ತುಪ್ಪದ ಬೆಡಗಿಗೆ ಖುಲಾಯಿಸಿದ ಅದೃಷ್ಟ; ಖಡಕ್​ ತನಿಖಾಧಿಕಾರಿಯಾಗಿ ಬರಲು ಸಿದ್ಧರಾಗುತ್ತಿದ್ದಾರೆ ರಾಗಿಣಿ ದ್ವಿವೇದಿ

ತುಪ್ಪದ ಬೆಡಗಿಗೆ ಖುಲಾಯಿಸಿದ ಅದೃಷ್ಟ; ಖಡಕ್​ ತನಿಖಾಧಿಕಾರಿಯಾಗಿ ಬರಲು ಸಿದ್ಧರಾಗುತ್ತಿದ್ದಾರೆ ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ

ರಾಗಿಣಿಯವರ ಸಿನಿ ಪ್ರಯಾಣ ಶುರುವಾಗಿದ್ದು 2009ರಲ್ಲಿ, ವೀರ ಮದಕರಿ ಚಿತ್ರದ ಮೂಲಕ. ಇದರಲ್ಲಿ ಕಿಚ್ಚ ಸುದೀಪ್​ ಜತೆ ನಟಿಸಿದ್ದ ರಾಗಿಣಿ ನಂತರದ ದಿನಗಳಲ್ಲಿ, ಶಂಕರ್ ಐಪಿಎಸ್​, ಕೆಂಪೇಗೌಡ, ಆರಕ್ಷಕ, ಶಿವ, ರಾಗಿಣಿ ಐಪಿಎಸ್​, ಬಂಗಾರಿ.. ಹೀಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Lakshmi Hegde

|

Mar 22, 2021 | 4:16 PM


ಡ್ರಗ್ಸ್​ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿ ಜನವರಿಯಲ್ಲಿ ಜಾಮೀನಿನ ಆಧಾರದಲ್ಲಿ ಹೊರಬಂದಿದ್ದಾರೆ. ಹೀಗೆ ಹೊರಬರುತ್ತಿದ್ದಂತೆ ಅವರ ಅದೃಷ್ಟ ಖುಲಾಯಿಸಿದೆ. ಸಾಲುಸಾಲು ಸಿನಿಮಾಗಳು ಕೈಹಿಡಿಯುತ್ತಿವೆ. ಈಗಾಗಲೇ ಕರ್ವ 3 ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವ ತುಪ್ಪದ ಬೆಡಗಿ, ಇದೀಗ ಜಾನಿ ವಾಕರ್​ ಎಂಬ ಚಿತ್ರಕ್ಕೂ ಸಹಿ ಮಾಡಿದ್ದಾರೆ. ಇದರಲ್ಲಿ ರಾಗಿಣಿಯವರು ಪೊಲೀಸ್​ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನು ಜಾನಿ ವಾಕರ್​ ಸಿನಿಮಾವನ್ನು ವೇದಿಕ್​ ನಿರ್ದೇಶನ ಮಾಡಲಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರಾಗಿಣಿ ದ್ವಿವೇದಿ, ಜಾನಿ ವಾಕರ್​ ಸಿನಿಮಾದಲ್ಲಿ ನನ್ನ ಪಾತ್ರ ತುಂಬ ಖಡಕ್​ ಆಗಿದೆ. ವಿಭಿನ್ನವಾಗಿದೆ. ನನ್ನ ಪಾತ್ರದ ಸುತ್ತಮುತ್ತಲೂ ಕಥೆ ಸಾಗುತ್ತದೆ. ಈ ಸಿನಿಮಾದಲ್ಲಿ ನಟಿಸಲು ತುಂಬ ಎಕ್ಸೈಟ್​ ಆಗಿ ಕಾಯುತ್ತಿದ್ದೇನೆ. ಇಂಥ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ರಾಗಿಣಿ ಈ ಚಿತ್ರದಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಎರಡೂ ವಿಧದ ಉಡುಪುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ರಾಗಿಣಿ ದ್ವಿವೇದಿ ತಮ್ಮ ಇನ್​ಸ್ಟಾಗ್ರಾಂ ಮೂಲಕ ಕರ್ವ 3 ಸಿನಿಮಾಕ್ಕೆ ಸಹಿ ಹಾಕಿದ್ದಾಗಿ ಘೋಷಿಸಿದ್ದರು. ಈ ಮಧ್ಯೆ ಗಾಂಧಿಗಿರಿ ಎನ್ನುವ ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಗಿಣಿಯವರ ಸಿನಿ ಪ್ರಯಾಣ ಶುರುವಾಗಿದ್ದು 2009ರಲ್ಲಿ, ವೀರ ಮದಕರಿ ಚಿತ್ರದ ಮೂಲಕ. ಇದರಲ್ಲಿ ಕಿಚ್ಚ ಸುದೀಪ್​ ಜತೆ ನಟಿಸಿದ್ದ ರಾಗಿಣಿ ನಂತರದ ದಿನಗಳಲ್ಲಿ, ಶಂಕರ್ ಐಪಿಎಸ್​, ಕೆಂಪೇಗೌಡ, ಆರಕ್ಷಕ, ಶಿವ, ರಾಗಿಣಿ ಐಪಿಎಸ್​, ಬಂಗಾರಿ.. ಹೀಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ. ಆದರೆ ಅವರ ದುರದೃಷ್ಟವೆಂಬಂತೆ ಕೆಲವು ತಿಂಗಳುಗಳ ಹಿಂದೆ ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಸುಮಾರು ಮೂರೂವರೆ ತಿಂಗಳ ಬಳಿಕ ಅಂದರೆ 2021ರ ಜನವರಿಯಲ್ಲಿ ಬಿಡುಗಡೆಯಾಗಿದ್ದಾರೆ. ಇವರು ಜೈಲಿನಲ್ಲಿದ್ದಾಗ ಕುಟುಂಬದವರು ಕಾನೂನು ಹೋರಾಟಕ್ಕಾಗಿ ತುಂಬ ಕಷ್ಟಪಟ್ಟಿದ್ದರು.

ಇದನ್ನೂ ಓದಿ: ನಟಿ ರಾಗಿಣಿ ದ್ವಿವೇದಿ ಬ್ಯಾಕ್ ಟು ಸಿನಿಮಾ…!

Ragini Dwivedi: ಅಭಿಮಾನಿಗಳ ಮೆಸೇಜ್​ಗಳನ್ನು ನೋಡಿ Live ​ನಲ್ಲೇ ಕಣ್ಣೀರಿಟ್ಟ ರಾಗಿಣಿ ದ್ವಿವೇದಿ


Follow us on

Related Stories

Most Read Stories

Click on your DTH Provider to Add TV9 Kannada