ದರ್ಶನ್​ ಅಭಿಮಾನಿಗಳು ತಲೆ ಮಾಂಸ, ಕುರಿ ಕೇಳುತ್ತಾರೆ ಎಂಬ ವಿವಾದ ತಣ್ಣಗಾಗಿಸಲು ಜಗ್ಗೇಶ್ ಟ್ವೀಟ್

ದರ್ಶನ್​ ಅಭಿಮಾನಿಗಳು ತಲೆ ಮಾಂಸ, ಕುರಿ ಕೇಳುತ್ತಾರೆ ಎಂಬ ವಿವಾದ ತಣ್ಣಗಾಗಿಸಲು ಜಗ್ಗೇಶ್ ಟ್ವೀಟ್
ನವರಸನಾಯಕ ಜಗ್ಗೇಶ್​ ಮತ್ತು ದರ್ಶನ್​

Jaggesh's Controversial Statement: ಇಂದಿನ ದಿನದಲ್ಲಿ ನೇರವಾಗಿ ಸಾಧಿಸಲಾಗದವರು ದರ್ಶನ್​ ಹಾಗೂ ಜಗ್ಗೇಶ್​ ಬಗ್ಗೆ ಬೇಕಂತಲೇ ಬೆಂಕಿ ಹಚ್ಚುತ್ತಿದ್ದಾರೆ ಎಂದು ಹರಿಹಾಯ್ದಿರುವ ಜಗ್ಗೇಶ್ ಅಭಿಮಾನಿಗಳು ಈ ಆಡಿಯೋ ಫೇಕ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

Skanda

|

Feb 11, 2021 | 3:39 PM

ಚಂದನವನದಲ್ಲಿ (Sandalwood) ಆಗಾಗ ಸುಂಟರಗಾಳಿ, ಬಿರುಗಾಳಿ ಬೀಸುತ್ತಲೇ ಇರುತ್ತದೆ. ಸಣ್ಣಪುಟ್ಟ ಕಾರಣಗಳಿಗಾಗಿ ಎದ್ದ ಮನಸ್ತಾಪದಿಂದ ಎಷ್ಟೋ ಜನ ಒಳ್ಳೆಯ ಸ್ನೇಹಿತರು ದೂರಾಗಿದ್ದಿದೆ. ಈಗ ಆ ಸರದಿ ಜಗ್ಗೇಶ್ (Actor Jaggesh) ಅವರಿಗೆ ಬಂದಂತಿದೆ. ಇಂದು ಬೆಳಗ್ಗೆಯಿಂದ ನವರಸನಾಯಕ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ಸಂಚಲನ ಮೂಡಿಸಿದೆ. ನಿರ್ಮಾಕರೊಬ್ಬರ (Producer) ಜೊತೆ ಕರೆಯಲ್ಲಿ (Phone Call) ಮಾತನಾಡಲಾದ ಆಡಿಯೋ ಎಂಬ ಹೆಸರಿನಡಿ ಹರಿದಾಡುತ್ತಿರುವ ಧ್ವನಿ ಮುದ್ರಿಕೆಯಲ್ಲಿ ಜಗ್ಗೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅಭಿಮಾನಿಗಳನ್ನು ನಿಂದಿಸಿದ್ದಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಆಕ್ರೋಶವೂ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಕಾಣಿಸುತ್ತಿದ್ದಂತೆಯೇ ಜಗ್ಗೇಶ್ ತಮ್ಮ ಟ್ವಿಟರ್ ಅಕೌಂಟ್ ಮೂಲಕ ಸ್ಪಷ್ಟನೆ ನೀಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ‘‘ಚಿತ್ರ ಪ್ರಚಾರಕ್ಕೆ Fake News Spread ಮಾಡುವ ಹುನ್ನಾರ! ಒಬ್ಬ ಚಿಕ್ಕ ಹುಡುಗನದು ಈ ಆಟ! ನಾನು ಏನು ಅಂತ ನನ್ನ ಬಲ್ಲವರಿಗೆ ಎಲ್ಲರಿಗು ತಿಳಿದಿದೆ! ಇಂಥ ವಿಷಯಕ್ಕೆ ಹೃದಯ ತೆಗೆದು ತೋರುವ ಅವಶ್ಯಕತೆ ಇಲ್ಲಾ! ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಒಳಿತು! ಈ ಪ್ರಯತ್ನದ ಮಹನೀಯರಿಗೆ ಶುಭ ಹಾರೈಕೆ! ಕರ್ತವ್ಯದಿಂದ ಜಗ ಗೆಲ್ಲಿ ನನ್ನ ವಿನಂತಿ!’’ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಜಗ್ಗೇಶ್ ಅವರ ಅಭಿಮಾನಿಗಳು ಸಹ ಬೆಂಬಲಕ್ಕೆ ನಿಂತಿದ್ದು, ಆಡಿಯೋ ಹರಿಬಿಟ್ಟವರ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಇಂದಿನ ದಿನದಲ್ಲಿ ನೇರವಾಗಿ ಸಾಧಿಸಲಾಗದವರು ದರ್ಶನ್​ ಹಾಗೂ ಜಗ್ಗೇಶ್​ ಬಗ್ಗೆ ಬೇಕಂತಲೇ ಬೆಂಕಿ ಹಚ್ಚುತ್ತಿದ್ದಾರೆ ಎಂದು ಹರಿಹಾಯ್ದಿರುವ ಜಗ್ಗೇಶ್ ಅಭಿಮಾನಿಗಳು ಈ ಆಡಿಯೋ ಫೇಕ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಈ ವಿವಾದಕ್ಕೆ ತೆರೆ ಎಳೆಯಲು ನವರಸ ನಾಯಕ ಜಗ್ಗೇಶ್ ಹಾಗೂ ಅವರ ಅಭಿಮಾನಿಗಳು ಪ್ರಯತ್ನಿಸುತ್ತಿದ್ದು, ಯಾರೂ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬಾರದು. ಚಂದನವನದ ನಟರ ಮಧ್ಯೆ ಕಿಡಿ ಎಬ್ಬಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ‘ರಾಬರ್ಟ್’ ಸಿನಿಮಾ ರಿಲೀಸ್​ಗೂ ಮುನ್ನ ತಿರುಮಲ ದೇಗುಲಕ್ಕೆ ನಟ ದರ್ಶನ್ ಭೇಟಿ

ಪ್ರಕರಣದ ಹಿನ್ನೆಲೆ ಏನು? ಇನ್​ಸ್ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್​ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಜಗ್ಗೇಶ್ ದಿನಪತ್ರಿಕೆಯೊಂದಕ್ಕೆ ಜಾಹೀರಾತು ಕೊಡಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅದು ಬೇರೆ ಪತ್ರಿಕೆಗಳಂತೆ ಅಲ್ಲ. ಆರ್​ಎಸ್​ಎಸ್​ ಕಾರ್ಯಕತರು ತಪ್ಪಿಸದೇ ಓದುವ ಪತ್ರಿಕೆ. ನಮ್ಮ ಮನೆಯವರೂ ಆ ಪತ್ರಿಕೆಗೆ ಬರೆಯುತ್ತಾರೆ. ಅಂತಹ ಪವರ್​ಫುಲ್ ಪತ್ರಿಕೆಗೆ ಜಾಹೀರಾತು ಕೊಡದಿದ್ದರೆ ಹೇಗೆ? ಎಂದು ಹೇಳಿದ್ದಾರೆ. ನಂತರ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ ನನ್ನ ಬಳಿ ಇರುವವರೆಲ್ಲರೂ ತುಂಬಾ ಒಳ್ಳೆಯವರು. ದರ್ಶನ್ ಥರ, ಅವರ ಥರ ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ.. ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎಂದು ಹೇಳಿದ್ದಾರೆ.

ಸದ್ಯ ಈ ಮಾತುಕತೆಯೇ ವಿವಾದಕ್ಕೆ ಸಿಲುಕಿದ್ದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ಇದರಲ್ಲಿ ದರ್ಶನ್ ಎಂದಿರುವುದು ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೇನಾ? ಅಥವಾ ಬೇರೆ ಯಾರ ಬಗ್ಗೆಯಾದರೂ ಮಾತನಾಡಿದ್ದಾರಾ? ಎಂದು ಕೆಲವರು ಸಂಶಯ ವ್ಯಕ್ತಪಡಿಸಿರುವರಾದರೂ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಈ ವಿವಾದ ದೊಡ್ಡದಾಗುತ್ತಿರುವಂತೆ ಎಚ್ಚೆತ್ತುಕೊಂಡ ಜಗ್ಗೇಶ್ ಸದ್ಯ ಟ್ವೀಟ್ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada