ಡಿ ಬಾಸ್ ದರ್ಶನ್ ಅಭಿನಯದ Roberrt ಕಡೆಯಿಂದ ಗುರುವಾರ ಸಿಗುತ್ತಿದೆ ಎರಡು ಬಿಗ್ ಅಪ್ಡೇಟ್ಸ್
Roberrt Movie: ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರದ ನಿರ್ದೇಶಕ ತರುಣ್ ಸುಧೀರ್, ಗುರುವಾರ ಎರಡು ಬಿಗ್ ಅಪ್ಡೇಟ್ಸ್ ನೀಡುತ್ತಿದ್ದೆವೆ ಎಂದಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಶಿವರಾತ್ರಿ ಪ್ರಯುಕ್ತ ಮಾರ್ಚ್ 11ರಂದು ತೆರೆಗೆ ಬರುತ್ತಿದೆ. ಸರಿಯಾಗಿ ಒಂದು ತಿಂಗಳು ಇರುವಾಗಲೇ ಚಿತ್ರತಂಡ ದೊಡ್ಡ ಅಪ್ಡೇಟ್ ಒಂದನ್ನು ನೀಡುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರದ ನಿರ್ದೇಶಕ ತರುಣ್ ಸುಧೀರ್, ಗುರುವಾರ ಎರಡು ಬಿಗ್ ಅಪ್ಡೇಟ್ಸ್ ನೀಡುತ್ತಿದ್ದೆವೆ. ಯಾರಾದರೂ ಊಹೆ ಮಾಡಬಹುದೇ ಎಂದು ಕೇಳಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
ತೆಲುಗು ಖಳ ಜಗಪತಿ ಬಾಬು ರಾಬರ್ಟ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್ನಲ್ಲೂ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಚಿತ್ರದ ಮೈಲೇಜ್ ಅನ್ನು ಜಗಪತಿ ಬಾಬು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಫೆಬ್ರವರಿ 12ರಂದು ಜಗಪತಿ ಬಾಬು ಜನ್ಮದಿನ. ಈ ಕಾರಣಕ್ಕೆ ಅವರ ಫಸ್ಟ್ಲುಕ್ಅನ್ನು ಚಿತ್ರತಂಡ ರಿಲೀಸ್ ಮಾಡುವ ಸಾಧ್ಯತೆ ಇದೆ.
ಫೆಬ್ರವರಿ 16 ಡಿ ಬಾಸ್ ದರ್ಶನ್ ಜನ್ಮದಿನ. ಅಂದು ಸಿನಿಮಾ ಟ್ರೈಲರ್ ರಿಲೀಸ್ ಆಗೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಎರಡು ಅಪ್ಡೇಟ್ಗಳು ನಾಳೆ ಸಿಗುವ ನಿರೀಕ್ಷೆ ಇದೆ. ಇದಲ್ಲದೆ, ತೆಲುಗು ಹಾಗೂ ಕನ್ನಡದಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಬಗ್ಗೆಯೂ ಮಾಹಿತಿ ನೀಡಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ.
ದರ್ಶನ್ ನಟನೆಯ ರಾಬರ್ಟ್ ಚಿತ್ರ ಕೊರೊನಾ ಹಿನ್ನೆಲೆಯಲ್ಲಿ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿತ್ತು. ದರ್ಶನ್ ಹೀರೋ ಆಗಿ ಕಾಣಿಸಿಕೊಂಡರೆ, ಜಗಪತಿ ಬಾಬು ವಿಲನ್. ಆಶಾ ಭಟ್ ಚಿತ್ರದ ನಾಯಕಿ. ತರುಣ್ ಸುಧೀರ್ ನಿರ್ದೇಶನದಲ್ಲಿ 2017ರಲ್ಲಿ ತೆರೆಕಂಡ ಚೌಕ ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ರಾಬರ್ಟ್. ಇದೇ ಪಾತ್ರದ ಹೆಸರನ್ನು ಇಟ್ಟುಕೊಂಡು ಸಿನಿಮಾ ಸಿದ್ಧವಾಗಿದೆ.
100 % palka inform 1) dboss birthday =16th trailer 2) jagapathi babu birthday =12th first look This true news tharun sir right now tomorrow wait more pic.twitter.com/ZmKm8zRUBM
— Ravikumar BR (@ravibr1191) February 10, 2021