Madagaja shooting: ರೋರಿಂಗ್ ಸ್ಟಾರ್ ಜೊತೆ ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು
Sri Murali: ನಟ ಶ್ರೀ ಮುರುಳಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತರು. ಪ್ರೀತಿಯಿಂದ ಅಭಿಮಾನಿಗಳ ಜೊತೆ ಕಾಲ ಕಳೆದ ರೋರಿಂಗ್ ಸ್ಟಾರ್ನ ಸರಳತೆ ಕಂಡು ಅಭಿಮಾನಿಗಳು ಫಿದಾ ಆದರು. 2020ರ ಡಿಸೆಂಬರ್ 17 ರಂದು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಹುಟ್ಟು ಹಬ್ಬದಂದು ಮದಗಜ ಸಿನಿಮಾ ಟೀಸರ್ ಬಿಡುಗಡೆಯಾಗಿತ್ತು.

ಮೈಸೂರು: ನಂಜನಗೂಡು ತಾಲ್ಲೂಕು ಹಿಮ್ಮಾವು ಬಳಿ ‘ಮದಗಜ’ ಶೂಟಿಂಗ್ಗೆ ತೆರಳಿದ್ದ ರೋರಿಂಗ್ ಸ್ಟಾರ್ ಶ್ರೀ ಶ್ರೀ ಮುರಳಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ವಿಶೇಷ ಚೇತನ ಮಹಿಳೆಯನ್ನು ಕುರ್ಚಿಯಲ್ಲಿ ಕೂರಿಸಿ ಶ್ರೀ ಮುರಳಿ ಆತ್ಮೀಯವಾಗಿ ಮಾತನಾಡಿಸಿದರು.
ನಟ ಶ್ರೀ ಮುರಳಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತರು. ಪ್ರೀತಿಯಿಂದ ಅಭಿಮಾನಿಗಳ ಜೊತೆ ಕಾಲ ಕಳೆದ ರೋರಿಂಗ್ ಸ್ಟಾರ್ನ ಸರಳತೆ ಕಂಡು ಅಭಿಮಾನಿಗಳು ಫಿದಾ ಆದರು. 2020ರ ಡಿಸೆಂಬರ್ 17 ರಂದು ರೋರಿಂಗ್ ಸ್ಟಾರ್ ಶ್ರೀ ಮುರಳಿ ಹುಟ್ಟು ಹಬ್ಬದಂದು ಮದಗಜ ಸಿನಿಮಾ ಟೀಸರ್ ಬಿಡುಗಡೆಯಾಗಿತ್ತು. ಬಿಡುಗಡೆ ಮಾಡಿದ ಕೆಲವೇ ನಿಮಿಷಗಳಲ್ಲಿ ಯ್ಯೂಟ್ಯೂಬ್ನಲ್ಲಿ ಸಾಕಷ್ಟು ವೀಕ್ಷಣೆ ಕಂಡಿತು.
ಅಕ್ಟೋಬರ್ ಹೊತ್ತಿಗೆ ಮದಗಜ ಸಿನಿಮಾ ತಂಡ ಎರಡನೇ ಶೆಡ್ಯೂಲ್ ಪೂರ್ಣಗೊಳಿಸಿದ್ದು, ಡಿಸೆಂಬರ್ನಿಂದ ಮೂರನೇ ಹಂತದ ಚಿತ್ರೀಕರಣ ಪ್ರಾರಂಭಿಸಿದ್ದರು. ಮಹೇಶ್ ನಿರ್ದೇಶನದ ಮದಗಜ ಸಿನಿಮಾಕ್ಕೆ ಶ್ರೀ ಮುರಳಿ ನಾಯಕನಾಗಿ ನಟಿಸಿದ್ದು, ನಿರ್ಮಾಪಕ ಉಮಾಪತಿ ಎಸ್ ಗೌಡ ನಿರ್ಮಿಸಿದ್ದಾರೆ. ಅಲ್ಲದೇ ನಾಯಕಿಯಾಗಿ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸುತ್ತಿದ್ದು, ಸಿನಿಮಾದಲ್ಲಿ ದೊಡ್ಡ ತಾರಾ ಬಳಗವಿದೆ.

ರೋರಿಂಗ್ ಸ್ಟಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು.

ಕೊಡೆಯನ್ನು ಹಿಡಿದು ಅಭಿಮಾನಿಗಳ ಹತ್ತಿರ ಮಾತನಾಡುತ್ತಿರುವ ಶ್ರೀ ಮುರಳಿ.

ಹರಿದು ಬಂದ ಅಭಿಮಾನಿಗಳನ್ನು ನೋಡುತ್ತಿರುವ ಶ್ರೀ ಮುರಳಿ.

ರೋರಿರ್ ಸ್ಟಾರ್ನ ನೋಡಲು ಮುಗಿಬಿದ್ದ ಯುವಕರು.

ವಿಶೇಷ ಚೇತನ ಮಹಿಳೆಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಶೀ ಮುರಳಿ
ಇದನ್ನೂ ಓದಿ: ಡಿ ಬಾಸ್ ದರ್ಶನ್ ಅಭಿನಯದ Roberrt ಕಡೆಯಿಂದ ಗುರುವಾರ ಸಿಗುತ್ತಿದೆ ಎರಡು ಬಿಗ್ ಅಪ್ಡೇಟ್ಸ್



