National Film Awards 2019: ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಒಲಿದ ರಾಷ್ಟ್ರ ಪ್ರಶಸ್ತಿ
Avane Srimannarayana: ಕೊರೊನಾ ವೈರಸ್ ಹಿನ್ನೆಲೆಯಲ್ಲಿ 2019ರಲ್ಲಿ ಪ್ರಶಸ್ತಿ ಘೋಷಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಈಗ ಈ ಘೋಷಣೆಯನ್ನು ಮಾಡಲಾಗಿದೆ.
ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ 2019ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಲಭಿಸಿದೆ. ಚಿತ್ರಕ್ಕೆ ವಿಕ್ರಮಂ ಮೋರ್ ಅವರು ಸಾಹಸ ನಿರ್ದೇಶನ ಮಾಡಿದ್ದರು. ಇನ್ನು ಬೆಸ್ಟ್ ಬುಕ್ ಆನ್ ಸಿನಿಮಾ ವಿಭಾಗದಲ್ಲಿ ಎರಡನೇ ವಿಜೇತರಾಗಿ ಪಿ.ಆರ್ ರಾಮದಾಸ ನಾಯ್ಡು ಆಯ್ಕೆ ಆಗಿದ್ದಾರೆ. ಅವರು ‘ಜಾಗತಿಕಾ ಸಿನಿಮಾ’ ಹೆಸರಿನ ಪುಸ್ತಕ ಬರೆದಿದ್ದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ 2019ರಲ್ಲಿ ಪ್ರಶಸ್ತಿ ಘೋಷಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಈಗ ಈ ಘೋಷಣೆಯನ್ನು ಮಾಡಲಾಗಿದೆ. ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ‘ಅಕ್ಷಿ’ಗೆ ಲಭ್ಯವಾಗಿದೆ.
ಅತ್ಯುತ್ತಮ ಸಿನಿಮಾ: ಮರಕ್ಕರ್: ಲೈನ್ ಆಫ್ ದಿ ಅರೇಬಿಯನ್ ಸೀ
ಅತ್ಯುತ್ತಮ ನಟ: ಧನುಷ್ (ಅಸುರನ್) ಮನೋಜ್ ಬಾಜಪಯ್ (ಭೋನ್ಸ್ಲೆ)
ಅತ್ಯುತ್ತಮ ನಿರ್ದೇಶನ: ಬಹತಾರ್ ಹುರೈನ್
ಅತ್ಯುತ್ತಮ ಪೋಷಕ ನಟ: ವಿಜಯ್ ಸೇತುಪತಿ (ಸೂಪರ್ ಡಿಲಕ್ಸ್)
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಶಿ (ದಿ ತಾಷ್ಕೆಂಟ್ ಫೈಲ್ಸ್)
ಅತ್ಯುತ್ತಮ ನೃತ್ಯ ನಿರ್ದೇಶನ: ಮಹರ್ಷಿ (ತೆಲುಗು)
ಅತ್ಯುತ್ತಮ ಜನಪ್ರಿಯ ಮನರಂಜನೆ ಸಿನಿಮಾ: ಮಹರ್ಷಿ (ತೆಲುಗು)
ಅತ್ಯುತ್ತಮ ಗೀತ ಸಾಹಿತ್ಯ: ಪ್ರಭಾವರ್ಮಾ-ಕೊಲಾಂಬಿ (ಮಲಯಾಳಂ)
ಅತ್ಯುತ್ತಮ ಸಂಗೀತ ನಿರ್ದೇಶಕ: ಡಿ. ಇಮ್ಮಾನ್-ವಿಶ್ವಾಸಮ್ (ತಮಿಳ್ )
ಅತ್ಯುತ್ತಮ ಸಂಕಲನ: ಜೆರ್ಸಿ (ತೆಲುಗು)
ಅತ್ಯುತ್ತಮ ಮೇಕಪ್ ಆರ್ಟಿಸ್ಟ್: ರಂಜಿತ್-ಹೆಲನ್ (ಮಲಯಾಳಂ)
ಚೊಚ್ಚಲ ಅತ್ಯುತ್ತಮ ನಿರ್ದೇಶನ:ಮತ್ತುಕುಟ್ಟಿ ಹೆಲನ್ (ಮಲಯಾಳಂ)
ಅತ್ಯುತ್ತಮ ಮಕ್ಕಳ ಚಿತ್ರ: ಕಸ್ತೂರಿ (ಹಿಂದಿ)
ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ: ಆನಂದಿ ಗೋಪಾಲ್ (ಮರಾಠಿ)
ಅವನೇ ಶ್ರೀಮನ್ನಾರಾಯಣ ಸಿನಿಮಾ 2019ರಲ್ಲಿ ತೆರೆಗೆ ಬಂದಿತ್ತು. ರಕ್ಷಿತ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ ಕಾಣಿಸಿಕೊಂಡಿದ್ದರು. ಸಚಿನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಭಾರೀ ನಿರೀಕ್ಷೆಗಳೊಂದಿಗೆ ತೆರೆಕಂಡಿದ್ದ ಈ ಚಿತ್ರ, ಬಾಕ್ಸ್ ಆಫೀಸ್ನಲ್ಲೂ ಉತ್ತರಮ ಗಳಿಕೆ ಮಾಡಿತ್ತು. ಸಂಪೂರ್ಣ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿತ್ತು. ಅದಕ್ಕೆ ತಕ್ಕಂತೆ ಆ್ಯಕ್ಷನ್ ದೃಶ್ಯಗಳನ್ನು ವಿಕ್ರಮಂ ಮೋರ್ ಸಂಯೋಜಿಸಿದ್ದರು.
ಇದನ್ನೂ ಓದಿ: Grammys 2021: 28ನೇ ಬಾರಿ ಪ್ರಶಸ್ತಿಗೆ ಪಾತ್ರರಾಗಿ ದಾಖಲೆ ನಿರ್ಮಿಸಿದ ಅಮೆರಿಕದ ಗಾಯಕಿ ಬಿಯಾನ್ಸ್
Published On - 4:57 pm, Mon, 22 March 21
ಅತ್ಯುತ್ತಮ ನಟಿ: ಕಂಗನಾ ರಣಾವತ್ (ಮಣಿಕರ್ಣಿಕಾ, ಪಂಗಾ)