಾ ಮೇಲೆ ಕಿಡಿಗೇಡಿಗಳ ಕಣ್ಣು

Roberrt Collection: ಅಬ್ಬಬ್ಬಾ…! ರಾಬರ್ಟ್​ 3ನೇ ದಿನದ ಕಲೆಕ್ಷನ್​ ಇಷ್ಟೊಂದಾ? 50 ಕೋಟಿಗೆ ಕೆಲವೇ ನಂಬರ್​ ಬಾಕಿ!