Sandalwood Drug Case: ಸಂಜನಾ – ರಾಗಿಣಿ ನಂತ್ರ ಇನ್ನೂ ಒಂದಷ್ಟು ಮಂದಿಗೆ ಸಿಕ್ಕಿದೆ ಜಾಮೀನು ಬಿಡುಗಡೆ ಭಾಗ್ಯ!
Sandalwood Drug Scandal: ಸ್ಯಾಂಡಲ್‌ವುಡ್ ಡ್ರಗ್ ಕೇಸ್‌ನಲ್ಲಿ ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದ ದೊಡ್ಡ ದೊಡ್ಡ ಮಿಕಗಳಿಗೆ ಕೊನೆಗೆ ಮುಕ್ತಿ ಸಿಕ್ಕಿದೆ. ಈಗ ಬೇಲ್ ಪಡೆದವರು ಯಾರು? ಅವರಿಗೆ ಬೇಲ್ ಸಿಕ್ಕಿದ್ದು ಹೇಗೆ ಅನ್ನೋದರ ಡಿಟೈಲ್ಸ್ ಇಲ್ಲಿದೆ.
ಬೆಂಗಳೂರು: ಸ್ಯಾಂಡಲ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಡ್ರಗ್ಸ್ ಕೇಸ್‌ನಲ್ಲಿ ರಾಗಿಣಿ, ಸಂಜನಾ ಸೇರಿ ಒಟ್ಟು 18 ಜನ ಆರೋಪಿಗಳಿದ್ರು. ಈ ಪೈಕಿ ಈಗಾಗಲೆೇ ನ್ಯಾಯಾಲಯದಿಂದ ಜಾಮೀನು ಪಡೆದು ರಾಗಿಣಿ ಮತ್ತು ಸಂಜನಾ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಈಗ ಈ ಸಾಲಿಗೆ ಮತ್ತೆ ಐದು ಜನರು ಸೇರಿಕೊಂಡಿದ್ದು ರವಿಶಂಕರ್, ವಿರೇನ್ ಖನ್ನಾ, ರಾಹುಲ್ ತೋನ್ಸೆ, ಆದಿತ್ಯ ಆಳ್ವಾ, ಆದಿತ್ಯ ಅಗರ್ವಾಲ್‌ಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. NDPS ವಿಷೇಶ ನ್ಯಾಯಾಲಯ ಈ ಐದು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಮಾಡಿದೆ. ಎರಡು ಲಕ್ಷ ಬಾಂಡ್ ಅನ್ನು ಆರೋಪಿಗಳು ಶ್ಯೂರಿಟಿಯಾಗಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಗರ ಬಿಟ್ಟು ಹೋಗದಂತೆ. ಐಒ ಕರೆದಾಗ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.
ಡ್ರಗ್ಸ್ ಕೇಸ್ನ ಪ್ರಮುಖ ರುವಾರಿ ರವಿಶಂಕರ್‌ಗೆ ಬೇಲ್ ಈ ರವಿಶಂಕರ್ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ನ ಪ್ರಮುಖ ರುವಾರಿ. ಈತ ಬಾಣಸವಾಡಿ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ. ಜೊತೆಗೆ ರವಿಶಂಕರ್ ನೀಡಿದ್ದ ಮಾಹಿತಿ ಮೇಲೆಯೇ ಕೇಸ್ ದಾಖಲಾಗಿ ರಾಗಿಣಿ, ಸಂಜನಾ ಸೇರಿ ಹಲವು ಆರೋಪಿಗಳು ಅರೆಸ್ಟ್ ಆಗಿದ್ರು. ಈಗ ಈ ರವಿಶಂಕರ್‌ಗೆ NDPSವಿಷೇಶ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ವಿರೇನ್ ಖನ್ನಾ, ರಾಹುಲ್ ತೋನ್ಸೆಗೆ ಬಿಡುಗಡೆ ಭಾಗ್ಯ ವಿರೇನ್ ಖನ್ನಾ ಕಾಟನ್ ಪೇಟೆ ಕೇಸ್‌ನಲ್ಲಿ ಈತನೂ ಪ್ರಮುಖ ಅರೋಪಿ. ಪೇಜ್ ಥ್ರೀ ಪಾರ್ಟಿ ಆಯೋಜನೆ ಮಾಡಿ ವಿದೇಶದಿಂದ ಡ್ರಗ್ಸ್ ಹಾಗೂ ಮಾಡೆಲ್‌ಗಳನ್ನ ಕರೆಸಿ ನಗರದ ಸ್ಟಾರ್ ಹೋಟೆಲ್ಗಳಲ್ಲಿ ಪಾರ್ಟಿ ಮಾಡುತ್ತಿದ್ದ. ಸದ್ಯ ಈಗ ಕಿಂಗ್ ಪಿನ್ ಖನ್ನಾಗೆ ಬೇಲ್ ಸಿಕ್ಕಿದೆ. ಇನ್ನು ಕನ್ನಡದ ಸ್ಟಾರ್ ನಟಿಯರೊಂದಿಗೆ ನಂಟು ಬೆಳೆಸಿ ಶ್ರೀಲಂಕಾ ಕೆಸಿನೋದಲ್ಲಿ ಎಜೆಂಟ್ ಆಗಿದ್ದ ರಾಹುಲ್ ತೋನ್ಸೆ, ನಟಿ ಸಂಜನಾ ಆಪ್ತನಾಗಿದ್ದ. ಜೊತೆಗೆ ಡ್ರಗ್ಸ್ ಪಾರ್ಟಿ ನಡೆಸೋದ್ರಲ್ಲಿ ಸಕ್ರಿಯನಾಗಿದ್ದ ಅನ್ನೊ ಕಾರಣಕ್ಕೆ ಅರೆಸ್ಟ್ ಆಗಿದ್ದ. ಸದ್ಯ ಈಗ ರಾಹುಲ್ ತೋನ್ಸೆಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಆದಿತ್ಯ ಆಳ್ವಾ, ಆದಿತ್ಯ ಅಗರ್ವಾಲ್‌ಗೂ ರಿಲೀಫ್ ಮಾಜಿ ಸಚಿವ ಜೀವರಾಜ್ ಆಳ್ವಾ ಅವ್ರ ಪುತ್ರ ಆದಿತ್ಯ ಆಳ್ವಾ ನಗರದಲ್ಲಿ ಹೌಸ್ ಆಫ್ ಲೈಫ್ ಅನ್ನೋ ರೆಸಾರ್ಟ್ನಲ್ಲಿ ಹೈಫೈ ಪಾರ್ಟಿಯನ್ನು ಆಯೋಜನೆ ಮಾಡ್ತಿದ್ದ. ಜೊತೆಗೆ ಅಲ್ಲಿ ಡ್ರಗ್ಸ್ ಅನ್ನು ಮಾರಾಟ ಮಾಡ್ರಿದ್ರು ಅನ್ನೊ ಅರೋಪದಲ್ಲಿ ಅರೆಸ್ಟ್ ಆಗಿದ್ದ. ಎಸ್ಕೇಪ್ ಆಗಿದ್ದ ಆಳ್ವಾ ಜನವರಿ 15 ರಂದು ಸಿಸಿಬಿಗೆ ಲಾಕ್ ಆಗಿದ್ದ. ನಿನ್ನೆ ನ್ಯಾಯಾಲಯ ಬೇಲ್ ನೀಡಿದೆ.
ಇನ್ನು ವೀರೇನ್ ಖನ್ನಾನ ಬಲಗೈ ಬಂಟನಾಗಿದ್ದ ಆದಿತ್ಯ ಅಗರ್ವಾಲ್ ನನ್ನು ಸಿಸಿಬಿ ಪೊಲೀಸರು ಡ್ರಗ್ಸ್ ಸಾಗಾಣಿಕೆ ಅರೋಪದಲ್ಲಿ ಅರೆಸ್ಟ್ ಮಾಡಿದ್ರು. ಬಾಣಸವಾಡಿ ಕೇಸ್ ನಲ್ಲಿ ಮೊದಲು ಅರೆಸ್ಟ್ ಆಗಿದ್ದ. ನಂತ್ರ ಕಾಟನ್ ಪೇಟೆ ಕೇಸ್‌ನಲ್ಲಿ ಅಗರ್ವಾಲ್ನನ್ನು ಅರೆಸ್ಟ್ ಮಾಡಲಾಗಿತ್ತು. ಸದ್ಯ ಬೇಲ್ ಪಡೆದು ನಿಟ್ಟುಸಿರು ಬಿಟ್ಟಿದ್ದಾನೆ.
NDPSವಿಷೇಶ ನ್ಯಾಯಾಲಯ ಈ ಐದು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಮಾಡಿದೆ. ಎರಡು ಲಕ್ಷ ಬಾಂಡ್ ಅನ್ನು ಆರೋಪಿಗಳು ಶ್ಯೂರಿಟಿಯಾಗಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಗರ ಬಿಟ್ಟು ಹೋಗದಂತೆ. ಐಒ ಕರೆದಾಗ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಒಟ್ನಲ್ಲಿ ರಾಗಿಣಿ ಮತ್ತು ಸಂಜನಾ ಬೇಲ್ ಸಿಕ್ಕಿ ಜೈಲಿನಿಂದ ಹೊರಬಂದ ಬೆನ್ನೆಲ್ಲೇ ಮತ್ತೆ ಐವರಿಗೆ ಬೇಲ್ ಭಾಗ್ಯ ಸಿಕ್ಕಿದೆ.
ಸಿನಿಮಾ ಆಫರ್ಗಳು ಬರ್ತಾ ಇದೆ.. ಈ ತಿಂಗಳಲ್ಲೇ ಶೂಟಿಂಗ್ ಶುರು -ಅಕ್ಕಿಪೇಟೆ ದರ್ಗಾದಲ್ಲಿ ಅನ್ನದಾನ ಮಾಡಿಸಿದ ರಾಗಿಣಿ
Published On - 1:11 pm, Sat, 6 February 21