AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: 3ನೇ ದಿನದಾಟದ 2ನೇ ಸೆಷನ್ ಶ್ರೀಲಂಕಾ ಪಾಲು

India vs Sri Lanka Test: ಗಾಲೆ ಟೆಸ್ಟ್‌ನ ಮೂರನೇ ದಿನ ಶ್ರೀಲಂಕಾ 214/5 ರನ್ ಗಳಿಸಿ ತಿರುಗೇಟು ನೀಡಿದೆ. ಸೋನಲ್ ದಿನುಷಾ (62*) ಮತ್ತು ನಿರೋಷನ್ ಡಿಕ್ವೆಲ್ಲಾ (71*) ಶತಕದ ಜೊತೆಯಾಟವಾಡಿ ಭಾರತಕ್ಕೆ ಒತ್ತಡ ತಂದಿದ್ದಾರೆ. ಮೊಹಮ್ಮದ್ ಸಿರಾಜ್ ಮತ್ತು ಮಾನವ್ ಸುತಾರ್ ವಿಕೆಟ್ ಪಡೆದರೂ, ಕೆ.ಎಲ್. ರಾಹುಲ್ ಕ್ಯಾಚ್ ಕೈಬಿಟ್ಟಿದ್ದು ಶ್ರೀಲಂಕಾಕ್ಕೆ ವರದಾನವಾಯಿತು. ಭಾರತ ಇನ್ನೂ 248 ರನ್‌ಗಳ ಮುನ್ನಡೆಯಲ್ಲಿದೆ.

IND vs SL: 3ನೇ ದಿನದಾಟದ 2ನೇ ಸೆಷನ್ ಶ್ರೀಲಂಕಾ ಪಾಲು
Srilanka
ಪೃಥ್ವಿಶಂಕರ
|

Updated on:Aug 17, 2026 | 3:37 PM

Share

ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಎರಡನೇ ಸೆಷನ್​ನಲ್ಲಿ ಶ್ರೀಲಂಕಾ ತಂಡ ಭರ್ಜರಿ ಪುನರಾಗಮನ ಮಾಡಿದೆ. ಹೀಗಾಗಿ ಚಹಾ ವಿರಾಮದ ವೇಳೆಗೆ ಶ್ರೀಲಂಕಾ 57 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 214 ರನ್ ಗಳಿಸಿದೆ. ಆದಾಗ್ಯೂ ಟೀಂ ಇಂಡಿಯಾ 248 ರನ್‌ಗಳ ಮುನ್ನಡೆಯಲ್ಲಿದೆ. ಲಂಕಾ ಪರ ಸೋನಲ್ ದಿನುಷಾ 62 ರನ್ ಮತ್ತು ನಿರೋಷನ್ ಡಿಕ್ವೆಲ್ಲಾ 71 ರನ್ ಗಳಿಸಿ ಕ್ರೀಸ್​​ನಲ್ಲಿದ್ದಾರೆ.

ಆರಂಭದಲ್ಲಿ ಭಾರತದ ಮೇಲುಗೈ

ಮೂರನೇ ದಿನದಂದು ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್​ನ ಎರಡನೇ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಮೊದಲ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಿಸಿಕೊಟ್ಟರು. ಆ ಬಳಿಕ ಬಂದ ಮಾನವ್ ಸುತಾರ್ ಕೂಡ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಈ ಎರಡು ಸೆಷನ್​ಗಳಲ್ಲಿ ಭಾರತ 5 ಬೌಲರ್‌ಗಳನ್ನು ಬಳಸಿಕೊಂಡಿತು. ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ, ಎಲ್ಲರೂ ವಿಕೆಟ್ ಪಡೆದರು.

6ನೇ ವಿಕೆಟ್​ಗೆ ಶತಕದ ಜೊತೆಯಾಟ

ಆದಾಗ್ಯೂ 6ನೇ ವಿಕೆಟ್​ಗೆ ಸೋನಲ್ ದಿನುಷಾ ಮತ್ತು ನಿರೋಷನ್ ಡಿಕ್ವೆಲ್ಲಾ ಶತಕದ ಜೊತೆಯಾಟವನ್ನಾಡಿದ್ದಾರೆ. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾವನ್ನು ಒತ್ತಡಕ್ಕೆ ಸಿಲುಕಿಸಿದೆ. ಇವರಿಬ್ಬರ ಜೊತೆಯಾಟಕ್ಕೆ ರಾಹುಲ್ ಕೈಬಿಟ್ಟ ಕ್ಯಾಚ್ ಕೂಡ ಕಾರಣವಾಯಿತು. ನಿರೋಷನ್ ಡಿಕ್ವೆಲ್ಲಾ 20 ರನ್ ಬಾರಿಸಿ ಆಡುತ್ತಿದ್ದಾಗ, ಮಾನವ್ ಸುತಾರ್ ಬೌಲಿಂಗ್​ನಲ್ಲಿ ಸ್ಲಿಪ್​ನಲ್ಲಿ ನಿಂತಿದ್ದ ರಾಹುಲ್​ಗೆ ಕ್ಯಾಚ್ ನೀಡಿದರು. ಆದರೆ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ಹಿಡಿಯುವಲ್ಲಿ ರಾಹುಲ್ ವಿಫಲರಾದರು. ಚೆಂಡು ರಾಹುಲ್​ ಅವರ ಕೈಗೆ ತಾಗಿ ನೆಲಕ್ಕುರುಳಿತು. ಈ ಜೀವದಾನವನ್ನು ಸದುಪಯೋಗಪಡಿಸಿಕೊಂಡಿರುವ ನಿರೋಷನ್ ಡಿಕ್ವೆಲ್ಲಾ ಅರ್ಧಶತಕ ಬಾರಿಸಿ ಮುನ್ನಗ್ಗುತ್ತಿದ್ದಾರೆ.

IND vs SL: 3ನೇ ದಿನವೂ ಮಳೆ..! ಮೊದಲ ಟೆಸ್ಟ್ ರದ್ದಾದರೆ ಟೀಂ ಇಂಡಿಯಾಕ್ಕೆ ಭಾರಿ ನಷ್ಟ

ಇತ್ತ ಶ್ರೀಲಂಕಾ ಪರ ಆರಂಭಿಕ ನಿಶಾನ್ ಫೆರ್ನಾಂಡೊ ಖಾತೆ ತೆರೆಯದೆ ಔಟಾದರೆ, ಲಹಿರು ಉದಾರ 27, ದಿನೇಶ್ ಚಾಂಡಿಮಲ್ 4, ಕಾಮಿಂದು ಮೆಂಡಿಸ್ 14 ಮತ್ತು ಧನಂಜಯ್ ಡಿ ಸಿಲ್ವಾ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಭಾರತದ ಪರ ಮಾನವ್ ಸುತಾರ್ 2 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

Published On - 3:34 pm, Mon, 17 August 26

Follow Us
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!