‘ರಾಬರ್ಟ್’ ಸಿನಿಮಾ ರಿಲೀಸ್​ಗೂ ಮುನ್ನ ತಿರುಮಲ ದೇಗುಲಕ್ಕೆ ನಟ ದರ್ಶನ್ ಭೇಟಿ

ರಾಬರ್ಟ್​ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ನಟ ದರ್ಶನ್​ ಆಂಧ್ರದ ತಿರುಮಲ ದೇಗುಲಕ್ಕೆ ಭೇಟಿ ನಿಡಿದ್ದಾರೆ. ದರ್ಶನ್​ ಜೊತೆ ಚಿತ್ರದ ನಟಿ, ನಿರ್ದೇಶಕ ಸೇರಿದಂತೆ ಹಲವರು ಸಾಥ್​ ನೀಡಿದ್ದಾರೆ.

‘ರಾಬರ್ಟ್’ ಸಿನಿಮಾ ರಿಲೀಸ್​ಗೂ ಮುನ್ನ ತಿರುಮಲ ದೇಗುಲಕ್ಕೆ ನಟ ದರ್ಶನ್ ಭೇಟಿ
ನಟ ದರ್ಶನ್
Follow us
shruti hegde
| Updated By: ಸಾಧು ಶ್ರೀನಾಥ್​

Updated on: Feb 10, 2021 | 3:41 PM

ಬೆಂಗಳೂರು: ರಾಬರ್ಟ್​​ ಸಿನಿಮಾ ರಿಲೀಸ್​ ಹಿನ್ನೆಲೆಯಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಆಂಧ್ರದ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇಗುಲದಲ್ಲಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅರ್ಚಕರಿಂದ ತೀರ್ಥ ಪ್ರಸಾದ ಸ್ವೀಕರಿಸಿದ್ದಾರೆ.

ರಾಬರ್ಟ್​ ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ತಿರುಮಲ ದೇಗುಲದ ತಿಮ್ಮಪ್ಪನಲ್ಲಿ ಕರ್ನಾಟಕದ ಸ್ಯಾಂಡಲ್ ವುಡ್ ಹೀರೋ ದರ್ಶನ್​ ಪ್ರಾರ್ಥಿಸಿಕೊಂಡಿದ್ದಾರೆ. ನಂತರ ದೇವರಿಗೆ ನಮಸ್ಕರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್​ ಓರ್ವರಲ್ಲದೇ ಜೊತೆಗೆ ಹಲವಾರು ಸೆಲಿಬ್ರಿಟಿಗಳು ಸಾಥ್​ ನೀಡಿದ್ದಾರೆ.

ನಟಿ ಸಿಮ್ರತ್ ಕೌರ್, ನಿರ್ದೇಶಕ ಸಂತೋಷ ಶ್ರೀನಿವಾಸ್​, ಸಾಹಿತಿ ಬುರ್ರಾ ಸಾಯಿ ಮಾಧವ ಹಾಗೂ ಇನ್ನಿತರ ಟಾಲಿವುಡ್ ಕಲಾವಿದರು ಬಾಲಾಜಿಯ ದರ್ಶನ ಪಡೆದಿದ್ದಾರೆ. ನಟ ದರ್ಶನ್​ರನ್ನು ದೇವಸ್ಥಾನದಲ್ಲಿ ಕಂಡ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ದರ್ಶನ್​ರನ್ನು ತೆರೆ ಮೇಲೆ ನೋಡುತ್ತಿದ್ದ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದ್ದು, ಫೋಟೋ ತೆಗೆಸಿಕೊಂಡು ಸಂತೋಷ ಪಟ್ಟಿದ್ದಾರೆ.

actor darshan

ನಟ ದರ್ಶನ್​ ದೇಗುಲಕ್ಕೆ ಭೇಟಿ

ಅಂತೂ ಸಿಕ್ತು ಗ್ರೀನ್​ ಸಿಗ್ನಲ್​: ಸ್ಯಾಂಡಲ್‌ವುಡ್‌, ಟಾಲಿವುಡ್‌ನಲ್ಲಿ ಒಂದೇ ದಿನ ‘ರಾಬರ್ಟ್‌’ ಸಿನಿಮಾ ರಿಲೀಸ್‌!