AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ಗೆ ಹೆದರಿ ಕ್ಯಾಟರಿಂಗ್ ಟ್ರಕ್ ಹತ್ತಿದ ಟ್ರಂಪ್; ಟರ್ಕಿಯಿಂದ ರಹಸ್ಯವಾಗಿ ಎಸ್ಕೇಪ್ ಆಗಿದ್ದ ಅಮೆರಿಕ ಅಧ್ಯಕ್ಷ

US president Donald Trump secretly escaped from Turkey: ಜುಲೈನಲ್ಲಿ ಟರ್ಕಿಯಲ್ಲಿ ನ್ಯಾಟೊ ಸಭೆಯಲ್ಲಿ ಪಾಲ್ಗೊಳ್ಳಲು ಹೋಗದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜೀವ ಬೆದರಿಕೆ ಎದುರಾಗಿತ್ತು. ಕತಾರ್ ಉಡುಗೊರೆಯಾಗಿ ಕೊಟ್ಟಿದ್ದ ಬೋಯಿಂಗ್ ವಿಮಾನ ಮೂಲಕ ಟರ್ಕಿಗೆ ಹೋಗಿದ್ದ ಟ್ರಂಪ್, ಬರುವಾಗ ಬೇರೆ ವಿಮಾನಗಳನ್ನು ಬಳಸಿದ್ದರು. ಏರ್ ಫೋರ್ಸ್ ಒನ್ ವಿಮಾನ ಹತ್ತಿದ್ದ ಅವರು, ಕ್ಯಾಟರಿಂಗ್ ಟ್ರಕ್ ಮೂಲಕ ರಹಸ್ಯವಾಗಿ ಹೊರಬಂದು ಸಣ್ಣ ವಿಮಾನವೊಂದರಲ್ಲಿ ತಪ್ಪಿಸಿಕೊಂಡಿದ್ದರು.

ಇರಾನ್​ಗೆ ಹೆದರಿ ಕ್ಯಾಟರಿಂಗ್ ಟ್ರಕ್ ಹತ್ತಿದ ಟ್ರಂಪ್; ಟರ್ಕಿಯಿಂದ ರಹಸ್ಯವಾಗಿ ಎಸ್ಕೇಪ್ ಆಗಿದ್ದ ಅಮೆರಿಕ ಅಧ್ಯಕ್ಷ
ಡೊನಾಲ್ಡ್ ಟ್ರಂಪ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 11, 2026 | 11:50 AM

Share

ವಾಷಿಂಗ್ಟನ್, ಆಗಸ್ಟ್ 11: ಕಳೆದ ತಿಂಗಳು ನ್ಯಾಟೋ ಸಭೆಯಲ್ಲಿ ಪಾಲ್ಗೊಳ್ಳಲು ಟರ್ಕಿಗೆ ಹೋಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ಬೆದರಿಕೆ ಹಿನ್ನೆಲೆಯಲ್ಲಿ ರಹಸ್ಯ ಕಾರ್ಯಾಚರಣೆ ಮೂಲಕ ತಪ್ಪಿಸಿಕೊಂಡ ಘಟನೆ ನಡೆದಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇರಾನ್​ನಿಂದ ಹತ್ಯೆಯ ಗಂಭೀರ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಟ್ರಂಪ್ ಅವರನ್ನು ಮಾಮೂಲಿಯ ಏರ್ ಫೋರ್ಸ್ ಒನ್ ವಿಮಾನ ಬಿಟ್ಟು ಸಣ್ಣ ವಿಮಾನವೊಂದರಲ್ಲಿ ರಹಸ್ಯವಾಗಿ ಟರ್ಕಿಯಿಂದ ಹೊರಗೆ ಕರೆದೊಯ್ಯಲಾಗಿತ್ತು ಎಂದು ವಾಷಿಂಗ್ಟನ್ ಪೋಸ್ಟ್​ನಲ್ಲಿ (The Washington Post) ಹೇಳಲಾಗಿದೆ.

ನ್ಯಾಟೋ ಶೃಂಗಸಭೆ ಮತ್ತು ಇರಾನ್ ಬೆದರಿಕೆ

ಟರ್ಕಿಯ ಅಂಕಾರಾದಲ್ಲಿ ಜುಲೈನಲ್ಲಿ ನಡೆದ ನ್ಯಾಟೋ (NATO) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ, ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳಿಂದ ಟ್ರಂಪ್ ಅವರ ವಿಮಾನದ ಮೇಲೆ ಕ್ಷಿಪಣಿ ದಾಳಿ ಅಥವಾ ಹತ್ಯೆಯ ಯತ್ನ ನಡೆಯಬಹುದು ಎಂಬ ನಂಬಲರ್ಹ ಗುಪ್ತಚರ ಮಾಹಿತಿ ಯುಎಸ್ ಸೀಕ್ರೆಟ್ ಸರ್ವಿಸ್‌ಗೆ ದೊರಕಿತ್ತು.

ಕ್ಯಾಮೆರಾಗಳ ಮುಂದೆ ಹಾಗೂ ಪತ್ರಕರ್ತರ ಕಣ್ಣೆದುರು ಟ್ರಂಪ್ ಅವರು ಹಳೆಯ ‘ಏರ್ ಫೋರ್ಸ್ ಒನ್’ (Air Force One) ವಿಮಾನವನ್ನು ಏರಿದ್ದರು. ಆದರೆ ವಿಮಾನವೇರಿದ ಕೆಲವೇ ನಿಮಿಷಗಳಲ್ಲಿ, ವಿಮಾನದ ಹಿಂಭಾಗಕ್ಕೆ ಆಹಾರ ಸರಬರಾಜು ಮಾಡುವ ಏರ್‌ಪೋರ್ಟ್ ಕ್ಯಾಟರಿಂಗ್ ಟ್ರಕ್ (Catering Truck) ಮೂಲಕ ಟ್ರಂಪ್ ಅವರನ್ನು ಯಾರಿಗೂ ತಿಳಿಯದಂತೆ ಮತ್ತೊಂದು ಸಣ್ಣ ಯುದ್ಧ ವಿಮಾನವಾದ ‘ಏರ್ ಫೋರ್ಸ್ C-32A’ (Air Force C-32A) ಗೆ ರಹಸ್ಯವಾಗಿ ಸ್ಥಳಾಂತರಿಸಲಾಯಿತು.

ಇದನ್ನೂ ಓದಿ: ಟ್ರಂಪ್ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್; ಎಲ್ಲಾ ಸೇನಾ ರಜೆಗಳು ರದ್ದು; ಇರಾನ್ ಮೇಲೆ ನಡೆಯುತ್ತಾ ದೊಡ್ಡ ದಾಳಿ?

ಬಹಳ ರಹಸ್ಯವಾಗಿ ನಡೆದ ಕಾರ್ಯಾಚರಣೆ

ಟ್ರಂಪ್ ಏರ್ ಫೋರ್ಸ್ ಒನ್‌ನಲ್ಲೇ ಪ್ರಯಾಣಿಸುತ್ತಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಮತ್ತು ಶ್ವೇತಭವನದ ಹಲವು ಸಿಬ್ಬಂದಿ ನಂಬಿದ್ದರು. ಪ್ರಯಾಣದ ಸಮಯದಲ್ಲಿ ವಿಮಾನದ ಕಿಟಕಿ ಪರದೆಗಳನ್ನು (Window shades) ಮುಚ್ಚಿಡುವಂತೆ ಪತ್ರಕರ್ತರಿಗೆ ಸೂಚಿಸಲಾಗಿತ್ತು. ಟ್ರಂಪ್ ಅವರನ್ನು ಕ್ಯಾಟರಿಂಗ್ ಟ್ರಕ್​ಗೆ ವರ್ಗಾಯಿಸಿದ್ದು ಯಾರ ಕಣ್ಣಿಗೂ ಬೀಳಲಿಲ್ಲ.

ಕತಾರ್ ನೀಡಿದ ಹೊಸ ವಿಮಾನದಲ್ಲಿ ಹೆಚ್ಚಿನ ಸುರಕ್ಷತೆ ಇಲ್ಲ

ಟ್ರಂಪ್ ಅವರು ಅಂಕಾರಾಕ್ಕೆ (ಟರ್ಕಿಯ ನಗರ) ಕತಾರ್ ಸರ್ಕಾರ ನೀಡಿದ್ದ ಹೊಸ ಬೋಯಿಂಗ್ 747-8 ವಿಮಾನದಲ್ಲಿ ಬಂದಿದ್ದರು. ಆದರೆ, ಹಳೆಯ ಏರ್ ಫೋರ್ಸ್ ಒನ್ ವಿಮಾನದಲ್ಲಿ ಇರುವ ಕ್ಷಿಪಣಿ ನಿರೋಧಕ ಮತ್ತು ಲೇಸರ್ ತಂತ್ರಜ್ಞಾನದ ಫೀಚರ್​ಗಳು ಹೊಸ ಬೋಯಿಂಗ್ ವಿಮಾನದಲ್ಲಿ ಇರಲಿಲ್ಲ. ಹೀಗಾಗಿ, ಟರ್ಕಿಯಿಂದ ಹೊರಹೋಗಲು ಹಳೆಯ ಏರ್ ಫೋರ್ಸ್ ಒನ್ ಅನ್ನೇ ಬಳಸಲು ನಿರ್ಧರಿಸಲಾಗಿತ್ತು ಎನ್ನಲಾಗಿದೆ.

ಪತ್ರಕರ್ತರ ಪ್ರಶ್ನೆಗೆ ಟ್ರಂಪ್ ಉತ್ತರ ಇದು…

ಬ್ರಿಟನ್‌ನ ಸೇನಾ ನೆಲೆಗೆ ತಲುಪಿದ ನಂತರ, ಪತ್ರಕರ್ತರು “ವಿಮಾನದ ಕಿಟಕಿಗಳನ್ನು ಏಕೆ ಮುಚ್ಚಲು ಹೇಳಲಾಗಿತ್ತು?” ಎಂದು ಕೇಳಿದಾಗ, ಟ್ರಂಪ್: “ನಾವು ಬಹುಶಃ ಅಪಾಯಕಾರಿ ಹಾರಾಟದಲ್ಲಿದ್ದೆವು… ಆದರೆ ನಾನು ಹೋದರೆ, ನೀವು ನನ್ನ ಜೊತೆಯೇ ಹೋಗುತ್ತೀರಲ್ಲವೇ?” ಎಂದು ಮಾರ್ಮಿಕವಾಗಿ ಉತ್ತರಿಸಿದ್ದರು. ಶ್ವೇತಭವನದ ವಕ್ತಾರರು ಈ ಬಗ್ಗೆ ಪ್ರತಿಕ್ರಿಯಿಸಿ, “ಅಧ್ಯಕ್ಷರ ಮೇಲೆ ಹಲವು ಶತ್ರುಗಳ ಕಣ್ಣಿದೆ, ಅವರ ಸುರಕ್ಷತೆಗಾಗಿ ನಾವು ಅಗತ್ಯವಿರುವ ಎಲ್ಲಾ ತಂತ್ರಜ್ಞಾನ ಹಾಗೂ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಆಗಸ್ಟ್ 29ರಂದು ಅಮೆರಿಕದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ

ಕುತೂಹಲ ಎಂದರೆ, ಟರ್ಕಿಯಲ್ಲಿ ಪತ್ರಕರ್ತರ ಜೊತೆ ಏರ್ ಫೋರ್ಸ್ ಒನ್ ವಿಮಾನ ಏರಿದ್ದ ಟ್ರಂಪ್ ಅವರನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ಸಣ್ಣ ವಿಮಾನಕ್ಕೆ ಸಾಗಿಸಲಾಯಿತು. ಬ್ರಿಟನ್​ಗೆ ವಿಮಾನಗಳು ತಲುಪಿದಾಗ ಟ್ರಂಪ್ ಅವರು ಮತ್ತೆ ಏರ್ ಫೋರ್ಸ್ ಒನ್ ವಿಮಾನದಲ್ಲಿ ಕಾಣಿಸಿಕೊಂಡಿದ್ದರು. ಹೇಗೆ ಅವರನ್ನು ವಾಪಸ್ ಹಳೆಯ ವಿಮಾನಕ್ಕೆ ತರಲಾಯಿತು ಎಂಬುದು ಗೊತ್ತಾಗಿಲ್ಲ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಹೆಚ್​ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಹೆಚ್​ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್‌ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್​ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಸರಿಯಲ್ಲ;ರಾಹುಲ್ ಗಾಂಧಿ
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
ಆಸ್ಪತ್ರೆಯಲ್ಲಿ ಚೆನ್ನಮ್ಮರ ಕೊನೆ ಕ್ಷಣಗಳನ್ನ ಹೇಳಿ ಗದ್ಗದಿತರಾದ ದೇವೇಗೌಡ್ರು
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
‘ಯಶ್ ಈಗ ರಾಜ್ಯ, ದೇಶ ಗೆದ್ದಾಗಿದೆ, ವಿಶ್ವವನ್ನೂ ಗೆಲ್ತಾರೆ’; ಅಜಯ್ ರಾವ್
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ
ರಾಸಾಯನಿಕ ತ್ಯಾಜ್ಯ: 3 ಕೈಗಾರಿಕೆ ಮುಚ್ಚಲು ಈಶ್ವರ ಖಂಡ್ರೆ ಸೂಚನೆ