AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು ಎಲ್ಲೆಲ್ಲೋ ಮುಟ್ಟುತ್ತಾರೆ ಎಂದು ನಿಧಿ ದೂರಿದಾಗ ಮರುಗಿದ್ದ ಪ್ರಶಾಂತ್​ ಸಂಬರಗಿ ಆಮೇಲೆ ಉಲ್ಟಾ ಹೊಡೆದು ಬಿಟ್ಟರು!

ಮಂಜು ಮತ್ತು ಶಮಂತ್​ ಉದ್ದೇಶಪೂರ್ವಕವಾಗಿ ಪರಚುತ್ತಿದ್ದಾರೆ. ಬೇಕೆಂತಲೇ ಅವರು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ ಎನ್ನುವ ಆರೋಪವನ್ನು ನಿಧಿ ಮಾಡಿದ್ದರು. ಇದನ್ನು ಕೇಳಿ ಪ್ರಶಾಂತ್​ ಸಂಬರಗಿ ನೊಂದುಕೊಂಡರು. ರಾತ್ರಿ ವೇಳೆಗೆ ಪ್ರಶಾಂತ್​ ಉಲ್ಟಾ ಹೊಡೆದುಬಿಟ್ಟರು.

ಮಂಜು ಎಲ್ಲೆಲ್ಲೋ ಮುಟ್ಟುತ್ತಾರೆ ಎಂದು ನಿಧಿ ದೂರಿದಾಗ ಮರುಗಿದ್ದ ಪ್ರಶಾಂತ್​ ಸಂಬರಗಿ ಆಮೇಲೆ ಉಲ್ಟಾ ಹೊಡೆದು ಬಿಟ್ಟರು!
ಪ್ರಶಾಂತ್​-ನಿಧಿ
ರಾಜೇಶ್ ದುಗ್ಗುಮನೆ
|

Updated on: Mar 11, 2021 | 11:47 AM

Share

ಬಿಗ್​ ಬಾಸ್​ ಮನೆಯಲ್ಲಿ ಏನೆಲ್ಲ ಆಗುತ್ತದೆ, ಯಾರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಊಹೀಸೋದು ತುಂಬಾನೇ ಕಷ್ಟ. ಈಗ ಕನ್ನಡ ಬಿಗ್​ ಬಾಸ್​ ಮನೆಯಲ್ಲೂ ಅದೇ ರೀತಿ ಆಗುತ್ತಿದೆ. ಎಲ್ಲಾ ಸದಸ್ಯರು ತಮ್ಮ ಅಸಲಿ ಮುಖವನ್ನು ಅನಾವರಣ ಮಾಡುತ್ತಿದೆ. ಅದೇ ಮನೆ ಒಳಗೆ ತೆರಳಿರುವ ಪ್ರಶಾಂತ್​ ಸಂಭರಗಿ ಡಬಲ್​ ಗೇಮ್​ ಆಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ನಿನ್ನೆ ನಡೆದ ಘಟನೆ ಹೊಸ ಉದಾಹರಣೆ. ಮಂಜು ಮತ್ತು ಶಮಂತ್​ ಉದ್ದೇಶಪೂರ್ವಕವಾಗಿ ಪರಚುತ್ತಿದ್ದಾರೆ. ಬೇಕೆಂತಲೇ ಅವರು ಎಲ್ಲೆಲ್ಲೋ ಮುಟ್ಟುತ್ತಿದ್ದಾರೆ. ನಮ್ಮ ತಂಡದವರು ಯಾರೊಬ್ಬರೂ ಹುಡುಗಿಯನ್ನು ಮುಟ್ಟಿಲ್ಲ. ಆದರೆ, ಅವರು ತಂಡದವರು ಹಾಗಲ್ಲ. ಪ್ಲ್ಯಾನ್​ ಮಾಡಿ ಅವರು ಬಂದು ನಮ್ಮನ್ನು ಹಿಡಿದುಕೊಳ್ಳುತ್ತಿದ್ದಾರೆ. ತುಂಬಾನೇ ರಫ್​ ಆಗಿ ನಡೆಸಿಕೊಳ್ಳುತ್ತಿದ್ದಾರೆ. ಮಂಜು ಬಂದು ನನ್ನನ್ನು ಎಲ್ಲೆಲ್ಲೋ ಮುಟ್ಟಿ ಎಸೆದಿದ್ದಾರೆ. ನಮಗೆ ಹೇಸಿಗೆ ಎನಿಸುತ್ತಿದೆ. ಈ ಆಟ ಸಾಕು ಇಲ್ಲಿಗೆ ನಿಲ್ಲಿಸಿ ಎಂದು ನಿಧಿ ಕಣ್ಣೀರು ಹಾಕಿದ್ದರು. ಇದನ್ನು ಕೇಳಿ ಪ್ರಶಾಂತ್​ ಸಂಬರಗಿ ನೊಂದುಕೊಂಡರು.

ಆದರೆ, ರಾತ್ರಿ ವೇಳೆಗೆ ಪ್ರಶಾಂತ್​ ಉಲ್ಟಾ ಹೊಡೆದುಬಿಟ್ಟರು. ನಿಧಿ ಆಟವನ್ನು ಹಗುರವಾಗಿ ಪರಿಗಣಿಸಿದರು ಎನ್ನುವ ಆರೋಪ ಮಾಡಿದರು. ನಂತರ ಮಂಜು ಬಳಿ ಹೋದ ಪ್ರಶಾಂತ್, ನಿಧಿ ಅಸಹ್ಯ ಮಾಡಿ ಬಿಟ್ಟರು. ನಮ್ಮ ಟೀಂನಲ್ಲಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಬಿಟ್ಟುಕೊಡೋಕೆ ಆಗಿಲ್ಲ ಎಂದಿದ್ದಾರೆ.

ಬಿಗ್​ ಬಾಸ್​ ಟಾಸ್ಕ್​ ರದ್ದು!

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಒಂದಷ್ಟು ಸದಸ್ಯರು ವೈರಸ್​ ಆದರೆ, ಉಳಿದ ಸದಸ್ಯರು ಮನುಷ್ಯರು. ಆದರೆ, ಈ ಗೇಮ್​ನಲ್ಲಿ ಕ್ರೀಡಾಸ್ಫೂರ್ತಿಯನ್ನು ಯಾರೂ ಮೆರೆದಿಲ್ಲ ಎನ್ನುವ ಕಾರಣಕ್ಕೆ ಬಿಗ್​ ಬಾಸ್​ ಆಟವನ್ನೇ ರದ್ದು ಮಾಡಿ ಛೀಮಾರಿ ಹಾಕಿದೆ.

ಇದನ್ನೂಓದಿ: ಅವರು ಎಲ್ಲೆಲ್ಲೋ ಮುಟ್ತಿದ್ದಾರೆ.. ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಟ್ಟ ನಿಧಿ ಸುಬ್ಬಯ್ಯ

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ