Roberrt 2nd Day Collection: ರಾಬರ್ಟ್​ ಸಿನಿಮಾ ಎರಡನೇ ದಿನ ಯಾವ ಜಿಲ್ಲೆಯಲ್ಲಿ ಎಷ್ಟು ಕಲೆಕ್ಷನ್​ ಮಾಡಿದೆ? ಇಲ್ಲಿದೆ ವಿವರ

ನೂರಾರು ಥಿಯೇಟರ್​​ಗಳಲ್ಲಿ ರಾಬರ್ಟ್ ಸಿನಿಮಾ ರಿಲೀಸ್​ ಆಗಿತ್ತು. ಒಂದೂವರೆ ವರ್ಷದಿಂದ ರಾಬರ್ಟ್​​ಗಾಗಿ ಕಾದು ಕೂತಿದ್ದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

Roberrt 2nd Day Collection: ರಾಬರ್ಟ್​ ಸಿನಿಮಾ ಎರಡನೇ ದಿನ ಯಾವ ಜಿಲ್ಲೆಯಲ್ಲಿ ಎಷ್ಟು ಕಲೆಕ್ಷನ್​ ಮಾಡಿದೆ? ಇಲ್ಲಿದೆ ವಿವರ
ದರ್ಶನ್​
Follow us
ರಾಜೇಶ್ ದುಗ್ಗುಮನೆ
|

Updated on: Mar 13, 2021 | 3:26 PM

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟೆಯ ರಾಬರ್ಟ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ತನ್ನ ಪಾರುಪತ್ಯವನ್ನು ಮುಂದುವರಿಸಿದೆ. ಮೊದಲ ದಿನ 17 ಕೋಟಿ ರೂಪಾಯಿ ಹಾಗೂ ಎರಡನೇ ದಿನ 12.7 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಸಿನಿಮಾ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಭಿಮಾನಿಗಳು ಈ ಸಿನಿಮಾವನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು, ಬಹುತೇಕ ಶೋಗಳ ಹೌಸ್​ ಫುಲ್​ ಆಗುತ್ತಿವೆ. ಪರಿಣಾಮವಾಗಿ, ಬಾಕ್ಸ್​ ಆಫೀಸ್​ನಲ್ಲಿ ದರ್ಶನ್​ ಧೂಳೆಬ್ಬಿಸುತ್ತಿದ್ದಾರೆ. ನೂರಾರು ಥಿಯೇಟರ್​​ಗಳಲ್ಲಿ ರಾಬರ್ಟ್ ಸಿನಿಮಾ ರಿಲೀಸ್​ ಆಗಿತ್ತು. ಒಂದೂವರೆ ವರ್ಷದಿಂದ ರಾಬರ್ಟ್​​ಗಾಗಿ ಕಾದು ಕೂತಿದ್ದ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಮೂರನೇ ದಿನವೂ ಟಿಕೆಟ್​ಗಳನ್ನು ಎಲ್ಲರೂ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ಕೋಟ್ಯಂತರ ರೂ. ಗಳಿಕೆ ಆಗುತ್ತಿದೆ.

ಬೆಂಗಳೂರು, ಕೋಲಾರ, ತುಮಕೂರು ಮತ್ತು ದಕ್ಷಿಣ ಕನ್ನಡ ಸೇರಿ 5 ಕೋಟಿ ರೂ. ಕಲೆಕ್ಷನ್​ ಆಗಿದೆ. ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಿಂದ 2 ಕೋಟಿ ರೂ. ಗಳಿಕೆ ಆಗಿದೆ. ಚಿತ್ರದುರ್ಗ ಮತ್ತು ದಾವಣಗೆರೆಯಿಂದ 1.15 ಕೋಟಿ ರೂ. ಬಾಚಿಕೊಳ್ಳಲಾಗಿದೆ. ಹೈದರಾಬಾದ್​ ಕರ್ನಾಟಕ ಹಾಗೂ ಹಾಗೂ ಬಾಂಬೆ ಕರ್ನಾಟಕ ಭಾಗಗಳಿಂದ ಕ್ರಮವಾಗಿ 2 ಕೋಟಿ ಮತ್ತು 1.5 ಕೋಟಿ ರೂ. ಕಲೆಕ್ಷನ್​ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.

ಗುರುವಾರ ಶಿವರಾತ್ರಿ ಹಬ್ಬದ ಪ್ರಯುಕ್ತ ತೆರೆಕಂಡಿದ್ದರಿಂದ ‘ರಾಬರ್ಟ್​’ಗೆ ರಜಾ ದಿನದ ಅನುಕೂಲ ಆಗಿತ್ತು. ಶುಕ್ರವಾರ ಚಿತ್ರರಂಗಕ್ಕೆ ವಿಶೇಷ ದಿನ. ಹೀಗಾಗಿ, ಅಭಿಮಾನಿಗಳು ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಇನ್ನು ಇನ್ನು ವೀಕೆಂಡ್​ನಲ್ಲಿಯೂ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ. ಮಾಸ್​ ಅಭಿಮಾನಿಗಳಿಗೆ ಮಾತ್ರವಲ್ಲದೆ, ಫ್ಯಾಮಿಲಿ ಪ್ರೇಕ್ಷಕರನ್ನೂ ಈ ಸಿನಿಮಾ ಸೆಳೆದುಕೊಳ್ಳುತ್ತಿದೆ. ಇದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಮೂರನೇ ದಿನವಾದ ಶನಿವಾರ (ಮಾ.13) ಸಿನಿಮಾ ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್​ ಅವರು ರಾಬರ್ಟ್​ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್​ ಅವರು ಹೊಸ ಕಥೆ ಬರೆದು ‘ರಾಬರ್ಟ್​’ ಸಿನಿಮಾ ಮಾಡಿದ್ದಾರೆ. ಆಶಾ ಭಟ್​ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್​​ ಪ್ರಭಾಕರ್​, ರವಿಶಂಕರ್​, ಸೋನಲ್​ ಮಂಥೆರೋ, ಚಿಕ್ಕಣ್ಣ, ಅವಿನಾಶ್​, ದೇವರಾಜ್​, ಶಿವರಾಜ್​ ಕೆ.ಆರ್​. ಪೇಟೆ, ಐಶ್ವರ್ಯಾ ಪ್ರಸಾದ್​ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಎರಡನೇ ದಿನವೂ ಬಾಕ್ಸ್​ ಆಫೀಸ್​ನಲ್ಲಿ ರಾಬರ್ಟ್​ ಹವಾ..ಮೂರೇ ದಿನಕ್ಕೆ 50 ಕೋಟಿ ದಾಟಲಿದೆ ಕಲೆಕ್ಷನ್​?