Darshan: ರಿಯಲ್ ಸಾರಥಿ ಜೊತೆ ರೀಲ್​ ಸಾರಥಿ ಭೇಟಿ! ಡಿ ಬಾಸ್​ ದರ್ಶನ್​ ಬಾಲ್ಯದ ವಿಶೇಷ ವ್ಯಕ್ತಿ ಇವರು

ಸದ್ಯ ದರ್ಶನ್​ ಭೇಟಿಯಾಗಿರುವ ವಿಶೇಷ ವ್ಯಕ್ತಿಯ ಹೆಸರು ಸುಂದರ್​ ರಾಜ್​. ಶಾಲೆ ಮಕ್ಕಳು ಅವರನ್ನು ಪ್ರೀತಿಯಿಂದ ಸುಂದರ್​ ಅಂಕಲ್​ ಎಂದು ಕರೆಯುತ್ತಿದ್ದರು. ಅದೇ ಪ್ರೀತಿಯನ್ನು ದರ್ಶನ್​ ಇಂದಿಗೂ ಇಟ್ಟುಕೊಂಡಿದ್ದಾರೆ.

Darshan: ರಿಯಲ್ ಸಾರಥಿ ಜೊತೆ ರೀಲ್​ ಸಾರಥಿ ಭೇಟಿ! ಡಿ ಬಾಸ್​ ದರ್ಶನ್​ ಬಾಲ್ಯದ ವಿಶೇಷ ವ್ಯಕ್ತಿ ಇವರು
ದರ್ಶನ್​ - ಸುಂದರ್​ ರಾಜ್​
Follow us
ಮದನ್​ ಕುಮಾರ್​
| Updated By: ಆಯೇಷಾ ಬಾನು

Updated on: Mar 23, 2021 | 8:48 AM

ನಟ ದರ್ಶನ್​ ಅವರು ಆಗಾಗ ತಮ್ಮ ಸರಳತೆಯ ಕಾರಣದಿಂದ ಸುದ್ದಿ ಆಗುತ್ತಿರುತ್ತಾರೆ. ಎಷ್ಟೇ ದೊಡ್ಡ ಸ್ಟಾರ್​ ಆಗಿದ್ದರೂ ಅವರು ತಮ್ಮ ಹಳೇ ದಿನಗಳನ್ನು ಮರೆತಿಲ್ಲ. ತಾವು ನಡೆದುಬಂದ ಕಷ್ಟದ ದಿನಗಳ ಬಗ್ಗೆ, ಜೊತೆಗಿದ್ದ ಸ್ನೇಹಿತರ ಬಗ್ಗೆ ಡಿ ಬಾಸ್​ ಆಗಾಗ ಮಾತನಾಡುತ್ತಾರೆ. ವಿಶೇಷ ಏನೆಂದರೆ, ಈಗ ಓರ್ವ ಸ್ಪೆಷಲ್​ ವ್ಯಕ್ತಿಯನ್ನು ದರ್ಶನ್​ ಭೇಟಿಯಾಗಿದ್ದಾರೆ. ಆ ಭೇಟಿಯ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ದರ್ಶನ್​ ಅವರಿಗೆ ಮೈಸೂರಿನ ಜೊತೆ ವಿಶೇಷ ನಂಟು ಇದೆ. ಮೈಸೂರಿನಲ್ಲಿ ಅವರು ಬಾಲ್ಯ ಕಳೆದಿದ್ದಾರೆ. ಅಂದು ಅವರು ಶಾಲೆಗೆ ಹೋಗುತ್ತಿದ್ದ ಬಸ್​ನ ಚಾಲಕರನ್ನು ದರ್ಶನ್​ ಇಂದು ನೆನಪು ಮಾಡಿಕೊಂಡಿದ್ದಾರೆ. ಅವರ ಮನೆಗೆ ಭೇಟಿ ನೀಡಿ, ಕೆಲವು ಸಮಯ ಕಳೆದು ಬಂದಿದ್ದಾರೆ. ಆ ಖುಷಿಯನ್ನು ಅಭಿಮಾನಿಗಳ ಜೊತೆ ‘ಚಾಲೆಂಜಿಂಗ್​ ಸ್ಟಾರ್​’ ಹಂಚಿಕೊಂಡಿದ್ದಾರೆ.

‘ರಿಯಲ್​ ಸಾರಥಿ ಜೊತೆ ಸಾರಥಿಯ ಭೇಟಿ. ನಾವು ಶಾಲೆಗೆ ಹೋಗುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನ ಡ್ರೈವರ್​ ಇವರು. ಇಂದು ಅವರ 80ನೇ ಹುಟ್ಟುಹಬ್ಬದ ಸಲುವಾಗಿ ಭೇಟಿಯಾಗಿ ವಿಶ್​ ಮಾಡಿದ್ದೇನೆ. ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ’ ಎಂದು ಟ್ವಿಟರ್​ನಲ್ಲಿ ದರ್ಶನ್​ ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಎಲ್ಲೆಡೆ ಶೇರ್​ ಮಾಡುತ್ತಿದ್ದಾರೆ.

ಈಗಲೂ ದರ್ಶನ್​ಗೆ ಮೈಸೂರು ಎಂದರೆ ವಿಶೇಷ ಪ್ರೀತಿ. ಸಮಯ ಸಿಕ್ಕಾಗಲೆಲ್ಲ ಅವರು ಅಲ್ಲಿಗೆ ತೆರಳುತ್ತಾರೆ. ಶೂಟಿಂಗ್​ ಬಿಡುವಿನಲ್ಲಿ ಮೈಸೂರಿನ ತಮ್ಮ ಹಳೇ ಸ್ನೇಹಿತರನ್ನು ಭೇಟಿ ಮಾಡುತ್ತಾರೆ. ತಾವೊಬ್ಬ ಸೂಪರ್​ ಸ್ಟಾರ್​ ಎಂಬುದನ್ನು ಬದಿಗಿಟ್ಟು ಎಲ್ಲರ ಜೊತೆ ಬೆರೆಯುತ್ತಾರೆ. ಅದಕ್ಕೆ ಈ ಘಟನೆಯೇ ಲೇಟೆಸ್ಟ್​ ಉದಾಹರಣೆ. ಸದ್ಯ ದರ್ಶನ್​ ಭೇಟಿಯಾಗಿರುವ ವಿಶೇಷ ವ್ಯಕ್ತಿಯ ಹೆಸರು ಸುಂದರ್​ ರಾಜ್​. ಶಾಲೆ ಮಕ್ಕಳು ಅವರನ್ನು ಪ್ರೀತಿಯಿಂದ ಸುಂದರ್​ ಅಂಕಲ್​ ಎಂದು ಕರೆಯುತ್ತಿದ್ದರು. ಅದೇ ಪ್ರೀತಿಯನ್ನು ದರ್ಶನ್​ ಇಂದಿಗೂ ಇಟ್ಟುಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ದರ್ಶನ್​ ನಟನೆಯ ‘ರಾಬರ್ಟ್​’ ಚಿತ್ರ ಭಾರಿ ಯಶಸ್ಸು ಕಂಡಿದೆ. ಮೊದಲ ವಾರ 78.36 ಕೋಟಿ ರೂ. ಗಳಿಸಿದ ಈ ಸಿನಿಮಾ ದರ್ಶನ್​ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ನೀಡಿದೆ. ಪ್ರೇಕ್ಷಕರು ಎರಡನೇ ವಾರ ಕೂಡ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರು ಸಹ ರಾಬರ್ಟ್​ಗೆ ಮನ ಸೋತಿದ್ದಾರೆ. ಕೊರೊನಾ ಎರಡನೇ ಅಲೆ ಭೀತಿ ನಡುವೆಯೂ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಇದನ್ನೂ ಓದಿ: ಮಂತ್ರಾಲಯದ ಗೋಶಾಲೆಯಲ್ಲಿ ಕಾಲ ಕಳೆದ ಡಿ ಬಾಸ್​ ದರ್ಶನ್​! ವಿಡಿಯೋ ವೈರಲ್​

Roberrt First Week Collection: ರಾಬರ್ಟ್​ ಗಳಿಕೆ ಒಂದು ವಾರಕ್ಕೆ 78.36 ಕೋಟಿ! ತೆಲುಗು ಕಲೆಕ್ಷನ್​ ಎಷ್ಟು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ