Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

Roberrt Movie Review: ಭಾರಿ ನಿರೀಕ್ಷೆಯೊಂದಿಗೆ ರಾಬರ್ಟ್​ ಸಿನಿಮಾ ಬಿಡುಗಡೆ ಆಗಿದೆ. ದರ್ಶನ್​ ಅಭಿಮಾನಿಗಳ ಈ ನಿರೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ಈ ಚಿತ್ರ ಯಶಸ್ವಿ ಆಗಿದೆಯಾ? ಒಟ್ಟಾರೆ ‘ರಾಬರ್ಟ್​’ ಚಿತ್ರ ಹೇಗಿದೆ? ಇಲ್ಲಿದೆ ವಿಮರ್ಶೆ...

Roberrt Kannada Movie Review:  ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​
Follow us
ಮದನ್​ ಕುಮಾರ್​
|

Updated on:Mar 11, 2021 | 4:58 PM

ಸಿನಿಮಾ: ರಾಬರ್ಟ್ ನಿರ್ದೇಶನ: ತರುಣ್​ ಸುಧೀರ್​ ನಿರ್ಮಾಣ: ಉಮಾಪತಿ ಶ್ರೀನಿವಾಸ್​ ಗೌಡ ಪಾತ್ರವರ್ಗ: ದರ್ಶನ್​, ಆಶಾ ಭಟ್​, ಜಗಪತಿ ಬಾಬು, ರವಿಶಂಕರ್​, ವಿನೋದ್​ ಪ್ರಭಾಕರ್​, ಸೋನಲ್​ ಮಂಥೆರೋ, ಚಿಕ್ಕಣ್ಣ ಮುಂತಾದವರು. ಸ್ಟಾರ್​: 3.5/5

ಮಾಸ್​ ಸಿನಿಮಾಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡವರು ದರ್ಶನ್​. ಅವರ ಅಭಿಮಾನಿಗಳು ಕೂಡ ಅಂತಹ ಸಿನಿಮಾಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಪಂಚಿಂಗ್​ ಡೈಲಾಗ್​ಗಳು, ಭರ್ಜರಿ ಸಾಹಸದೃಶ್ಯಗಳು ಡಿ ಫ್ಯಾನ್ಸ್​ ಪಾಲಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡುತ್ತವೆ. ಅದೇ ನಿರೀಕ್ಷೆಯನ್ನು ಇಟ್ಟುಕೊಂಡು ‘ರಾಬರ್ಟ್​’ ನೋಡಲು ಬರುವ ಪ್ರೇಕ್ಷಕರು ಈ ಸಿನಿಮಾ ಪ್ರಾರಂಭ ಆಗುತ್ತಿದ್ದಂತೆಯೇ ಅಚ್ಚರಿಗೆ ಒಳಗಾಗಬಹುದು. ಯಾಕೆಂದರೆ, ಚಿತ್ರದ ಆರಂಭದಲ್ಲಿ ಆ ಕಮರ್ಷಿಯಲ್​ ಅಂಶಗಳನ್ನೆಲ್ಲ ಬದಿಗಿಟ್ಟು, ಸಂಪೂರ್ಣ ಬೇರೆ ರೀತಿಯಲ್ಲಿ ‘ಚಾಲೆಂಜಿಂಗ್ ಸ್ಟಾರ್​’ ದರ್ಶನ ನೀಡುತ್ತಾರೆ. ರಾಬರ್ಟ್​ ನೋಡಲು ಬಂದವರಿಗೆ ರಾಘವ ಎದುರಾಗುತ್ತಾನೆ!

ಹೌದು, ಈ ಸಿನಿಮಾದಲ್ಲಿ ರಾಬರ್ಟ್​ ಮತ್ತು ರಾಘವ ಎಂಬ ಎರಡು ಡಿಫರೆಂಟ್​ ಶೇಡ್​ನ ಪಾತ್ರದಲ್ಲಿ ದರ್ಶನ್​ ಕಾಣಿಸಿಕೊಂಡಿದ್ದಾರೆ. ರಾಘವ ತುಂಬ ಕ್ಲಾಸ್​. ಆದರೆ ರಾಬರ್ಟ್​ ಸಿಕ್ಕಾಪಟ್ಟೆ ಮಾಸ್​. ಒಂದು ಕಾಲದಲ್ಲಿ ಮಂಬೈನಲ್ಲಿ ರಾಬರ್ಟ್​ ಆಗಿ ಮೆರೆದ ವ್ಯಕ್ತಿಯೇ ಈಗ ಲಖನೌನಲ್ಲಿ ರಾಘವನಾಗಿ ಹೆಸರು ಬದಲಾಯಿಸಿಕೊಂಡು ಬದುಕುತ್ತಿದ್ದಾನೆ. ಅರ್ಜುನ್​ ಎಂಬ ಮಗನನ್ನು ಕಾಪಾಡುವ ಹೊಣೆ ಅವನ ಮೇಲಿದೆ. ನಿಜಕ್ಕೂ ರಾಘವ ಮತ್ತು ಅರ್ಜುನ್ ತಂದೆ-ಮಗನಾ? ರಾಬರ್ಟ್​ ಆಗಿದ್ದ ಕಥಾನಾಯಕ ರಾಘವ ಆಗಿ ಬದಲಾಗಲು ಕಾರಣವಾಗಿದ್ದೇನು ಎಂಬುದು ಗೊತ್ತಾಗುವುದು ಸೆಕೆಂಡ್​ ಹಾಫ್​ನಲ್ಲಿ!

ಈವರೆಗೂ ದರ್ಶನ್​ ನಟಿಸಿದ ಎಲ್ಲ ಸಿನಿಮಾಗಳಿಗಿಂತಲೂ ರಾಬರ್ಟ್​ನಲ್ಲಿ ಅವರಿಗೆ ಡಿಫರೆಂಟ್​ ಆದಂತಹ ಪಾತ್ರ ಸಿಕ್ಕಿದೆ. ಮೊದಲಾರ್ಧದಲ್ಲಿ ಅವರು ಯಾವುದೇ ಮಾಸ್​ ಇಮೇಜ್​ಗೆ ಕಟ್ಟುಬೀಳದೇ ಸಂಪೂರ್ಣವಾಗಿ ಪಾತ್ರಕ್ಕೆ ಶರಣಾಗಿದ್ದಾರೆ. ವಿಲನ್​ಗಳ ಕಾಲು ಹಿಡಿದುಕೊಳ್ಳುವಷ್ಟರಮಟ್ಟಿಗೆ ಕ್ಲಾಸ್​ ಆಗಿ ನಡೆದುಕೊಂಡಿದ್ದಾರೆ. ಪಂಚಿಂಗ್​ ಡೈಲಾಗ್​ಗಳ ಹಂಗು ಇಲ್ಲದೆ, ಉಗ್ಗುತ್ತ ಮಾತನಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಸಿಟ್ಟು-ದ್ವೇಷ ಇಲ್ಲದ ಬಾಣಸಿಗನಾಗಿ ಅಭಿನಯಿಸಿದ್ದಾರೆ. ಆದರೆ ಮಧ್ಯಂತರದ ವೇಳೆ ಬೇರೆ ಅವತಾರ ತಾಳುತ್ತಾರೆ. ಅಲ್ಲಿಂದಲೇ ಶುರು ಆಗುವುದು ರಾಬರ್ಟ್​ನ ಅಸಲಿ ಆಟ. ಮಾಸ್​ಪ್ರಿಯರು ಬಯಸುವ ದರ್ಶನ್​ ಸೆಕೆಂಡ್​ ಹಾಫ್​ನಲ್ಲಿ ಸಿಗುತ್ತಾರೆ. ಖಡಕ್​ ಡೈಲಾಗ್​ಗಳು ಮತ್ತು ಹೊಡೆಬಡಿ ದೃಶ್ಯಗಳ ಮೂಲಕ ಮನರಂಜನೆ ನೀಡುತ್ತಾರೆ. ಹೀಗೆ ರಾಘವ ಮತ್ತು ರಾಬರ್ಟ್​ ಅವತಾರಗಳಲ್ಲಿ ಪ್ರೇಕ್ಷಕರಿಗೆ ಡಬಲ್​ ಧಮಾಕಾ ನೀಡಿದ್ದಾರೆ.

ಎಲ್ಲ ಫ್ರೇಮ್​ನಲ್ಲೂ ಶ್ರೀಮಂತಿಕೆ ಎದ್ದು ಕಾಣುತ್ತದೆ. ಕೆಲವು ಅದ್ದೂರಿ ಸೆಟ್​ಗಳು ಕಣ್ಣು ಕುಕ್ಕುತ್ತವೆ. ಮೇಕಿಂಗ್​ ವಿಚಾರದಲ್ಲಿ ಹೊಸತನ ನೀಡಲು ಪ್ರಯತ್ನಿಸಿರುವ ನಿರ್ದೇಶಕ ತರುಣ್ ಸುಧೀರ್​ ಅವರು ಕಥೆ ಮತ್ತು ನಿರೂಪಣೆಯಲ್ಲಿ ಎಂದಿನ ಸೂತ್ರಗಳನ್ನು ಫಾಲೋ ಮಾಡಿದ್ದಾರೆ. ನಿರೀಕ್ಷಿಸಬಹುದಾದ ರೀತಿಯಲ್ಲಿ ಚಿತ್ರಕಥೆ ಹೆಣೆಯಲಾಗಿದೆ. ಅದರ ಬಗ್ಗೆ ಗಮನ ನೀಡದೇ ಎಂಜಾಯ್​ ಮಾಡುವವರಿಗೆ ‘ರಾಬರ್ಟ್​’ ಇಷ್ಟವಾಗುತ್ತಾನೆ. ದರ್ಶನ್​ ಜೊತೆಗೆ ವಿನೋದ್​ ಪ್ರಭಾಕರ್​ ಅವರು ಅತಿ ಹೆಚ್ಚು ಸ್ಕ್ರೀನ್​ ಸ್ಪೇಸ್​ ಗಿಟ್ಟಿಸಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಸರ್ಪ್ರೈಸ್​. ಸೆಕೆಂಡ್​ ಹೀರೋ ಎನ್ನಬಹುದಾದಷ್ಟು ಸ್ಕೋಪ್ ಅವರಿಗೆ ಸಿಕ್ಕಿದೆ.

ಸಿನಿಮಾದಲ್ಲಿ ಹಲವು ಕಲಾವಿದರು ಇದ್ದಾರೆ. ಚಿಕ್ಕಣ್ಣ ಮತ್ತು ಧರ್ಮಣ್ಣ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಆ ಪಾತ್ರಗಳಿಗೆ ಫ್ರೆಶ್​ ಸಂಭಾಷಣೆಗಳನ್ನು ಬರೆದ ರಾಜ್​ಶೇಖರ್​ ಮತ್ತು ಚಂದ್ರಮೌಳಿ ಅವರಿಗೆ ಕ್ರೆಡಿಟ್​ ಸಲ್ಲಬೇಕು. ನಟ ಶಿವರಾಜ್​ ಕೆ.ಆರ್​. ಪೇಟೆ ಕೂಡ ಎರಡು ಡಿಫರೆಂಟ್​ ಪಾತ್ರದಲ್ಲಿ ಮನರಂಜಿಸಿದ್ದಾರೆ. ನಾಯಕಿ ಆಶಾ ಭಟ್​ ಅವರ ನಟನೆಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಆದರೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ‘ಕಣ್ಣು ಹೊಡಿಯಾಕ..’ ಮತ್ತು ‘ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ..’ ಹಾಡಿನಲ್ಲಿ ಅವರು ಹೆಚ್ಚು ಮೈಲೇಜ್​ ಪಡೆದುಕೊಂಡಿದ್ದಾರೆ. ದರ್ಶನ್​ ರೀತಿಯೇ ಬಾಲ ನಟ ಜೇಸನ್​ ಡಿಸೋಜಾ ಕೂಡ ಇಡೀ ಸಿನಿಮಾದಲ್ಲಿ ಹೈಲೈಟ್​ ಆಗಿದ್ದಾನೆ. ಆತನ ನಟನೆಗೆ ಫುಲ್​ ಮಾರ್ಕ್ಸ್​ ನೀಡಬಹುದು.

ಅರ್ಜುನ್​ ಜನ್ಯ ಸಂಗೀತ ನೀಡಿರುವ ಹಾಡುಗಳಿಂದ ಚಿತ್ರದ ಕಮರ್ಷಿಯಲ್ ಮೆರುಗು ಹೆಚ್ಚಿದೆ. ಹಿನ್ನೆಲೆ ಸಂಗೀತದಲ್ಲಿ ಅವರಿಗೆ ವಿ. ಹರಿಕೃಷ್ಣ ಪೈಪೋಟಿ ನೀಡಿದ್ದಾರೆ. ರಾಘವ ಮತ್ತು ರಾಬರ್ಟ್​ ಎಂಬ ಎರಡು ಶೇಡ್​ಗೆ ತಕ್ಕಂತೆಯೇ ಅಂಡರ್​ವರ್ಲ್ಡ್​ ಹಾಗೂ ಫ್ಯಾಮಿಲಿ ಸೆಂಟಿಮೆಂಟ್​ ಸನ್ನಿವೇಶಗಳನ್ನು ಬೇರೆ ಬೇರೆ ರೀತಿಯ ಫೀಲ್​ ಬರುವಂತೆ ಛಾಯಾಗ್ರಾಹಕ ಸುಧಾಕರ್​ ಎಸ್. ರಾಜ್ ಸೆರೆ ಹಿಡಿದಿದ್ದಾರೆ. ಒಟ್ಟಾರೆಯಾಗಿ ಈ ಸಿನಿಮಾ ದರ್ಶನ್​ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತದೆ.

ಇದನ್ನೂ ಓದಿ: Roberrt Twitter Review: ರಾಬರ್ಟ್​ ಸಿನಿಮಾಗೆ ಥಂಮ್ಸ್​ ಅಪ್​ ತೋರಿದ ಟ್ವಿಟ್ಟರ್​ ಮಂದಿ

Roberrt Movie: ದರ್ಶನ್ ಕಟೌಟ್​ಗೆ ಬಿಯರ್​ನಿಂದ ಅಭಿಷೇಕ; ವಿಡಿಯೋ ವೈರಲ್

Published On - 1:25 pm, Thu, 11 March 21

ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ