ಎಲ್ಲಾ ಪಾತ್ರಗಳನ್ನೂ ನಾನೇ ಮಾಡೋಕಾಗಲ್ಲ; ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗೆ ಅಂದಿದ್ಯಾಕೆ?
ಸಿನಿಮಾ ಯಶಸ್ಸಿನ ಬಗ್ಗೆ ದರ್ಶನ್ ಅವರು ಇದೇ ಮೊದಲ ಬಾರಿಗೆ ಟಿವಿ9 ಕನ್ನಡದ ಜತೆಗೆ ಎಕ್ಸ್ಕ್ಲ್ಯೂಸಿವ್ ಆಗಿ ಮಾತನಾಡಿದ್ದಾರೆ. ಈ ವೇಳೆ, ಅವರು ಸಾಕಷ್ಟು ವಿಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದೆ. ನಿತ್ಯ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎನ್ನುವ ಕೀರ್ತಿಗೆ ಭಾಜನವಾಗಿದೆ. ಸಿನಿಮಾ ಯಶಸ್ಸಿನ ಬಗ್ಗೆ ದರ್ಶನ್ ಅವರು ಇದೇ ಮೊದಲ ಬಾರಿಗೆ ಟಿವಿ9 ಕನ್ನಡದ ಜತೆಗೆ ಎಕ್ಸ್ಕ್ಲ್ಯೂಸಿವ್ ಆಗಿ ಮಾತನಾಡಿದ್ದಾರೆ. ಈ ವೇಳೆ ಅವರು ಸಾಕಷ್ಟು ವಿಚಾರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಜತೆಗೆ ಸಾಕಷ್ಟು ಪಾತ್ರಗಳು ಹೈಲೈಟ್ ಆಗಿವೆ. ವಿನೋದ್ ಪ್ರಭಾಕರ್ ಪಾತ್ರವೂ ಹೆಚ್ಚು ತೂಕ ಹೊಂದಿದೆ. ವಿನೋದ್ ಪ್ರಭಾಕರ್ ಮತ್ತು ದರ್ಶನ್ ಕಾಂಬಿನೇಷನ್ ಬಗ್ಗೆ ಕೇಳಿದ ಪ್ರಶ್ನೆಗೆ ದರ್ಶನ್ ಉತ್ತರಿಸಿದ್ದಾರೆ. ಸಿನಿಮಾ ಎಂಬುದು ಒನ್ ಮ್ಯಾನ್ ಶೋ ಅಲ್ಲ. ಎಲ್ಲಾ ಪಾತ್ರಗಳು ದರ್ಶನ್ ಮಾಡೋಕೆ ಆಗಲ್ಲ. ಯಾವ ದೃಶ್ಯದಲ್ಲಿ ಯಾರು ಹೈಲೈಟ್ ಆಗಬೇಕೋ ಅವರೇ ಹೈಲೈಟ್ ಆಗಬೇಕು. ಅಂದಾಗ ಮಾತ್ರ ಸಿನಿಮಾ ಯಶಸ್ಸು ಕಾಣುತ್ತದೆ ಎಂದು ದರ್ಶನ್ ಹೇಳಿದ್ದಾರೆ.
ಚಿತ್ರಮಂದಿರಕ್ಕೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಕಾಲಿಡುತ್ತಿದ್ದಾರೆ. ಈ ಬಗ್ಗೆ ದರ್ಶನ್ ಮಾತನಾಡಿದ್ದಾರೆ. ಸಿನಿಮಾವನ್ನು ಜನರು ನೋಡಿ ಖುಷಿಪಡುತ್ತಿದ್ದಾರೆ. ಈ ಎಲ್ಲಾ ಕ್ರೆಡಿಟ್ಅನ್ನು ನಾನು ಜನರಿಗೆ ನೀಡುತ್ತೇನೆ. ನನ್ನ ಎರಡು ಭಿನ್ನ ಪಾತ್ರಗಳನ್ನು ಹುಟ್ಟಿ ಹಾಕಿದ್ದು ನಿರ್ದೇಶಕ ತರುಣ್ ಸುಧೀರ್. ಅವರನ್ನೂ ನಾನು ಹೊಗಳಲೇ ಬೇಕು ಎಂದು ದರ್ಶನ್ ಹೇಳಿದ್ದಾರೆ.
ತೆಲುಗು ನಾಡಿನಲ್ಲೂ ರಾಬರ್ಟ್ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ದರ್ಶನ್ ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆಯೂ ದರ್ಶನ್ ಖುಷಿ ಹಂಚಿಕೊಂಡಿದ್ದಾರೆ. ಈ ಹಿಂದೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್ ಅವರು ರಾಬರ್ಟ್ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್ ಅವರು ಹೊಸ ಕಥೆ ಬರೆದು ‘ರಾಬರ್ಟ್’ ಸಿನಿಮಾ ಮಾಡಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ರವಿಶಂಕರ್, ಸೋನಲ್ ಮಂಥೆರೋ, ಚಿಕ್ಕಣ್ಣ, ಅವಿನಾಶ್, ದೇವರಾಜ್, ಶಿವರಾಜ್ ಕೆ.ಆರ್. ಪೇಟೆ, ಐಶ್ವರ್ಯಾ ಪ್ರಸಾದ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Roberrt Kannada Movie Review: ಒಂದೇ ಟಿಕೆಟ್ನಲ್ಲಿ ದರ್ಶನ್ ಫ್ಯಾನ್ಸ್ಗೆ ರಾಬರ್ಟ್ ಮತ್ತು ರಾಘವನ ಡಬಲ್ ಧಮಾಕಾ!