AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಗಾ ಅಣು ವಿದ್ಯುತ್ ಯೋಜನೆಗೆ ಮೇಕ್​​ ಇನ್​ ಇಂಡಿಯಾ ಬಲ: 5 ಮತ್ತು 6ನೇ ಘಟಕಗಳಿಗೆ ಸ್ವದೇಶಿ ತಂತ್ರಜ್ಞಾನದ ರಿಯಾಕ್ಟರ್‌ಗಳ ಬಳಕೆ

ಉತ್ತರ ಕನ್ನಡದ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ಕಾಮಗಾರಿ ಆರಂಭವಾಗಿದೆ. 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 700 ಮೆಗಾವಾಟ್ ಸಾಮರ್ಥ್ಯದ ರಿಯಾಕ್ಟರ್‌ಗಳನ್ನು ಇಲ್ಲಿ ಬಳಸಲಾಗುತ್ತಿದೆ. ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಈ ಘಟಕಗಳ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು, ಇದರಿಂದ ಕೈಗಾ ಅಣು ವಿದ್ಯುತ್​ ಸ್ಥಾವರದ ಉತ್ಪಾದನಾ ಸಾಮರ್ಥ್ಯ 2,280 ಮೆಗಾವಾಟ್‌ಗೆ ಏರಿಕೆ ಆಗಲಿದೆ ಎನ್ನಲಾಗಿದೆ.

ಕೈಗಾ ಅಣು ವಿದ್ಯುತ್ ಯೋಜನೆಗೆ ಮೇಕ್​​ ಇನ್​ ಇಂಡಿಯಾ ಬಲ:  5 ಮತ್ತು 6ನೇ ಘಟಕಗಳಿಗೆ ಸ್ವದೇಶಿ ತಂತ್ರಜ್ಞಾನದ ರಿಯಾಕ್ಟರ್‌ಗಳ ಬಳಕೆ
ನೂತನ ಘಟಕಗಳ ನಿರ್ಮಾಣ ಕಾಮಗಾರಿ
ಪ್ರಸನ್ನ ಹೆಗಡೆ
|

Updated on:Mar 02, 2026 | 2:24 PM

Share

ಬೆಂಗಳೂರು, ಮಾರ್ಚ್​​ 2: ರಕ್ಷಣಾ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿದ್ದ ಮೇಕ್​​ ಇನ್​ ಇಂಡಿಯಾ ಯೋಜನೆ ಈಗ ಅಣುಶಕ್ತಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಈ ಘಟಕಗಳಲ್ಲಿ ಸ್ಥಾಪನೆಯಾಗುವ ರಿಯಾಕ್ಟರ್‌ಗಳು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿವೆ ಎನ್ನುವುದು ವಿಶೇಷ. ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಈ ಘಟಕಗಳ ನಿರ್ಮಾಣ ಜವಾಬ್ದಾರಿ ಹೊತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೈಗಾ ಘಟಕದ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ , 700 ಮೆಗಾವಾಟ್ ಸಾಮರ್ಥ್ಯದ ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳನ್ನು ಮೇಕ್​​ ಇನ್​ ಇಂಡಿಯಾ ಯೋಜನೆಯಡಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಫ್ಲೀಟ್ ಮೋಡ್‌ನಲ್ಲಿ 10 ಅಣು ವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 700 ಮೆಗಾವಾಟ್ ರಿಯಾಕ್ಟರ್‌ಗಳನ್ನು ಗುಜರಾತ್, ರಾಜಸ್ಥಾನ ಹಾಗೂ ಕರ್ನಾಟಕ ರಾಜ್ಯಗಳಿಗೆಂದು ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ಮೊದಲ ಬಾರಿಗೆ ಸ್ವದೇಶೀ ರಿಯಾಕ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಹಳೆಯ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಉತ್ಪಾದಿತ ವಿದ್ಯುತ್‌ನ ಶೇ.20ರಷ್ಟು ಪಾಲು ಸಿಗುತ್ತಿತ್ತು. ಆದರೆ ಹೊಸ ಯೋಜನೆಯಡಿ ರಾಜ್ಯಕ್ಕೆ ಶೇ.50ರಷ್ಟು ಪಾಲು ದೊರೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ಡಬಲ್ ಗುಡ್​​​ ನ್ಯೂಸ್​​ ನೀಡಿದ ರೈಲ್ವೆ ಇಲಾಖೆ

ಪ್ರಸ್ತುತ ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಾಪಿತ ಸಾಮರ್ಥ್ಯ 880 ಮೆಗಾವಾಟ್ ಆಗಿದ್ದು, 5 ಮತ್ತು 6ನೇ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಬಳಿಕ ಇದು 2,280 ಮೆಗಾವಾಟ್‌ಗೆ ಹೆಚ್ಚಲಿದೆ. ಕರ್ನಾಟಕದಲ್ಲಿ ಇನ್ನೂ 7,000 ಮೆಗಾವಾಟ್ ಸಾಮರ್ಥ್ಯ ಹೆಚ್ಚಿಸಲು ಸಿದ್ಧತೆ ನಡೆದಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಕರ್ನಾಟಕಕ್ಕೆ ಮತ್ತೊಂದು ಮಹತ್ವದ ಅಣು ವಿದ್ಯುತ್ ಯೋಜನೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನೂತನ ಘಟಕಗಳ ಕಾಮಗಾರಿಗೆ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್​​ ಕುಮಅರ್​ ಮೊಹಾಂತಿ ಹಾಗೂ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ Nuclear Power Corporation of India Limited (NPCIL) ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್ ಉಪಸ್ಥಿತರಿದ್ದರು. ಈ ಘಟಕಗಳು ಮುಂದಿನ 5 ವರ್ಷಗಳಲ್ಲಿ ಪೂರ್ಣ ಪ್ರಮಾಣದ ಕಾರ್ಯನಿರ್ವಹಣೆಯ ಗುರಿ ಹೊಂದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:40 am, Mon, 2 March 26

Follow Us
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: ಸಿಎಂ ಡಿಕೆ ಶಿವಕುಮಾರ್​​ ಮಹತ್ವದ ಸಂದೇಶ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ಗೋಡೆಕೆರೆ ಗೇಟ್‌ ಬಳಿಯ ಅಪಘಾತದಲ್ಲಿ ಸಾವಿಗೀಡಾದವ್ರ ಒಂದೊಂದು ಕಥೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ನಟ ಚಿಕ್ಕಣ್ಣ ಮದುವೆ: ಡಾಲಿ, ಮಂಡ್ಯ ರಮೇಶ್, ಎ.ಪಿ. ಅರ್ಜುನ್ ಶುಭ ಹಾರೈಕೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 31 ರಿಂದ ಸೆಪ್ಟೆಂಬರ್​​ 6 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ನೇಪಾಳ ಪ್ರವಾಹ: ಸಾವಿನ ದವಡೆಯಿಂದ ಪಾರಾಗಿ 54 ಕನ್ನಡಿಗರು ವಾಪಸ್​​
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ವ್ಯಾಪಾರ, ವ್ಯವಹಾರಗಳಲ್ಲಿ ಜಾಗೃತರಾಗಿರಿ
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
'ಭಾರತದಲ್ಲಿ ಮುಸ್ಲಿಮರಿರಬಾರದು ಎನ್ನುವವರು ಹಿಂದೂಗಳೇ ಅಲ್ಲ'; ಮೋಹನ್ ಭಾಗವತ್
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನೇಪಾಳದ ಪ್ರವಾಹ ಸಂತ್ರಸ್ತರಿಗಾಗಿ ಅಡುಗೆ ಮಾಡಿಕೊಟ್ಟ ಸೈನಿಕರು
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
ನಟ ಚಿಕ್ಕಣ್ಣ ಮದುವೆ ಆರತಕ್ಷತೆ ಸಂಭ್ರಮ: ವಿಡಿಯೋ ನೋಡಿ
ಮುಂಬೈನಲ್ಲಿ ‘ಟಾಕ್ಸಿಕ್’ ಬಗ್ಗೆ ಕೇಳಲಾದ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ
ಮುಂಬೈನಲ್ಲಿ ‘ಟಾಕ್ಸಿಕ್’ ಬಗ್ಗೆ ಕೇಳಲಾದ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರ