ಟಾಸ್ಕ್ ರದ್ದು ಮಾಡಲು ಕಾರಣರಾದವರಿಗೆ ಬಿಗ್ ಬಾಸ್ನಿಂದ ಶಿಕ್ಷೆ; ನಿಧಿ ಮುಖಕ್ಕೆ ಮಸಿ!
ಟಾಸ್ಕ್ನಲ್ಲಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡರು. ಕ್ರೀಡಾ ಸ್ಫೂರ್ತಿ ಮರೆತು ಪರಸ್ಪರ ದ್ವೇಷ ಬೆಳೆಸಿಕೊಂಡರು. ಇದಕ್ಕೆ ಬಿಗ್ ಬಾಸ್ ಸಿಟ್ಟಾಗಿ ಟಾಸ್ಕ್ ರದ್ದುಗೊಳಿಸುವ ಘೋಷಣೆ ಮಾಡಿದ್ದರು.
ಬಿಗ್ ಬಾಸ್ ಎರಡನೇ ವಾರದಲ್ಲಿ ನೀಡಲಾಗಿದ್ದ ಕಠಿಣ ಟಾಸ್ಕ್ಅನ್ನು ಯಶಸ್ವಿಗೊಳಿಸಲು ಮನೆಯ ಸದಸ್ಯರು ವಿಫಲರಾಗಿದ್ದರು. ಹಾಯಾಗಿ, ನಗು ನಗುತ್ತ ಆಡಬೇಕಿದ್ದ ಟಾಸ್ಕ್ನಲ್ಲಿ ಒಬ್ಬರಿಗೊಬ್ಬರು ಕಿತ್ತಾಟ ಮಾಡಿಕೊಂಡು, ಪರಸ್ಪರ ದ್ವೇಷ ಬೆಳೆಸಿಕೊಂಡಿದ್ದರು. ಇದಕ್ಕೆ ಸಿಟ್ಟಾದ ಬಿಗ್ ಬಾಸ್ ಟಾಸ್ಕ್ಅನ್ನು ಕ್ಯಾನ್ಸಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಮನೆ ಮಂದಿಗೆ ಸೂಕ್ತ ಶಿಕ್ಷೆಯನ್ನು ಕೂಡ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವೈರಸ್ ಹಾಗೂ ಮನುಷ್ಯರು ಎನ್ನುವ ಆಧಾರದ ಮೇಲೆ ಟಾಸ್ಕ್ ನೀಡಲಾಗಿತ್ತು. ಮನೆಯ ಒಂದಷ್ಟು ಸದಸ್ಯರು ವೈರಸ್ ಆದರೆ, ಮತ್ತೊಂದಷ್ಟು ಸದಸ್ಯರು ಮನುಷ್ಯರು. ವೈರಸ್ ತಂಡಕ್ಕೆ ಪ್ರಶಾಂತ್ ಸಂಬರಗಿ ಕ್ಯಾಪ್ಟನ್. ಮನುಷ್ಯರ ತಂಡಕ್ಕೆ ಲ್ಯಾಗ್ ಮಂಜು ನಾಯಕರಾಗಿದ್ದರು. ವೈರಸ್ ದಾಳಿಗೆ ತುತ್ತಾಗದಂತೆ ಮನುಷ್ಯರು ಎಚ್ಚರವಿರಬೇಕು. ವೈರಸ್ ತಂಡ ಮಾಡುವ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ಇದು ಸಾಧ್ಯವಾಗದೆ ಇದ್ದರೆ ಮನುಷ್ಯ ತಂಡದ ಒಬ್ಬ ಸದಸ್ಯ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ಅವಧಿ ಅರ್ಧ ಗಂಟೆ. ಈ ವೇಳೆ ಮನುಷ್ಯ ತಂಡದವರು ಹಗ್ಗ ಹಿಡಿದು ನಿಲ್ಲಬೇಕು. ಆಗ ವೈರಸ್ ತಂಡದವರು ತೊಂದರೆ ನೀಡಬೇಕು. ಆದರೆ, ಬಾಡಿ ಟಚ್ ಮಾಡುವಂತಿಲ್ಲ. ಒಂದೊಮ್ಮೆ, ಕ್ವಾರಂಟೈನ್ನಲ್ಲಿರುವವರು ಹಗ್ಗವನ್ನು ಕೈಬಿಟ್ಟರೆ ಅವರು ಸೋತಂತೆ. ಅವರು ಈ ಆಟದಿಂದ ಹೊರಗಿರಬೇಕು. ಕೊನೆಯಲ್ಲಿ ಯಾವ ತಂಡದಲ್ಲಿ ಹೆಚ್ಚು ಜನರು ಉಳಿಯುತ್ತಾರೋ ಅವರೇ ಗೆದ್ದಂತೆ.
ಈ ಟಾಸ್ಕ್ನಲ್ಲಿ ಒಬ್ಬರಿಗೊಬ್ಬರು ಕಿತ್ತಾಡಿಕೊಂಡರು. ಕ್ರೀಡಾ ಸ್ಫೂರ್ತಿ ಮರೆತು ಪರಸ್ಪರ ದ್ವೇಷ ಬೆಳೆಸಿಕೊಂಡರು. ಇದಕ್ಕೆ ಬಿಗ್ ಬಾಸ್ ಸಿಟ್ಟಾಗಿ ಟಾಸ್ಕ್ ರದ್ದುಗೊಳಿಸುವ ಘೋಷಣೆ ಮಾಡಿದರು. ಅಷ್ಟೇ ಅಲ್ಲ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಿಕ್ಷೆ ಕೂಡ ನೀಡಿದ್ದಾರೆ.
ಇಂದು ಕಲರ್ಸ್ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ, ಶಿಕ್ಷೆಯ ಬಗ್ಗೆ ವಿವರಿಸಲಾಗಿದೆ. ಒಂದು ಕಡೆ ಮಸಿ ಇಡಲಾಗುತ್ತದೆ. ಪ್ರತಿ ಸ್ಪರ್ಧಿಯೂ ಗೇಮ್ ರದ್ದಾಗಲು ಕಾರಣ ಯಾರು ಎಂದು ಗುರುತಿಸಿ ಅವರಿಗೆ ಮಸಿ ಬಳಿಯಬೇಕು. ಲ್ಯಾಗ್ ಮಂಜು ದಿವ್ಯಾ ಅವರಿಗೆ ಮಸಿ ಬಳಿದಿದ್ದಾರೆ. ಇನ್ನು, ನಿಧಿ ಟಾಸ್ಕ್ಅನ್ನು ತುಂಬಾನೇ ವೈಯಕ್ತಿಕವಾಗಿ ತೆಗೆದುಕೊಂಡು ಇಲ್ಲಸಲ್ಲದ ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ಅವರಿಗೆ ಹೆಚ್ಚು ಸದಸ್ಯರು ಮಸಿ ಬಳಿದಿದ್ದಾರೆ.
View this post on Instagram
ಇದನ್ನೂ ಓದಿ: ಅವರು ಎಲ್ಲೆಲ್ಲೋ ಮುಟ್ತಿದ್ದಾರೆ.. ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ನಿಧಿ ಸುಬ್ಬಯ್ಯ