AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೇಷ್ಯಾ ಟೂರಿಸ್ಟ್ ವೀಸಾದಲ್ಲಿ ಕೆಲಸ ಹುಡುಕಿದರೆ ಜೈಲು ಗ್ಯಾರಂಟಿ: ಭಾರತೀಯರಿಗೆ ಹೈಕಮಿಷನ್ ಖಡಕ್ ಎಚ್ಚರಿಕೆ

ಮಲೇಷ್ಯಾಕ್ಕೆ ವೀಸಾ-ಮುಕ್ತ ಪ್ರವೇಶ ಅಥವಾ ಪ್ರವಾಸಿ ವೀಸಾದಲ್ಲಿ ಕೆಲಸ ಹುಡುಕುತ್ತಿರುವ ಭಾರತೀಯರಿಗೆ ಜೈಲು ಮತ್ತು ಗಡೀಪಾರು ಶಿಕ್ಷೆ ಕಾದಿದೆ ಎಂದು ಭಾರತೀಯ ಹೈಕಮಿಷನ್ ಎಚ್ಚರಿಕೆ ನೀಡಿದೆ. ನಕಲಿ ಏಜೆಂಟರ ಮಾತನ್ನು ನಂಬಿ ವಂಚನೆಗೆ ಒಳಗಾಗಬೇಡಿ. ಕೆಲಸಕ್ಕೆ ತೆರಳುವವರು ಕಡ್ಡಾಯವಾಗಿ ಅಧಿಕೃತ ವರ್ಕ್ ಪರ್ಮಿಟ್ ಹೊಂದಿರಬೇಕು. ಪ್ರವಾಸಿ ವೀಸಾ ಕೇವಲ ಭೇಟಿಗೆ ಮಾತ್ರ. MDAC ನೋಂದಣಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಪ್ರಯಾಣಿಸಿ.

ಮಲೇಷ್ಯಾ ಟೂರಿಸ್ಟ್ ವೀಸಾದಲ್ಲಿ ಕೆಲಸ ಹುಡುಕಿದರೆ ಜೈಲು ಗ್ಯಾರಂಟಿ: ಭಾರತೀಯರಿಗೆ ಹೈಕಮಿಷನ್ ಖಡಕ್ ಎಚ್ಚರಿಕೆ
ಮಲೇಷ್ಯಾImage Credit source: Global Financial Magazine
ನಯನಾ ರಾಜೀವ್
|

Updated on: Sep 23, 2026 | 9:19 AM

Share

ಕೌಲಾಲಂಪುರ್, ಸೆಪ್ಟೆಂಬರ್ 23: ಮಲೇಷ್ಯಾ ಸರ್ಕಾರ ಭಾರತೀಯ ಪ್ರವಾಸಿಗರಿಗೆ ನೀಡಿರುವ 30 ದಿನಗಳ ವೀಸಾ-ಮುಕ್ತ ಪ್ರವೇಶ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು, ನಕಲಿ ಏಜೆಂಟರ ಮಾತನ್ನು ನಂಬಿ ಉದ್ಯೋಗ ಹುಡುಕಲು ತೆರಳುತ್ತಿರುವ ಭಾರತೀಯರಿಗೆ ಕೌಲಾಲಂಪುರದಲ್ಲಿರುವ ಭಾರತೀಯ ಹೈಕಮಿಷನ್ ಗಂಭೀರ ಎಚ್ಚರಿಕೆಯ ಸಲಹಾವಳಿಯನ್ನು (Advisory) ಹೊರಡಿಸಿದೆ. ಪ್ರವಾಸಿ ವೀಸಾ ಅಥವಾ ವೀಸಾ ರಹಿತ ಪ್ರವೇಶದ ಮೂಲಕ ತೆರಳಿ ಕೆಲಸ ಮಾಡುವುದು ಮಲೇಷ್ಯಾದ ವಲಸೆ ಕಾಯ್ದೆಯಡಿ ಗಂಭೀರ ಅಪರಾಧವಾಗಿದ್ದು, ಅಂತಹವರು ಬಂಧನ, ಜೈಲು ಶಿಕ್ಷೆ ಹಾಗೂ ದೇಶದಿಂದ ಗಡೀಪಾರು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಏಜೆಂಟರ ಸುಳ್ಳು ಭರವಸೆ ಮತ್ತು ಅಪಾಯಗಳು

ಮಲೇಷ್ಯಾದಲ್ಲಿ ಉತ್ತಮ ಉದ್ಯೋಗ ಕೊಡಿಸುವುದಾಗಿ ನಂಬಿಸುವ ವಂಚಕ ಏಜೆಂಟರು ಭಾರತೀಯ ಯುವಕರನ್ನು ವೀಸಾ-ಮುಕ್ತ ಸೌಲಭ್ಯದಡಿ ಮಲೇಷ್ಯಾಕ್ಕೆ ಕಳುಹಿಸುತ್ತಿದ್ದಾರೆ. 30 ದಿನಗಳ ಅವಧಿ ಮುಗಿದ ನಂತರ ಅಂತಹವರು ದೇಶದಲ್ಲಿ ಅಕ್ರಮವಾಗಿ ನೆಲೆಸಬೇಕಾಗುತ್ತದೆ . ಪರಿಣಾಮವಾಗಿ ಅವರು ಅಕ್ರಮ ವಲಸಿಗರಾಗಿ ಗುರುತಿಸಿಕೊಂಡು, ಸ್ಥಳೀಯ ಮಾಫಿಯಾಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಜತೆಗೆ ಯಾವುದೇ ವೃತ್ತಿಪರ ಹಕ್ಕುಗಳು, ವೈದ್ಯಕೀಯ ವಿಮೆ ಅಥವಾ ಕನಿಷ್ಠ ವೇತನದ ಸುರಕ್ಷತೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ.

ಮತ್ತಷ್ಟು ಓದಿ: ಮೋದಿ ಜತೆ ದ್ವಿಪಕ್ಷೀಯ ಸಭೆ, ಗಾಂಧಿ ಕುಟುಂಬದೊಂದಿಗೆ ಉಪಹಾರ: ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಭಾರತ ಭೇಟಿ ಹೈಲೈಟ್ಸ್

ಕೆಲಸಕ್ಕೆ ತೆರಳುವವರು ಗಮನಿಸಬೇಕಾದ ನಿಯಮಗಳು:

ಅಧಿಕೃತ ಕೆಲಸದ ವೀಸಾ ಕಡ್ಡಾಯ: ಮಲೇಷ್ಯಾದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಭಾರತದಿಂದಲೇ ಮಾನ್ಯತೆ ಪಡೆದ ವರ್ಕ್ ಪರ್ಮಿಟ್ ಅಥವಾ ‘ರೆಫರೆನ್ಸ್‌ನೊಂದಿಗೆ ವೀಸಾ’ (Visa with Reference – VDR) ಪಡೆದುಕೊಳ್ಳಬೇಕು.

ಪ್ರವಾಸಿ ವೀಸಾ ಕೆಲಸಕ್ಕೆ ಅಲ್ಲ: 30 ದಿನಗಳ ವೀಸಾ-ಮುಕ್ತ ಸೌಲಭ್ಯವು ಕೇವಲ ಪ್ರವಾಸೋದ್ಯಮ ಮತ್ತು ಕುಟುಂಬ/ಸ್ನೇಹಿತರನ್ನು ಭೇಟಿ ಮಾಡಲು ಮಾತ್ರ ಸೀಮಿತವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಕೆಲಸದ ವೀಸಾವನ್ನಾಗಿ ಪರಿವರ್ತಿಸಲು ಬರುವುದಿಲ್ಲ.

ನಿಜವಾದ ಪ್ರವಾಸಿಗರಿಗೆ ಕಡ್ಡಾಯ ಮಾರ್ಗಸೂಚಿಗಳು:

ವಲಸೆ ಅಧಿಕಾರಿಗಳ ತಪಾಸಣೆಯಲ್ಲಿ ಕಿರುಕುಳ ಅಥವಾ ವಾಪಸ್ ಕಳುಹಿಸುವುದನ್ನು ತಪ್ಪಿಸಲು ಪ್ರವಾಸಿಗರು ಕೆಳಗಿನ ನಿಯಮಗಳನ್ನು ಪಾಲಿಸಬೇಕು:

ಪಾಸ್‌ಪೋರ್ಟ್ ಸಿಂಧುತ್ವ: ಪಾಸ್‌ಪೋರ್ಟ್ ಕನಿಷ್ಠ 6 ತಿಂಗಳ ಮಾನ್ಯತೆ ಹೊಂದಿರಬೇಕು.

ಪ್ರಯಾಣ ದಾಖಲೆಗಳು: ಮುಂಗಡವಾಗಿ ಬುಕ್ ಮಾಡಲಾದ ರಿಟರ್ನ್ ವಿಮಾನ ಟಿಕೆಟ್, ಹೋಟೆಲ್ ಬುಕಿಂಗ್ ಪ್ರತಿ ಮತ್ತು ಪ್ರವಾಸ ವೆಚ್ಚ ಭರಿಸಲು ಅಗತ್ಯವಿರುವಷ್ಟು ಹಣದ ವಿವರ (ಬ್ಯಾಂಕ್ ಬ್ಯಾಲೆನ್ಸ್/ನಗದು) ಇರಬೇಕು.

MDAC ನೋಂದಣಿ: ಮಲೇಷ್ಯಾಕ್ಕೆ ಪ್ರಯಾಣಿಸುವ ದಿನಾಂಕಕ್ಕಿಂತ ಕನಿಷ್ಠ 3 ದಿನಗಳ ಮೊದಲು ಆನ್‌ಲೈನ್‌ನಲ್ಲಿ ‘ಮಲೇಷ್ಯಾ ಡಿಜಿಟಲ್ ಆಗಮನ ಕಾರ್ಡ್’ (MDAC) ಭರ್ತಿ ಮಾಡಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ