Grammys 2021: 28ನೇ ಬಾರಿ ಪ್ರಶಸ್ತಿಗೆ ಪಾತ್ರರಾಗಿ ದಾಖಲೆ ನಿರ್ಮಿಸಿದ ಅಮೆರಿಕದ ಗಾಯಕಿ ಬಿಯಾನ್ಸ್

Grammy Awards 2021 Winners: ಸಂಗೀತ ಪ್ರಪಂಚದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಅಮೆರಿಕದಲ್ಲಿ ನಡೆಯಿತು. ಖ್ಯಾತ ಗಾಯಕಿ ಬಿಯಾನ್ಸ್ ಜಿಸೆಲ್ ನಾವೆಲ್ಸ್ 28ನೇ ಗ್ರ್ಯಾಮಿ ಪ್ರಶಸ್ತಿ ಪಡೆಯುವ ಮೂಲಕ ಅತಿಹೆಚ್ಚು ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಹಿರಿಮೆಗೆ ಪಾತ್ರರಾದರು.

Grammys 2021: 28ನೇ ಬಾರಿ ಪ್ರಶಸ್ತಿಗೆ ಪಾತ್ರರಾಗಿ ದಾಖಲೆ ನಿರ್ಮಿಸಿದ ಅಮೆರಿಕದ ಗಾಯಕಿ ಬಿಯಾನ್ಸ್
28ನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ಬಿಯಾನ್ಸ್
Follow us
|

Updated on:Mar 15, 2021 | 7:26 PM

ನವದೆಹಲಿ: ಅಮೆರಿಕದ ಪ್ರಖ್ಯಾತ ಗಾಯಕಿ, ಲೇಖಕಿ, ನಟಿ, ನಿರ್ದೇಶಕಿ ಮತ್ತು ಮಾನವತಾವಾದಿ ಬಿಯಾನ್ಸ್ ಜಿಸೆಲ್ ನಾವೆಲ್ಸ್-ಕಾರ್ಟರ್ ರವಿವಾರದಂದು ಲಾಸ್ ಏಂಜೆಲ್ಸ್​ನಲ್ಲಿ ತಮ್ಮ 28ನೇ ಗ್ರ್ಯಾಮಿ ಪ್ರಶಸ್ತಿಯನ್ನು ಬಾಚಿಕೊಂಡು ಅತಿಹೆಚ್ಚು ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಹಿರಿಮೆಗೆ ಪಾತ್ರರಾದರು. ತಮ್ಮ ಬ್ಲ್ಯಾಕ್ ಪರೇಡ್​ ಸ್ಟುಡಿಯೋ ಆಲ್ಬಮ್​ನಲ್ಲಿನ ಅತ್ಯುತ್ತಮ ಆರ್ ಮತ್ತು ಬಿ ಪರ್ಫಾರ್ಮಾನ್ಸ್​ಗೆ ಪ್ರಶಸ್ತಿ ಗಿಟ್ಟಿಸಿದರು. ಗ್ರ್ಯಾಮಿಯ ಮೂರು ಪ್ರಮುಖ ಪ್ರಶಸ್ತಿಗಳು ಕಳೆದ ಬಾರಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದ ಬಿಲ್ಲೀ ಐಲಿಶ್ (ಎವೆರಿಥಿಂಗ್ ಐ ವಾಂಟೆಡ್ಗೆ ರೆಕಾರ್ಡ್ ಆಫ್ ದಿ ಇಯರ್ ಪ್ರಶಸ್ತಿ), ಟೇಲರ್ ಸ್ವಿಫ್ಟ್ (ಆಲ್ಬಮ್ ಆಫ್ ದಿ ಇಯರ್-‘ಫೋಕ್​ಲೋರ್’) ಮತ್ತು ಎಚ್.ಇ.ಆರ್ (ಸಾಂಗ್ ಆಫ್ ದಿ ಇಯರ್-‘ಐ ಕಾಂಟ್ ಬ್ರೀದ್’) ಪಾಲಾದವು. ಆದರೆ 63ನೇ ಆವೃತ್ತಿಯಲ್ಲಿ ಮೆಗನ್ ಅವರು ಮೂರು ಪ್ರಶಸ್ತಿಗಳನ್ನು-ಅತ್ಯುತ್ತಮ ಉದಯೋನ್ಮುಖ ಗಾಯಕ, ಅತ್ಯುತ್ತಮ ರ‍್ಯಾಪ್ ಹಾಡು ಮತ್ತು ಸ್ಯಾವೇಜ್​ಗಾಗಿ ಅತ್ಯುತ್ತಮ ರ‍್ಯಾಪ್ ಪರ್ಫಾರ್ಮನ್ಸ್​ಗೆ ಗೆದ್ದು ಗಮನ ಸೆಳೆದರು. ತಮ್ಮ ಭಾಷಣದಲ್ಲಿ ಮೆಗನ್​ಗೆ ಅಭಿನಂದನೆಗಳನ್ನು ಸಲ್ಲಸಿದ ಬಿಲ್ಲೀ ಐಲಿಷ್, ‘ಈ ಪ್ರಶಸ್ತಿಗಳಿಗೆ ನೀವು ಅರ್ಹರಾಗಿರುವಿರಿ’ ಎಂದು ಹೇಳಿದರು. ಮೇಗನ್ ಅವರ ‘ದಿ ಸ್ಟ್ಯಾಲಿಯನ್’ ಸಹ ರೆಕಾರ್ಡ್​ ಆಫ್ ದಿ ಇಯರ್ ಪ್ರಶಸ್ತಿಗೆ ನಾಮಿನೇಟ್ ಆಗಿತ್ತು.

ಸಂಗೀತ ಪ್ರಪಂಚದ ಅತಿದೊಡ್ಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ರವಿವಾರದಂದು ದಕ್ಷಿಣ ಆಫ್ರಿಕಾದ ಜನಪ್ರಿಯ ಹಾಸ್ಯ ಕಲಾವಿದ, ಟಿವಿ ನಿರೂಪಕ, ಲೇಖಕ ಮತ್ತು ರಾಜಕೀಯ ವಿಶ್ಲೇಷಕರಾಗಿರುವ ಟ್ರೇವರ್ ನೋಹಾ ಉದ್ಘಾಟಿಸಿದರು. ಜನವರಿಯಲ್ಲಿ ಆಗಿನ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ದ ನಡೆದ ನಡೆದ ರ‍್ಯಾಲಿಯ ನಂತರ ಆಮೇರಿಕದಲ್ಲಿ ನಡೆದಿರುವ ಅತಿದೊಡ್ಡ ಈವೆಂಟ್ ಇದಾಗಿರಬಹುದು ಎಂದು ಹೇಳಿದ ನೋಹಾ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು. ‘ಬಹಳ ಸಮಯದಿಂದ ನೀವೆಲ್ಲ ಯಾವುದೇ ಸಂಗೀತ ಕಛೇರಿಯಲ್ಲಿ ಪಾಲ್ಗೊಂಡಿಲ್ಲವೆಂದು ನಂಗೊತ್ತಿದೆ. ಆದಕ್ಕೆಂದೇ ಇಂದು ರಾತ್ರಿ ನಿಮಗಾಗಿ ಸಂಗೀತ ಸಂಜೆಯೊಂದನ್ನು ನಾವು ಸೃಷ್ಟಿಸಲಿದ್ದೇವೆ’ ಎಂದು ನೋಹಾ ಹೇಳಿದರು.

ಕಳೆದ ವರ್ಷ ತಮ್ಮ 73ನೇ ವಯಸ್ಸಿನಲ್ಲಿ ನಿಧನ ಹೊಂದಿದ ಅಮೆರಿಕದ ಜಾನಪದ ಗಾಯಕ ಜಾನ್ ಪ್ರೈನ್ ಅವರಿಗೆ ರೆಕಾರ್ಡಿಂಗ್ ಅಕಾಡೆಮಿ ವತಿಯಿಂದ ಬೆಸ್ಟ್​ ರೂಟ್ಸ್​ ಪರ್ಫಾರ್ಮನ್ಸ್ ಮತ್ತು ಬೆಸ್ಟ್ ರೂಟ್ಸ್​ ಸಾಂಗ್ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. ಹಾಗೆಯೇ ಇದೇ ವರ್ಷ ಫೆಬ್ರುವರಿಯಲ್ಲಿ ನಿಧನ ಹೊಂದಿದ ಚಿಕ್ ಕೊರಿಯಾ ಅವರಿಗೂ ಬೆಸ್ಟ್ ಜಾಝ್ ಸೊಲೊ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.

ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 31ರಂದು ಲಾಸ್​ ಏಂಜೆಲ್ಸ್​ನಲ್ಲಿ ನಡೆಯಬೇಕಿತ್ತು. ಆದರೆ ಕೊವಿಡ್​-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಮುಂದೂಡಲ್ಪಟ್ಟು ಮಾರ್ಚ್ 14ರಂದು ನಡೆಯಿತು.

63 rd Grammy Awards Ceremony

63ನೆ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭ

ಈ ಬಾರಿಯ ಗ್ರ್ಯಾಮಿ ಪ್ರಶಸ್ತಿಗಳ ವಿವರ ಕೆಳಗಿನಂತಿದೆ:

ವರ್ಷದ ರೆಕಾರ್ಡ್: ಬಿಲ್ಲೀ ಐಲಿಶ್ ಅವರ ‘ಎವೆರಿಥಿಂಗ್ ಐ ವಾಂಟೆಡ್’

ವರ್ಷದ ಆಲ್ಬಮ್: ಟೇಲರ್ ಸ್ವಿಫ್ಟ್​ ಅವರ ‘ಫೋಕ್​ಲೋರ್’

ವರ್ಷದ ಹಾಡು: ಎಚ್.ಇ.ಆರ್​ ಅವರ ‘ ಐ ಕಾಂಟ್​ ಬ್ರೀದ್’

ಅತ್ಯುತ್ತಮ ಉದಯೋನ್ಮುಖ ಕಲಾವಿದ: ಮೆಗನ್ ದಿ ಸ್ಟ್ಯಾಲಿಯನ್

ಅತ್ಯುತ್ತಮ ಪಾಪ್​ ಸೊಲೊ ಪ್ರದರ್ಶನ: ಹ್ಯಾರಿ ಸ್ಟೈಲ್ಸ್ ಅವರ ‘ವಾಟರ್​ಮೆಲನ್ ಶುಗರ್’

ಅತ್ಯುತ್ತಮ ಪಾಪ್ ಪರ್ಫಾರ್ಮನ್ಸ್ (ಯುಗಳ/ಗುಂಪು): ಜೇಮ್ಸ್ ಟೇಲರ್- ‘ಅಮೇರಿಕನ್ ಸ್ಟ್ಯಾಂಡರ್ಡ್’

ಅತ್ಯುತ್ತಮ ಪಾರಂಪರಿಕ ಹಾಡಿನ ಆಲ್ಬಮ್ (ವೋಕಲ್): ದುವಾ ಲಿಪಾ- ‘ಫ್ಯೂಚರ್ ನೊಸ್ಟಾಲ್ಜಿಯಾ’

ಅತ್ಯುತ್ತಮ ರಾಕ್​ ಪರ್ಫಾರ್ಮನ್ಸ್: ‘ಶಮೀಕಾ’-ಫಿಯೋನಾ ಆಪಲ್

ಅತ್ಯುತ್ತಮ ಮೆಟಲ್ ಪರ್ಫಾರ್ಮನ್ಸ್: ಬಾಡಿ ಕೌಂಟ್ ಅವರ ‘ಬಮ್-ರಶ್’

ಅತ್ಯುತ್ತಮ ರಾಕ್ ಹಾಡು: ‘ಸ್ಟೇ ಹೈ’-ಬ್ರಿಟಾನಿ ಹೊವರ್ಡ್

ಅತ್ಯುತ್ತಮ ರಾಕ್ ಅಲ್ಬಮ್: ‘ದಿ ನ್ಯೂ ಅಬ್ನಾರ್ಮಲ್’-ದಿ ಸ್ಟೋಕ್ಸ್

ಅತ್ಯುತ್ತಮ ಪರ್ಯಾಯ ಆಲ್ಬಮ್: ‘ಫೆಚ್​ ದಿ ಬೋಲ್ಟ್​ ಕಟ್ಟರ್’-ಫೀಯೋನಾ ಆ್ಯಪಲ್

ಅತ್ಯುತ್ತಮ ಆರ್ ಮತ್ತು ಬಿ ಪರ್ಫಾರ್ಮನ್ಸ್: ‘ಬ್ಲ್ಯಾಕ್ ಪರೇಡ್’

ಅತ್ಯುತ್ತಮ ಪರ್ಫಾರ್ಮನ್ಸ್ ಸಾಂಪ್ರದಾಯಿಕ ಆರ್ ಮತ್ತು ಬಿ ಪರ್ಫಾರ್ಮನ್ಸ್: ‘ಎನಿಥಿಂಗ್ ಫಾರ್ ಯೂ’-ಲೆಡಿಸಿ

ಅತ್ಯುತ್ತಮ ಆರ್ ಮತ್ತು ಬಿ ಹಾಡು: ‘ಬೆಟರ್ ದ್ಯಾನ್ ಐ ಇಮ್ಯಾಜಿನ್ಡ್’- ರಾಬರ್ಟ್ ಗ್ಲ್ಯಾಸ್ಪರ್

ಅತ್ಯುತ್ತಮ ಆರ್ ಮತ್ತು ಬಿ ಆಲ್ಬಮ್: ‘ಬಿಗ್ಗರ್ ಲವ್’- ಜಾನ್ ಲೆಜೆಂಡ್

ಅತ್ಯುತ್ತಮ ರ‍್ಯಾಪ್ ಪರ್ಫಾರ್ಮನ್ಸ್: ಬಿಯಾನ್ಸ್ ಕಾಣಿಸಿಕೊಂಡಿರುವ ಮೆಗನ್ ದೀ ಸ್ಟ್ಯಾಲಿಯನ್ ಅವರ ‘ಸ್ಯಾವೇಜ್’

ಅತ್ಯುತ್ತಮ ಸುಮಧರ ರ‍್ಯಾಪ್ ಪರ್ಫಾರ್ಮನ್ಸ್: ಌಂಡರ್ಸನ್​ ಅವರ ‘ಲಾಕ್​ಡೌನ್’

ಅತ್ಯುತ್ತಮ ರ‍್ಯಾಪ್ ಹಾಡು: ಬಿಯಾನ್ಸ್ ಕಾಣಿಸಿಕೊಂಡಿರುವ ಮೆಗನ್ ದೀ ಸ್ಟ್ಯಾಲಿಯನ್ ಅವರ ‘ಸ್ಯಾವೇಜ್’

ಅತ್ಯುತ್ತಮ ರ‍್ಯಾಪ್ ಆಲ್ಬಮ್: ನಾಸ್ ಅವರ ‘ಕಿಂಗ್ಸ್ ಡಿಸೀಸ್’

ಅತ್ಯುತ್ತಮ ನೃತ್ಯ ರೆಕಾರ್ಡಿಂಗ್: ಕಾಲಿ ಉಚಿಸ್ ಕಾಣಿಸಿಕೊಂಡಿರುವ ಕ್ಯಾಟ್ರಾನಡಾ ಅವರ ‘10%’

ಅತ್ಯುತ್ತಮ ನೃತ್ಯ ಎಲೆಕ್ಟ್ರಾನಿಕ್ ಆಲ್ಬಮ್: ಕ್ಯಾಟ್ರಾನಡಾ ಅವರ ‘ಬುಬ್ಬ’

ಅತ್ಯುತ್ತಮ ಸಮಾಕಾಲೀನ ಇನ್​ಸ್ಟ್ರುಮೆಂಟಲ್ ಆಲ್ಬಮ್: ‘ಲೈವ್ ಎಟ್​ ದಿ ರಾಯಲ್ ಆಲ್ಬರ್ಟ್ ಹಾಲ್’-ಸ್ನಾರ್ಕಿ ಪಪ್ಪಿ

ಅತ್ಯುತ್ತಮ ದೇಶೀ ಸೊಲೊ ಪರ್ಫಾರ್ಮನ್ಸ್: ‘ವೆನ್ ಮೈ ಆರ್ಮಿ ಪ್ರೇ’- ವಿನ್ಸ್ ಗಿಲ್

ಅತ್ಯುತ್ತಮ ದೇಶೀ ಪರ್ಫಾರ್ಮನ್ಸ್ (ಯುಗಳ/ ಗುಂಪು): ‘10,000 ಅವರ್ಸ್’- ಡ್ಯಾನ್ ಶೇ ಮತ್ತು ಜಸ್ಟಿನ್ ಬೀಬರ್

ಅತ್ಯುತ್ತಮ ದೇಶೀ ಹಾಡು: ‘ಕ್ರೌಡೆಡ್ ಟೇಬಲ್’- ದಿ ಹೈ ವುಮೆನ್

ಅತ್ಯುತ್ತಮ ದೇಶೀ ಆಲ್ಬಮ್: ‘ವೈಲ್ಡಕಾರ್ಡ್’- ಮಿರಾಂಡಾ ರಾಬರ್ಟ್

ಅತ್ಯುತ್ತಮ ನವ್ಯ ಆಲ್ಬಮ್: ‘ಮೋರ್ ಗಿಟಾರ್ ಸ್ಟೋರೀಸ್’- ಜಿಮ್ ‘ಕಿಮೋ’ ವೆಸ್ಟ್

ಅತ್ಯುತ್ತಮ ಇಂಪ್ರೊವೈಸ್ಡ್ ಜಾಝ್ ಸೊಲೊ: ‘ಅಲ್​ ಬ್ಲೂಸ್’- ಚಿಕ್ ಕೊರಿಯ

ಅತ್ಯುತ್ತಮ ಜಾಝ್ ವೊಕಲ್ ಆಲ್ಬಮ್: ‘ಸೀಕ್ರೆಟ್ಸ್​ ಆರ್​ ದಿ ಬೆಸ್ಟ್ ಸ್ಟೋರೀಸ್’-ಕರ್ಟ್​ ಎಲ್ಲಿಂಗ್

ಅತ್ಯುತ್ತಮ ಇಂಪ್ರೊವೈಸ್ಡ್ ಜಾಝ್ ಆಲ್ಬಮ್: ‘ಟ್ರಿಯಾಲಜಿ 2’-ಚಿಕ್ ಕೊರಿಯ, ಕ್ರಿಶ್ಚಿಯನ್ ಮ್ಯಾಕ್​ಬ್ರೈಡ್ ಮತ್ತು ಬ್ರಿಯಾನ್ ಬ್ಲೇಡ್

ಅತ್ಯುತ್ತಮ ಲಾರ್ಜ್ ಜಾಝ್ ಆಲ್ಬಮ್: ‘ಡಾಟಾ ಲಾರ್ಡ್ಸ್’- ಮಾರಿಯ ಸ್ಕಿಂಡರ್ ಆರ್ಕೆಸ್ಟ್ರಾ

ಅತ್ಯುತ್ತಮ ಬ್ಲೂಗ್ರಾಸ್ ಆಲ್ಬಮ್: ‘ಹೋಮ್’-ಬಿಲ್ಲೀ ಸ್ಟ್ರಿಂಗ್ಸ್

ಅತ್ಯುತ್ತಮ ಪಾರಂಪರಿಕ ಬ್ಲೂಸ್ ಆಲ್ಬಮ್: ಬಾಬ್ಬೀ ರಶ್ ಅವರ ‘ರಾವರ್ ದ್ಯಾನ್ ರಾವರ್’

ಅತ್ಯುತ್ತಮ ಸಮಕಾಲೀನ ಬ್ಲೂಸ್ ಆಲ್ಬಮ್: ಫೆಂಟಾಸ್ಟಿಕ್ ನೆಗ್ರಿಟೊ ಅವರ ‘ಹ್ಯಾವ್ ಯೂ ಲಾಸ್ಟ್ ಯುವರ ಮೈಂಡ್ ಯೆಟ್?’

ಅತ್ಯುತ್ತಮ ರೆಗ್ಗೀ ಆಲ್ಬಮ್: ಗಾಟ್​ ಟು ಬಿ ಟಫ್- ಟೂಟ್ಸ ಮತ್ತು ದಿ ಮೇಟಲ್ಸ್

ಅತ್ಯುತ್ತಮ ಸ್ಪೋಕನ್ ವರ್ಡ್ ಆಲ್ಬಮ್: ‘ಬ್ಲೋಔಟ್’- ರಾಚೆಲ್ ಮ್ಯಾಡೊ

ಅತ್ಯುತ್ತಮ ಕಾಮೆಡಿ ಆಲ್ಬಮ್: ಟಿಫಾನಿ ಹ್ಯಾಡಿಶ್ ಅವರ ‘ಬ್ಲ್ಯಾಕ್ ಮಿಜ್ವಾ’

ದೃಶ್ಯ ಮಾಧ್ಯಮಕ್ಕೆ ಅತ್ಯುತ್ತಮ ಧ್ವನಿಗ್ರಹಣ ರಚನೆ: ವಿವಿಧ ಕಲಾವಿದರ ‘ಜೊಜೊ ರ‍್ಯಾಬಿಟ್’

ದೃಶ್ಯ ಮಾಧ್ಯಮಕ್ಕೆ ಅತ್ಯುತ್ತಮ ಸಂಗೀತ ಸಂಯೋಜನೆ: ಹಿಲ್ದೂರ್ ಗೌನಾಡೊಟಿರ್ ಅವರ ‘ಜೋಕರ್’

ಅತ್ಯುತ್ತಮ ಮ್ಯೂಸಿಕ್ ವಿಡಿಯೋ: ಬಿಯಾನ್ಸ್, ಸೇಂಟ್ ಜಾನ್ ಮತ್ತು ವಿಜ್ಕಿಡ್ ಅವರ ‘ಬ್ರೌನ್ ಸ್ಕಿನ ಗರ್ಲ್’

ಚಲನ ಚಿತ್ರವೊಂದಕ್ಕೆ ಅತ್ಯುತ್ತಮ ಸಂಗೀತ: ‘ದಿ ಸೌಂಡ್ ಆಪ್ ಮೈ ವಾಯ್ಸ್’- ಲಿಂಡಾ ರಾನ್​ಸ್ಟ್ಯಾಟ್

ಇದನ್ನೂ ಓದಿ: KGF Chapter 2: ಹಾಲಿವುಡ್​ ಸಿನಿಮಾದಲ್ಲಿ ಕೆಜಿಎಫ್​-2 ಡೈಲಾಗ್? ಏನಿದರ ಹಿಂದಿನ ರಹಸ್ಯ

Published On - 5:37 pm, Mon, 15 March 21

ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಬುಡಕಟ್ಟು ಜನರೊಂದಿಗೆ ನೃತ್ಯ ಮಾಡಿದ ಸಿಎಂ ಸಿದ್ದರಾಮಯ್ಯ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
ಊಟ ಮಾಡುವಾಗ ಅರ್ಧಕ್ಕೆ ಎದ್ದು ಹೋಗಬಾರದು ಯಾಕೆ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ತಮಿಳು, ತೆಲುಗಿನಲ್ಲೂ ಶಿವರಾಜ್​ಕುಮಾರ್ ಬ್ಯುಸಿ; ಇಲ್ಲಿದೆ ಮಾಹಿತಿ..
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು