AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ragini Dwivedi: ಅಭಿಮಾನಿಗಳ ಮೆಸೇಜ್​ಗಳನ್ನು ನೋಡಿ Live ​ನಲ್ಲೇ ಕಣ್ಣೀರಿಟ್ಟ ರಾಗಿಣಿ ದ್ವಿವೇದಿ

ಜೈಲಿನಿಂದ ಹೊರ ಬಂದ ನಂತರ ಇದೇ ಮೊದಲ ಬಾರಿಗೆ ಇನ್​​ಸ್ಟಾಗ್ರಾಂ ಲೈವ್​ ಮಾಡಿರುವ ಅವರು ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ.

Ragini Dwivedi: ಅಭಿಮಾನಿಗಳ ಮೆಸೇಜ್​ಗಳನ್ನು ನೋಡಿ Live ​ನಲ್ಲೇ ಕಣ್ಣೀರಿಟ್ಟ ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ರಾಜೇಶ್ ದುಗ್ಗುಮನೆ
| Edited By: |

Updated on:Feb 11, 2021 | 1:40 PM

Share

ಡ್ರಗ್ಸ್​ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದರು.  ಜೈಲಿನಿಂದ ಹೊರಬಂದ ನಂತರ ಇದೇ ಮೊದಲ ಬಾರಿಗೆ ಇನ್​ಸ್ಟಾಗ್ರಾಂನಲ್ಲಿ ಲೈವ್​ನಲ್ಲಿ ಬಂದು ರಾಗಿಣಿ ಸಾಕಷ್ಟು ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಗಳ ಮೆಸೇಜ್​ಗಳನ್ನು ನೋಡಿ ಅವರು ಕಣ್ಣೀರನ್ನು ಕೂಡ ಇಟ್ಟಿದ್ದಾರೆ. 

ಕೆಲವೊಮ್ಮೆ ಸಮಯ ಎಂಬುದು ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತದೆ. ನೀವು ಪರೀಕ್ಷೆಗೆ ಒಳಪಡುತ್ತೀರಿ ಎನ್ನುವುದು ನಿಮಗೂ ಗೊತ್ತಿರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ನೀವು ಮತ್ತಷ್ಟು ಗಟ್ಟಿ ಆಗುತ್ತೀರಿ. ನೀವು ಸರಿ ಇದ್ದಾಗ ಬೇರೆಯವರಿಗೆ ಯಾವುದನ್ನೂ ವಿವರಿಸುವ ಅಗತ್ಯವಿಲ್ಲ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.

ನಾನು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ಸಮಯ ಎಲ್ಲವನ್ನೂ ಗುಣಪಡಿಸುತ್ತದೆ ಎನ್ನುವ ಮಾತಿದೆ. ಅದನ್ನು ನಾನು ನಂಬಿದ್ದೇನೆ. ನಿಮ್ಮೆಲ್ಲರ ಜೊತೆ ಮಾತಾಡಬೇಕು ಎನ್ನುವುದು ನನಗೆ ಇತ್ತು. ಏನು ಮಾತನಾಡಬೇಕು ಎನ್ನುವ ಬಗ್ಗೆ ತುಂಬಾನೇ ಯೋಚನೆ ಮಾಡಿದ್ದೆ. ಕೆಲವೊಮ್ಮೆ ಶಾಂತವಾಗಿರೋದು ಉತ್ತಮ ಅನಿಸುತ್ತೆ. ಅದರಲ್ಲೇ ನಮಗೆ ಹೆಚ್ಚು ಉತ್ತರ ಸಿಗುತ್ತದೆ ಎಂದಿದ್ದಾರೆ ರಾಗಿಣಿ.

ಇನ್ನು, ರಾಗಿಣಿ ಜೈಲಿನಿಂದ ಹೊರ ಬಂದ ನಂತರ ಪೋಸ್ಟ್​ಗಳನ್ನು ಹಾಕಿದ್ದರು. ಈ ಬೆನ್ನಲ್ಲೇ ಕೆಲವರು ಅವರಿಗೆ ಪಾಸಿಟಿವ್​ ಮೆಸೇಜ್​ ಕಳುಹಿಸಿದ್ದರಂತೆ. ಇದಕ್ಕೆ ರಾಗಿಣಿ ತಮ್ಮ ಸಂತಸ ಹೊರ ಹಾಕಿದ್ದಾರೆ. ಇನ್ನೂ ಕೆಲವರು, ರಾಗಿಣಿ ಬಗ್ಗೆ ಹಾರ್ಷ್​ ಆಗಿ ಮಾತನಾಡಿದ್ದು, ಈ ಬಗ್ಗೆಯೂ ಅವರು ಬೇಸರವನ್ನು ಹೊರ ಹಾಕಿದ್ದಾರೆ.

ನಾನು ಸಾಕಷ್ಟು ಸ್ಟ್ರಗಲ್​ ನೋಡಿದ್ದೇನೆ ಎಂದಿರುವ ರಾಗಿಣಿ, 12 ವರ್ಷಗಳಿಂದ ನಾನು ಸಿನಿಮಾ ಇಂಡಸ್ಟ್ರಿಯಲ್ಲಿದ್ದೇನೆ. ಸಾಮಾಜಿಕ ಕೆಲಸಗಳನ್ನು ಮಾಡಿದ್ದೇನೆ. ಈ ವೇಳೆ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ, ಈಗ ಬಂದಷ್ಟು ದೊಡ್ಡ ಕಷ್ಟವನ್ನು ಎಂದಿಗೂ ಎದುರಿಸಿರಲಿಲ್ಲ. ಒಂದು ಹಿಟ್​ ಸಿನಿಮಾ ಬಂದ ನಂತರ ತಕ್ಷಣಕ್ಕೆ ಫ್ಲಾಪ್​ ಸಿನಿಮಾ ಬರಬಹುದು. ಒಮ್ಮೊಮ್ಮೆ ಶೂಟಿಂಗ್​ ಮಾಡುವಾಗ ಶಾಟ್​ ಅತ್ಯುತ್ತಮವಾಗಿ ಬಂದರೆ, ಇನ್ನೂ ಕೆಲವೊಮ್ಮೆ ತುಂಬಾನೇ ಕೆಟ್ಟದಾಗಿ ಬರಬಹುದು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಜೀವನದಲ್ಲಿ ಮುನ್ನಡೆಯುತ್ತಲೇ ಇರಬೇಕು ಎಂದಿದ್ದಾರೆ ರಾಗಿಣಿ.

ಕೆಲವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹೆಣ್ಮಕ್ಳಿಗೆ ಕೆಟ್ಟದಾಗಿ ಹೆಸರಿಟ್ಟು ಕರೆದರೆ ಏನು ಖುಷಿ ಸಿಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ನಿಮಗೆ ಅದರಿಂದ ಖುಷಿ ಸಿಗುತ್ತಿದೆ ಎಂದಾದರೆ, ನಾನು ಆ ರೀತಿಯಲ್ಲಾದರೂ ನಿಮಗೆ ಖುಷಿ ನೀಡಿದ್ದೇನೆ ಎನ್ನುವ ಪಾಸಿಟಿವಿ ಬೆಳೆಸಿಕೊಂಡಿದ್ದೇನೆ ಎಂದಿರುವ ರಾಗಿಣಿ, ಅಭಿಮಾನಿಗಳ ಮೆಸೇಜ್​ ನೋಡುತ್ತಲೇ ರಾಗಿಣಿ ಅತ್ತಿದ್ದಾರೆ.

ಇದನ್ನೂ ಓದಿ: Sandalwood Drug Case: ಸಂಜನಾ – ರಾಗಿಣಿ ನಂತ್ರ ಇನ್ನೂ ಒಂದಷ್ಟು ಮಂದಿಗೆ ಸಿಕ್ಕಿದೆ ಜಾಮೀನು ಬಿಡುಗಡೆ ಭಾಗ್ಯ!

Published On - 1:37 pm, Thu, 11 February 21

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ