AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬಕ್ಕೆ ಅಭಿಮಾನಿಗಳಿಗೆ ರಾಬರ್ಟ್​ ಕಡೆಯಿಂದ ಸಿಕ್ತು ಕಲರ್​ಫುಲ್​ ಗಿಫ್ಟ್​!

ಹಾಡುಗಳು ಹಿಟ್ ಆದರೆ, ಸಿನಿಮಾಗೆ ಒಳ್ಳೆಯ ಪ್ರಚಾರ ಸಿಗುತ್ತದೆ ಎನ್ನುವ ನಂಬಿಕೆ ಸಿನಿಮಾ ಮಂದಿಯದ್ದು . ರಾಬರ್ಟ್​ ಸಿನಿಮಾದಲ್ಲೂ ಇದು ಪುನರಾವರ್ತನೆ ಆಗಿತ್ತು.

ಹೋಳಿ ಹಬ್ಬಕ್ಕೆ ಅಭಿಮಾನಿಗಳಿಗೆ ರಾಬರ್ಟ್​ ಕಡೆಯಿಂದ ಸಿಕ್ತು ಕಲರ್​ಫುಲ್​ ಗಿಫ್ಟ್​!
ರಾಬರ್ಟ್ ಸಿನಿಮಾದಲ್ಲಿ ದರ್ಶನ್​
ರಾಜೇಶ್ ದುಗ್ಗುಮನೆ
|

Updated on:Mar 29, 2021 | 6:30 PM

Share

ರಾಬರ್ಟ್​ ಸಿನಿಮಾ ರಿಲೀಸ್​ ಆಗಿ ತಿಂಗಳಾಗುತ್ತಾ ಬಂದಿದೆ. ಆದರೂ ಈ ವರೆಗೆ ದರ್ಶನ್​ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಈ ಚಿತ್ರ ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳತ್ತ ಇನ್ನೂ ಸಾಕಷ್ಟು ಮಂದಿ ಹೆಜ್ಜೆ ಇಡುತ್ತಿದ್ದಾರೆ. ಇಂದಿನಿಂದ ಆರಂಭವಾಗಬೇಕಿದ್ದ ರಾಬರ್ಟ್​ ವಿಜಯ ಯಾತ್ರೆ ಕೊರೊನಾ ಕಾರಣಕ್ಕೆ ಮುಂದೂಡಲ್ಪಟ್ಟಿತ್ತು. ಆದಾಗ್ಯೂ ಅಭಿಮಾನಿಗಳಿಗೆ ರಾಬರ್ಟ್​ ತಂಡ ವಿಶೇಷ ಗಿಫ್ಟ್​ ಒಂದನ್ನು ನೀಡಿದೆ.

ಹಾಡುಗಳು ಹಿಟ್ ಆದರೆ, ಸಿನಿಮಾಗೆ ಒಳ್ಳೆಯ ಪ್ರಚಾರ ಸಿಗುತ್ತದೆ ಎನ್ನುವ ನಂಬಿಕೆ ಸಿನಿಮಾ ಮಂದಿಯದ್ದು . ರಾಬರ್ಟ್​ ಸಿನಿಮಾದಲ್ಲೂ ಇದು ಪುನರಾವರ್ತನೆ ಆಗಿತ್ತು. ರಾಬರ್ಟ್​ ಸಿನಿಮಾದ ಕಣ್ಣು ಹೊಡಿಯಾಕ… ಹಾಡು ಭಾರೀ ಸಂಚಲನ ಸೃಷ್ಟಿಸಿತ್ತು. ಚಿತ್ರಕ್ಕೆ ಮೈಲೇಜ್​ ಸಿಗೋಕೆ ಈ ಹಾಡಿನ ಪಾತ್ರ ಕೂಡ ದೊಡ್ಡದಿದೆ.

ಈ ಮೊದಲು ಚಿತ್ರದ ಲಿರಿಕಲ್​ ವಿಡಿಯೋ ಮಾತ್ರ ರಿಲೀಸ್​ ಆಗಿತ್ತು. ಚಿತ್ರ ಮಂದಿರದಲ್ಲಿ ಈ ಹಾಡಿನ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ದರ್ಶನ್​- ಆಶಾ ಭಟ್​ ಡಾನ್ಸ್​ ಮಾಡಿರುವ ರೀತಿ, ಹಾಡಿಗೆ ಹಾಕಿದ ಸೆಟ್​ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿತ್ತು. ಹೀಗಾಗಿ ಪ್ರೇಕ್ಷಕರಲ್ಲಿ ವಿಡಿಯೋ ಸಾಂಗ್​ ಯಾವಾಗ ರಿಲೀಸ್​ ಆಗಲಿದೆ ಎನ್ನುವ ಕುತೂಹಲ ಇತ್ತು. ಈಗ ಹೋಳಿ ಪ್ರಯುಕ್ತ ರಾಬರ್ಟ್​ ಚಿತ್ರತಂಡ ಈ ಕಲರ್​ಫುಲ್​ ವಿಡಿಯೋ ಸಾಂಗ್​ಅನ್ನು ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಿದೆ. ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಾಂಗ್​ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಹಾಡಿಗೆ ಯೋಗರಾಜ್​ ಭಟ್​ ಸಾಹಿತ್ಯ ಬರೆದಿದ್ದಾರೆ. ಅರ್ಜುನ್​ ಜನ್ಯ ಅವರ ಸಂಗೀತ ಸಂಯೋಜನೆ ಇದೆ.

ಮುಂದೂಡಲ್ಪಟ್ಟಿದ್ದ ರಾಬರ್ಟ್​ ವಿಜಯಯಾತ್ರೆ:

ರಾಬರ್ಟ್​ ಸಿನಿಮಾ ಗೆದ್ದರೆ ರಾಜ್ಯಾದ್ಯಂತ ಸಂಚರಿಸಿ ವಿಜಯ ಯಾತ್ರೆ ಮಾಡಬೇಕು ಎಂಬ ಆಲೋಚನೆ ಚಿತ್ರತಂಡಕ್ಕಿತ್ತು. ಇಂದು (ಮಾ.29) ತುಮಕೂರು, ಚಿತ್ರದುರ್ಗ, ದಾವಣಗೆರೆಗೆ, ಮಾ.30ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿಗೆ ಮಾ.31ರಂದು ತಿಪಟೂರು, ಹಾಸನ ಹಾಗೂ ಶಿವಮೊಗ್ಗ, ಏ.1ರಂದು ಗಂಡ್ಲುಪೇಟೆ, ಮಂಡ್ಯ, ಮೈಸೂರು ಹಾಗೂ ಮದ್ದೂರಿಗೆ ಡಿ ಬಾಸ್​ ಭೇಟಿ ನೀಡಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಈ ವಿಜಯ ಯಾತ್ರೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ರಾಬರ್ಟ್​ ವಿಜಯ ಯಾತ್ರೆ ವಿಚಾರದಲ್ಲಿ ಅಭಿಮಾನಿಗಳಿಗೆ ನಿರಾಸೆ; ದರ್ಶನ್​ ಈ ನಿರ್ಧಾರ ಫ್ಯಾನ್ಸ್​ ಒಳಿತಿಗಾಗಿ

Published On - 6:14 pm, Mon, 29 March 21