AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಕಾಲಿಸ್ ದಾಖಲೆ ಮುರಿದು ಗೇಲ್ ದಾಖಲೆಯನ್ನು ಸರಿಗಟ್ಟಿದ ಪಂತ್

Rishabh Pant Test sixes record: ಭಾರತ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದೆ. ಮೊದಲ ದಿನವೇ ದೇವದತ್ ಪಡಿಕ್ಕಲ್ ಶತಕ ಸಿಡಿಸಿದರೆ, ರಿಷಭ್ ಪಂತ್ 98 ಸಿಕ್ಸರ್‌ ಬಾರಿಸುವ ಮೂಲಕ ಜಾಕ್ವೆಸ್ ಕಾಲ್ಲಿಸ್ ದಾಖಲೆ ಮುರಿದರು. ಸದ್ಯ ಕ್ರಿಸ್ ಗೇಲ್ ಮತ್ತು ಟಿಮ್ ಸೌಥಿ ದಾಖಲೆ ಸರಿಗಟ್ಟಿರುವ ಪಂತ್, ಕೇವಲ ಎರಡು ಸಿಕ್ಸರ್‌ಗಳೊಂದಿಗೆ 100 ಸಿಕ್ಸರ್‌ಗಳ ಕ್ಲಬ್ ಸೇರುವ ಮೊದಲ ಭಾರತೀಯನಾಗುವ ಐತಿಹಾಸಿಕ ಸಾಧನೆಗೆ ಸಿದ್ಧರಾಗಿದ್ದಾರೆ.

ಪೃಥ್ವಿಶಂಕರ
|

Updated on: Aug 16, 2026 | 3:01 PM

Share
ಭಾರತ ಹಾಗೂ ಶ್ರೀಲಂಕಾ ನಡುವೆ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 288 ರನ್ ಕಲೆಹಾಕಿದ್ದು ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಆದರೆ ಮಳೆಯಿಂದಾಗಿ ಎರಡನೇ ದಿನದಾಟದ ಮೊದಲ ಸೆಷನ್​ ನಡೆಯಲಿಲ್ಲ. ಆದಾಗ್ಯೂ ಎರಡನೇ ಸೆಷನ್ ಶುರುವಾಗಿದ್ದು, ಪಡಿಕ್ಕಲ್ ಹಾಗೂ ಪಂತ್ ಬ್ಯಾಟಿಂಗ್‌ ಮುಂದುವರೆಸಿದ್ದಾರೆ(PC-PTI).

1 / 6
ಮೊದಲ ದಿನದಾಟದ ಅಂತ್ಯಕ್ಕೆ ದೇವದತ್ ಪಡಿಕ್ಕಲ್ 131 ರನ್‌ ಮತ್ತು ರಿಷಭ್ ಪಂತ್ 27 ರನ್‌ ಬಾರಿಸಿ ಅಜೇಯರಾಗಿ ಉಳಿದಿದ್ದರು. ಪಂದ್ಯದ ಮೊದಲ ದಿನದಂದು ಪಂತ್ 36 ಎಸೆತಗಳನ್ನು ಎದುರಿಸಿ ಒಂದು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ಈ ಒಂದೇ ಸಿಕ್ಸರ್‌ನೊಂದಿಗೆ, ಪಂತ್ ಜಾಕ್ವೆಸ್ ಕಾಲಿಸ್ ಅವರ ದಾಖಲೆಯನ್ನು ಮುರಿದು ಕ್ರಿಸ್ ಗೇಲ್ ಮತ್ತು ಟಿಮ್ ಸೌಥಿ ಅವರ ದಾಖಲೆಗಳನ್ನು ಸಹ ಸರಿಗಟ್ಟಿದರು(PC-PTI).

2 / 6
ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನದಂದು ಪಂತ್ ಏಕೈಕ ಸಿಕ್ಸರ್‌ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕಿದರು. ಜಾಕ್ವೆಸ್ ತಮ್ಮ ವೃತ್ತಿಜೀವನದಲ್ಲಿ 166 ಟೆಸ್ಟ್ ಪಂದ್ಯಗಳಲ್ಲಿ 97 ಸಿಕ್ಸರ್‌ಗಳನ್ನು ಬಾರಿಸಿದ್ದರೆ, ಪಂತ್ ಈಗ 51 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 98 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ(PC-PTI).

3 / 6
ಇದರೊಂದಿಗೆ ಪಂತ್ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಕ್ಕೇರಿದ್ದಾರೆ. ಆದಾಗ್ಯೂ, ಕ್ರಿಸ್ ಗೇಲ್ ಮತ್ತು ಟಿಮ್ ಸೌಥಿ ಕೂಡ ಟೆಸ್ಟ್ ಕ್ರಿಕೆಟ್‌ನಲ್ಲಿ ತಲಾ 98 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಪಂತ್‌ಗೆ ಈಗ ಗೇಲ್ ಮತ್ತು ಸೌಥಿಯನ್ನು ಮೀರಿಸಲು ಉತ್ತಮ ಅವಕಾಶವಿದೆ(PC-PTI).

4 / 6
ರಿಷಭ್ ಪಂತ್ ಎರಡನೇ ದಿನದಂದು ಎರಡು ಸಿಕ್ಸರ್‌ಗಳನ್ನು ಬಾರಿಸಿದರೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಆಗುತ್ತಾರೆ. ಇದರೊಂದಿಗೆ ಆಡಮ್ ಗಿಲ್‌ಕ್ರಿಸ್ಟ್, ಬ್ರೆಂಡನ್ ಮೆಕಲಮ್ ಮತ್ತು ಬೆನ್ ಸ್ಟೋಕ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಮೂವರು ಟೆಸ್ಟ್ ಕ್ರಿಕೆಟ್‌ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ(PC-PTI).

5 / 6
ಪಂತ್ 100 ಸಿಕ್ಸರ್‌ಗಳ ಗಡಿ ದಾಟಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಇಷ್ಟೆ ಅಲ್ಲದೆ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಮುರಿಯುವ ಅವಕಾಶವನ್ನೂ ಹೊಂದಿದ್ದಾರೆ. ಇದೇ ಲಯದಲ್ಲಿ ಮುಂದುವರೆದರೆ ಪಂತ್ ಭವಿಷ್ಯದಲ್ಲಿ ಆ ದಾಖಲೆಯನ್ನು ಮುರಿಯಬಹುದು(PC-PTI).

6 / 6
Follow Us
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!

ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ

ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!

ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ

ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ

ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್

ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!

ಇಂದು ವಿನಾಯಕಿ ಚತುರ್ಥಿ; ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತದ ದಿನ

ಸ್ವಾತಂತ್ರ್ಯೋತ್ಸವ; HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ

ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ, ಏನೇನಾಯ್ತು? ವಿವರ ಇಲ್ಲಿದೆ