AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಗೆ ವಿಮೆ ಹಣ ಸಿಗಲಿ ಎಂದು ಸತ್ತಂತೆ ನಾಟಕವಾಡಿದ ಪತಿ, ಅಗಲುವಿಕೆಯ ನೋವು ತಾಳಲಾರದೆ ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

ಸಾಲದಿಂದ ತಪ್ಪಿಸಿಕೊಳ್ಳಲು ಹಾಗೂ ವಿಮೆ ಹಣಕ್ಕಾಗಿ ಚೀನಾದಲ್ಲಿ ಪತಿಯೊಬ್ಬ ತನ್ನ ಸಾವಿನ ನಾಟಕವಾಡಿದ್ದಾನೆ. ಆದರೆ, ಪತಿಯ ನಿಜವಾದ ಸಾವೆಂದು ನಂಬಿ ತೀವ್ರ ನೋವಿನಿಂದ ಕುಗ್ಗಿದ ಪತ್ನಿ, ಅನಾರೋಗ್ಯ ಪೀಡಿತ ಮಗಳ ಜವಾಬ್ದಾರಿ, ಆರ್ಥಿಕ ಹೊರೆಯಿಂದ ಹತಾಶಳಾಗಿ ತನ್ನಿಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಳು. ಈ ಭೀಕರ ಕೌಟುಂಬಿಕ ದುರಂತಕ್ಕೆ ಪತಿಯ ನಾಟಕ ಕಾರಣವಾಗಿತ್ತು. ನಂತರ ಪತಿ ಪೊಲೀಸರಿಗೆ ಶರಣಾಗಿದ್ದಾನೆ.

ಪತ್ನಿಗೆ ವಿಮೆ ಹಣ ಸಿಗಲಿ ಎಂದು ಸತ್ತಂತೆ ನಾಟಕವಾಡಿದ ಪತಿ, ಅಗಲುವಿಕೆಯ ನೋವು ತಾಳಲಾರದೆ ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ
ಪ್ರೀತಿImage Credit source: Beyond the Panorama
ನಯನಾ ರಾಜೀವ್
|

Updated on: Mar 02, 2026 | 11:34 AM

Share

ಬೀಜಿಂಗ್, ಮಾರ್ಚ್​ 02: ಎಂಥಾ ವಿಪರ್ಯಾಸ ನೋಡಿ, ಹೆಂಡತಿ ಮಕ್ಕಳು ಸುಖವಾಗಿರಬೇಕು ಎಂದು ಪತಿ ಸತ್ತಂತೆ ನಾಟವಾಡಿದರೆ, ಅದೇ ನಿಜವೆಂದು ನಂಬಿ ಮನನೊಂದು ಪತ್ನಿ ಹಾಗೂ ಮಕ್ಕಳು ನಿಜವಾಗಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಆಗ್ನೇಯ ಚೀನಾದ ಹುನಾನ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತುಂಬಾ ಸಾಲ ಮಾಡಿಕೊಂಡಿದ್ದ, ಅದರಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಾಟಕವಾಡಿದ್ದ.

ತನ್ನ ಪತಿಯ ಹಠಾತ್ ಸಾವಿನ ಸುದ್ದಿಯಿಂದ ಆ ವ್ಯಕ್ತಿಯ ಪತ್ನಿ ದಂಗಾಗಿದ್ದಳು. ಆಕೆಯ ಪತಿಯ ಕಾರು ನದಿಯಲ್ಲಿ ಪತ್ತೆಯಾಗಿತ್ತು. ಆದರೂ ಶವ ಸಿಕ್ಕಿರಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ನಂಬಿದ್ದರು. ಆದರೆ ಸತ್ಯ ಬೇರೆಯದೇ ಆಗಿತ್ತು. ಆ ವ್ಯಕ್ತಿಗೆ 100,000 ಯುವಾನ್ ಅಥವಾ ಸುಮಾರು 1.2 ಮಿಲಿಯನ್ ರೂಪಾಯಿಗಳ ಸಾಲವಿತ್ತು, ಇದನ್ನು ಅವರು ತಮ್ಮ ಮೂರು ವರ್ಷದ ಮಗಳ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಆನ್‌ಲೈನ್‌ನಲ್ಲಿ ವಿವಿಧ ಜನರಿಂದ ಸಾಲ ಪಡೆದಿದ್ದರು.

ಆ ವ್ಯಕ್ತಿಯ ಸಾವಿನ ಬಗ್ಗೆ ಅವರ ಪತ್ನಿಗೆ ತಿಳಿದಾಗ, ಅವರು ಚಿಂತಿತರಾಗಿದ್ದರು, ಏಕೆಂದರೆ ಅವರ ಅನಾರೋಗ್ಯ ಪೀಡಿತ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಸಂಪೂರ್ಣವಾಗಿ ಅವರ ಮೇಲೆ ಬಿದ್ದಿತ್ತು. ಆತ ಪತ್ನಿಗೆ ತಿಳಿಯದಂತೆ 1 ಮಿಲಿಯನ್ ಯುವಾನ್ ವಿಮಾ ಯೋಜನೆ ಮಾಡಿದ್ದರು, ಆ ಹಣವು ಆಕೆಯ ಕೈ ಸೇರಿತ್ತು, ಅದರಿಂದ ಆಕೆ ಸಾಲ ತೀರಿಸಬಹುದು ಎಂಬುದು ವ್ಯಕ್ತಿಯ ಆಸೆ ಕೂಡ ಆಗಿತ್ತು.

ಮತ್ತಷ್ಟು ಓದಿ: ಕುವೈತ್​​ನಲ್ಲಿರುವ ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ

ಆದರೆ ಪತಿ ಇಲ್ಲ ಎಂಬ ಕೊರಗು ತಪ್ಪು ಹೆಜ್ಜೆಯನ್ನು ಇಡುವಂತೆ ಮಾಡಿತ್ತು, ಆಕೆ ನಾಲ್ಕು ವರ್ಷದ ಮಗ ಹಾಗೂ ಮಗಳನ್ನು ಕೊಂದು ತಾನೂ ಕೂಡ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಮೊದಲು ಮಗನನ್ನು ಮುಳುಗಿಸಿ ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೀನಾದ ಸಾಮಾಜಿಕ ಮಾಧ್ಯಮ ತಾಣವಾದ ವಿಚಾಟ್​​ನಲ್ಲಿ ಆತ್ಮಹತ್ಯೆ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ನಾನು ಒಬ್ಬಂಟಿಯಾಗಿ ಹೋಗಲು ಬಯಸಿದ್ದೆ, ಆದರೆ ನನ್ನ ಹೆತ್ತವರಿಲ್ಲದಿದ್ದರೆ, ನನ್ನ ಮಗ ಮತ್ತು ಮಗಳು ನನ್ನಂತೆಯೇ ಬಳಲುತ್ತಾರೆ ಮತ್ತು ಕಿರುಕುಳಕ್ಕೊಳಗಾಗುತ್ತಾರೆ ಹಾಗಾಗಿ ಅವರನ್ನು ಕೊಲ್ಲುವುದಾಗಿ ಬರೆದಿದ್ದಾರೆ.

ಈ ಪೋಸ್ಟ್ ಚೀನಾದಲ್ಲಿ ಬೇಗನೆ ವೈರಲ್ ಆಗಿ, ಪ್ರಕರಣವನ್ನು ರಾಷ್ಟ್ರೀಯ ಸಂಚಲನವನ್ನಾಗಿ ಮಾಡಿತು. ಮಹಿಳೆಯ ಪತಿ ಪೊಲೀಸರಿಗೆ ಶರಣಾದರು ಸಾಲದಿಂದ ತಪ್ಪಿಸಿಕೊಳ್ಳಲು ತಾನು ನಾಟಕವಾಡಿದ್ದಾಗಿ ಹೇಳಿದ್ದಾರೆ.ವಿಮಾ ಪಾಲಿಸಿಯು ತನ್ನ ಮಗಳ ವೈದ್ಯಕೀಯ ಚಿಕಿತ್ಸೆಗೆ ಹಣ ನೀಡಲು ಸಹಾಯ ಮಾಡುತ್ತದೆ ಎಂದು ನಂಬಿದ್ದರು. ನಾನು ನನ್ನ ಪ್ಲ್ಯಾನ್ ಅನ್ನು ಆಕೆಗೆ ಹೇಳಿರಲಿಲ್ಲ ಅದೇ ತನ್ನ ದೊಡ್ಡ ತಪ್ಪು ಎಂದು ಕಣ್ಣೀರಿಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್