AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆಯವನ ಕೆಲಸವೇ ಹೋಯ್ತು! ಬೆಂಗಳೂರು ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ ಗೊತ್ತೇ!

ಈಗ ಎಲ್ಲ ಕ್ಷೇತ್ರಗಳಲ್ಲೂ ಕೃತಕಬುದ್ಧಿಮತ್ತೆಯದ್ದಾ ಹವಾ. ಏನು ಬೇಕಿದ್ದರೂ ಎಐ ಮಾಡಿಕೊಡುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಥದ್ದರಲ್ಲಿ ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರ ‘ಎಐ ರೂಮ್​ಮೇಟ್’ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸದ್ದು ಮಾಡುತ್ತಿದೆ. ಅಡುಗೆಯಾತ ಹಣ್ಣು, ತರಕಾರಿ ಕಳ್ಳತನ ಮಾಡುತ್ತಿದ್ದುದನ್ನು ‘ಎಐ ರೂಮ್​ಮೇಟ್’ ಪತ್ತೆ ಮಾಡಿದೆ. ಹಾಗಾದರೆ, ಎಐ ರೂಮ್​ಮೇಟ್ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ? ಇಲ್ಲಿದೆ ಮಾಹಿತಿ.

ಅಡುಗೆಯವನ ಕೆಲಸವೇ ಹೋಯ್ತು! ಬೆಂಗಳೂರು ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ ಗೊತ್ತೇ!
ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ?Image Credit source: X/@the2ndfloorguy
ಗಣಪತಿ ಶರ್ಮಾ
|

Updated on: Mar 02, 2026 | 11:06 AM

Share

ಬೆಂಗಳೂರು, ಮಾರ್ಚ್​ 2: ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿರುವುದನ್ನು ಎಐ ರೂಮ್​ಮೇಟ್ (AI Roommate) ಪತ್ತೆಹಚ್ಚಿ ತಿಳಿಸಿದ್ದು, ಟೆಕ್ಕಿಯೊಬ್ಬರು ಆತನನ್ನು ಕೆಲಸದಿಂದಲೇ ತೆಗೆದುಹಾಕಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ ಎಂದು ವರದಿಯಾಗಿದೆ. ನಗರದ ಟೆಕ್ಕಿ ಪಂಕಜ್ (ಸಾಮಾಜಿಕ ಜಾಲತಾಣ ಪೋಸ್ಟ್​ನಲ್ಲಿರುವಂತೆ) ಮನೆಯ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸಲು ‘AI ರೂಮ್​ಮೇಟ್’ ಎನ್ನುವ ವ್ಯವಸ್ಥೆಯನ್ನು ಬಳಸುತ್ತಿದ್ದರು. ಅಡುಗೆಯಾತ ಫ್ರಿಡ್ಜ್‌ನಿಂದ ಸೇಬು, ಬಾಳೆಹಣ್ಣು ಮತ್ತು ಬೆರಿಹಣ್ಣುಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಅನುಮಾನ ಅವರಲ್ಲಿ ಮೂಡಿತ್ತು. ಕನಿಷ್ಠ ಮೂರು ವಿಭಿನ್ನ ಸಂದರ್ಭಗಳಲ್ಲಿ ಹಣ್ಣುಗಳನ್ನು ಕದಿಯುತ್ತಿರುವುದನ್ನು AI ರೂಮ್​ಮೇಟ್ ಪತ್ತೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಪಂಕಜ್, ‘ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿದ್ದ. ಹೀಗಾಗಿ ಅಡುಗೆ ಮನೆಯಲ್ಲಿ AI ರೂಮ್‌ಮೇಟ್ ನಿಯೋಜಿಸಿದ್ದೆ. ಅದು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈ ವಾರ ಎರಡು ಬಾರಿ ಹಿಡಿದಿದ್ದೇನೆ. ಹೀಗಾಗಿ ಕೆಲಸದಿಂದ ತೆಗೆದುಹಾಕಿದೆ ಎಂದು ಬರೆದಿದ್ದಾರೆ.

ಪಂಕಜ್ ಎಕ್ಸ್ ಪೋಸ್ಟ್

AI ರೂಮ್‌ಮೇಟ್ ಎಂದರೇನು?

ಪಂಕಜ್ ಉಲ್ಲೇಖಿಸಿರುವ AI ರೂಮ್‌ಮೇಟ್ ಎಂದರೆ AI ಚಾಟ್‌ಬಾಟ್ ಹೊಂದಿರುವ ಕಣ್ಗಾವಲು ಕ್ಯಾಮರಾ ವ್ಯವಸ್ಥೆ. ಅಡುಗೆಯಾತ ಕೆಲಸದಲ್ಲಿರುವ ಸಮಯದಲ್ಲಿ ಈ ವ್ಯವಸ್ಥೆ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸುತ್ತದೆ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಲೀಕರಿಗೆ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ.

AI ಚಾಟ್‌ಬಾಟ್‌ನೊಂದಿಗೆ ಪಂಕಜ್ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಅಡುಗೆಯಾತ ಯಾವ ಸಮಯಕ್ಕೆ ಮನೆಗೆ ಬಂದ, ಎಷ್ಟು ಬಾರಿ ಫ್ರಿಡ್ಜ್ ತೆರೆದ, ಏನು ತೆಗೆದುಕೊಂಡ ಎಂಬುದರ ಜೊತೆಗೆ ಅಡುಗೆ ಮಾಡುವ ಮೊದಲು ಎಷ್ಟು ಬಾರಿ ಕೈ ತೊಳೆದ, ಅಡುಗೆಮನೆಯನ್ನು ಎಷ್ಟು ಸ್ವಚ್ಛಗೊಳಿಸಿದ ಎಂಬುದನ್ನೂ ಟ್ರ್ಯಾಕ್ ಮಾಡಲಾಗಿದೆ.

AI ರೂಮ್‌ಮೇಟ್ ಹೇಳಿದ್ದೇನು?

ಒಂದು ಸಂದರ್ಭದಲ್ಲಂತೂ AI ರೂಮ್‌ಮೇಟ್, ಆತ ಸಂಜೆ 7:12ಕ್ಕೆ ಬಂದ. ಮೊದಲಿಗೆ ಫ್ರಿಡ್ಜ್ ತೆರೆದು ಎರಡು ಸೇಬುಗಳನ್ನು ತೆಗೆದು ತನ್ನ ಚೀಲದಲ್ಲಿ ಇಟ್ಟ. ಬಳಿಕ ಅಡುಗೆ ಪ್ರಾರಂಭಿಸಿದ ಎಂದು ಸಂದೇಶ ಕಳುಹಿಸಿರುವುದನ್ನು ಪಂಕಜ್ ಹಂಚಿಕೊಂಡಿದ್ದಾರೆ.

ಇನ್ನೊಂದು ಬಾರಿ, ಈ ವಾರ ಅಡುಗೆ ಮಾಡುವ ಮೊದಲು ನಾಲ್ಕು ಬಾರಿ ಫ್ರಿಡ್ಜ್ ತೆರೆಯಲಾಗಿದೆ. ಮೂರು ಸೇಬುಗಳು ಕಾಣೆಯಾಗಿವೆ. ಮಂಗಳವಾರದ ಬಾಳೆಹಣ್ಣು ಇಲ್ಲ. ಗುರುವಾರ ಬ್ಲೂಬೆರ್ರಿ ತಿನ್ನುತ್ತಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಖಾಸಗಿತನ ಕಾಪಾಡುತ್ತಾ AI ರೂಮ್‌ಮೇಟ್?

AI ರೂಮ್‌ಮೇಟ್ ಸಿಸಿಟಿವಿ ಕ್ಯಾಮರಾ ಮೂಲಕ ಕೊಠಡಿಯನ್ನು ನಿರಂತರವಾಗಿ ಗಮನಿಸುತ್ತದೆ. ಬಳಕೆದಾರರ ಗೌಪ್ಯತೆಯನ್ನು ಕೂಡ ರಕ್ಷಿಸುತ್ತದೆ. ಅಂದರೆ, ಮೊದಲು ಮುಖಗಳನ್ನು ರೆಕಾರ್ಡ್ ಮಾಡಿಕೊಂಡು ನಂತರ ಬ್ಲರ್ ಮಾಡುತ್ತದೆ. ಬಳಿಕ ಮಸುಕಾದ ವೀಡಿಯೊವನ್ನು ವಿಶ್ಲೇಷಣೆಗಾಗಿ ವಿಷನ್ AI ಮಾದರಿಗೆ ಕಳುಹಿಸುತ್ತದೆ. ಆ ವಿಶ್ಲೇಷಣೆಯ ಆಧಾರದ ಮೇಲೆ ಟೆಕ್ಷ್ಟ್ ರೂಪದಲ್ಲಿ ಸಂದೇಶ ಕಳುಹಿಸುತ್ತದೆ.

ಇದನ್ನೂ ಓದಿ: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ

ಸದ್ಯ ಬೆಂಗಳೂರು ಟೆಕ್ಕಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ತಂತ್ರಜ್ಞಾನ ಬಳಕೆ ಮೂಲಕ ಕಳ್ಳತನ ಪತ್ತೆಹಚ್ಚಿದುದನ್ನು ಸಮರ್ಥಿಸುತ್ತಿದ್ದರೆ, ಇನ್ನು ಕೆಲವರು ಮನೆ ಕೆಲಸಗಾರರ ಮೇಲಿನ ಇಂತಹ AI ಕಣ್ಗಾವಲು ಗೌಪ್ಯತೆ ಮತ್ತು ನೈತಿಕತೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು