Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2: ಹಾಲಿವುಡ್​ ಸಿನಿಮಾದಲ್ಲಿ ಕೆಜಿಎಫ್​-2 ಡೈಲಾಗ್? ಏನಿದರ ಹಿಂದಿನ ರಹಸ್ಯ

ಕೆಜಿಎಫ್​-2 ಸಿನಿಮಾದ ಟೀಸರ್​ ಸಾಕಷ್ಟು ದಾಖಲೆಗಳನ್ನು ಮಾಡಿತ್ತು. ಈ ಟೀಸರ್​ ಸೃಷ್ಟಿಸಿದ ಹವಾ ನೋಡಿಯೇ ಸಿನಿಮಾ ಮೇಲೆ ಎಷ್ಟು ನಿರೀಕ್ಷೆ ಇದೆ ಎನ್ನುವ ವಿಚಾರ ಸ್ಪಷ್ಟವಾಗಿತ್ತು.

KGF Chapter 2: ಹಾಲಿವುಡ್​ ಸಿನಿಮಾದಲ್ಲಿ ಕೆಜಿಎಫ್​-2 ಡೈಲಾಗ್? ಏನಿದರ ಹಿಂದಿನ ರಹಸ್ಯ
ಯಶ್
Follow us
ರಾಜೇಶ್ ದುಗ್ಗುಮನೆ
|

Updated on: Mar 15, 2021 | 4:32 PM

ಕೆಜಿಎಫ್​ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಕೆಜಿಎಫ್​-2 ಚಿತ್ರ ಜುಲೈನಲ್ಲಿ ತೆರೆಗೆ ಬರಲಿದ್ದು ಮತ್ತೊಂದು ಹೊಸ ದಾಖಲೆ ಸೃಷ್ಟಿ ಮಾಡುವ ಲಕ್ಷಣ ಎದ್ದು ಕಾಣುತ್ತಿದೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೆ ಬಾಲಿವುಡ್​, ಟಾಲಿವುಡ್​ನಲ್ಲೂ ಕೆಜಿಎಫ್​-2 ಸಿನಿಮಾ ಬಗ್ಗೆ ಚರ್ಚೆ ಆಗುತ್ತಿದೆ. ಈಗ ಹಾಲಿವುಡ್​ ಅಂಗಳದಲ್ಲೂ ಕೆಜಿಎಫ್​-2  ಸದ್ದು ಮಾಡುತ್ತಿದೆ.

ಯಶ್​ ಜನ್ಮದಿನದ ಅಂಗವಾಗಿ ಕೆಜಿಎಫ್​-2 ಸಿನಿಮಾದ ಟೀಸರ್​ ರಿಲೀಸ್​ ಆಗಿತ್ತು. ಈ ಟೀಸರ್​ ಸಾಕಷ್ಟು ದಾಖಲೆಗಳನ್ನು ಕೂಡ ಮಾಡಿತ್ತು. ಈ ಟೀಸರ್​ ಸೃಷ್ಟಿಸಿದ ಹವಾ ನೋಡಿಯೇ ಸಿನಿಮಾ ಮೇಲೆ ಎಷ್ಟು ನಿರೀಕ್ಷೆ ಇದೆ ಎನ್ನುವ ವಿಚಾರ ಸ್ಪಷ್ಟವಾಗಿತ್ತು. ಈ ಟೀಸರ್​ನಲ್ಲಿ A promise was made, and That Promise will be kept.. ಎನ್ನುವ ಡೈಲಾಗ್​ ಬಂದಿತ್ತು. ಈ ಡೈಲಾಗ್​ ಸಾಕಷ್ಟು ವೈರಲ್​ ಆಗಿತ್ತು. ಇದನ್ನು ಹಾಲಿವುಡ್​ ಮಂದಿ ಕೂಡ ಬಳಕೆ ಮಾಡಿಕೊಂಡಂತಿದೆ.

ಗಾಡ್ಜಿಲಾ vs ಕಾಂಗ್​ ಸಿನಿಮಾ ಎಚ್​ಬಿಒ ಮ್ಯಾಕ್ಸ್​ನಲ್ಲಿ ಮಾರ್ಚ್​ 31ರಂದು ರಿಲೀಸ್​ ಆಗುತ್ತಿದೆ. ಈ ಸಿನಿಮಾ ರಿಲೀಸ್​ ಆಗುವುದಕ್ಕೂ ಮುನ್ನ ಚಿತ್ರತಂಡ ಟ್ವೀಟ್​ ಒಂದನ್ನು ಮಾಡಿದೆ. ಅದರಲ್ಲಿ A promise was made, and it will be kept.. ಎಂದು ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಅಂದಹಾಗೆ, ಇದು ಕೆಜಿಎಫ್​ ಡೈಲಾಗ್​ ಅಲ್ಲ. ಕೆಜಿಎಫ್​ ಸಿನಿಮಾದಲ್ಲೇ ಇದು ಮೊದಲು ಬಳಕೆ ಆಗಿಯೂ ಇಲ್ಲ. ಇಂಗ್ಲಿಷ್​ನಲ್ಲಿ ಇದು ಹೆಚ್ಚು ಬಳಕೆಯಲ್ಲಿರುವ ವಾಕ್ಯ (Saying). ಇದನ್ನು ಕೆಜಿಎಫ್​-2ನಲ್ಲಿ ಬಳಕೆ ಮಾಡಲಾಗಿತ್ತು. ಅದನ್ನೇ, ಗಾಡ್ಜಿಲಾ vs ಕಾಂಗ್​ ಸಿನಿಮಾ ತಂಡ ಕೂಡ ಬಳಕೆ ಮಾಡಿಕೊಂಡಿದೆ ಅಷ್ಟೇ.

ಇದನ್ನೂ ಓದಿ: Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್​ ಚಾಪ್ಟರ್​ 2’

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು