AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್: ಕಿಶೋರ್ ಕುಮಾರ್ ಹಾಡು ಹಾಡಿ ಮೋಡಿ ಮಾಡಿದ ಅನ್ವರ್ ಇಬ್ರಾಹಿಂ

ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್: ಕಿಶೋರ್ ಕುಮಾರ್ ಹಾಡು ಹಾಡಿ ಮೋಡಿ ಮಾಡಿದ ಅನ್ವರ್ ಇಬ್ರಾಹಿಂ

ನಯನಾ ರಾಜೀವ್
|

Updated on: Sep 13, 2026 | 11:14 AM

Share

ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಗಂಭೀರ ರಾಜತಾಂತ್ರಿಕ ಸಭೆಗಳ ನಡುವೆ ಒಂದು ಅಪರೂಪದ ಹಾಗೂ ಸುಂದರ ಸಾಂಸ್ಕೃತಿಕ ಕ್ಷಣ ಎಲ್ಲರ ಗಮನ ಸೆಳೆದಿದೆ. ಭಾರತ ಭೇಟಿಯಲ್ಲಿದ್ದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ ನಿತ್ಯಹರಿದ್ವರ್ಣ ಹಿಂದಿ ಗೀತೆ "ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್" ಅನ್ನು ಸ್ವತಃ ಹಾಡುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ. ದೆಹಲಿಯ ಹೋಟೆಲ್‌ನಲ್ಲಿ ಅವರು ಸಂಪೂರ್ಣ ತನ್ಮಯರಾಗಿ ಹಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ನವದೆಹಲಿ, ಸೆಪ್ಟೆಂಬರ್ 13: ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಗಂಭೀರ ರಾಜತಾಂತ್ರಿಕ ಸಭೆಗಳ ನಡುವೆ ಒಂದು ಅಪರೂಪದ ಹಾಗೂ ಸುಂದರ ಸಾಂಸ್ಕೃತಿಕ ಕ್ಷಣ ಎಲ್ಲರ ಗಮನ ಸೆಳೆದಿದೆ. ಭಾರತ ಭೇಟಿಯಲ್ಲಿದ್ದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಖ್ಯಾತ ಗಾಯಕ ಕಿಶೋರ್ ಕುಮಾರ್ ಅವರ  ಹಿಂದಿ ಗೀತೆ “ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್” ಅನ್ನು ಸ್ವತಃ ಹಾಡುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ. ದೆಹಲಿಯ ಹೋಟೆಲ್‌ನಲ್ಲಿ ಅವರು ಸಂಪೂರ್ಣ ತನ್ಮಯರಾಗಿ ಹಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕಿಶೋರ್ ಕುಮಾರ್ ಕ್ಲಾಸಿಕ್ ಹಾಡು: 1965ರ ದೇವ್ ಆನಂದ್ ಅಭಿನಯದ ‘ತೀನ್ ದೇವಿಯಾ’ ಚಿತ್ರದ “ಖ್ವಾಬ್ ಹೋ ತುಮ್…” ಹಾಡನ್ನು ಅನ್ವರ್ ಇಬ್ರಾಹಿಂ ಹಾಡಿದ್ದಾರೆ. ಈ ಗೀತೆಗೆ ಎಸ್.ಡಿ. ಬರ್ಮನ್ ಸಂಗೀತ ನೀಡಿದ್ದು, ಮಜ್ರೂಹ್ ಸುಲ್ತಾನ್‌ಪುರಿ ಸಾಹಿತ್ಯ ಬರೆದಿದ್ದರು. ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಯಾನೋ ವಾದನದ ಹಿನ್ನೆಲೆಯಲ್ಲಿ ಮಲೇಷ್ಯಾ ಪ್ರಧಾನಿ ಅತ್ಯಂತ ಲೀಲಾಜಾಲವಾಗಿ, ಸರಿಯಾದ ಉಚ್ಚಾರಣೆಯೊಂದಿಗೆ ಹಾಡಿ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Follow Us