AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ನೇಪಾಳದಲ್ಲೂ ಯಶ್​ ಹವಾ! ದೇಶ-ಭಾಷೆ ಮೀರಿದ ಅಭಿಮಾನಕ್ಕೆ ಇಲ್ಲಿದೆ ಲೇಟೆಸ್ಟ್​​ ಉದಾಹರಣೆ

Excerpt: KGF 2 Movie updates: ಕೆಜಿಎಫ್​ ಚಾಪ್ಟರ್​ 2 ಚಿತ್ರವನ್ನು ನೋಡಲು ಭಾರತ ಮಾತ್ರವಲ್ಲದೆ ನೇಪಾಳದಲ್ಲಿ ಇರುವ ಸಿನಿಪ್ರಿಯರು ಕೂಡ ಕಾಯುತ್ತಿದ್ದಾರೆ. ಅಲ್ಲಿಯೂ ಸಹ ‘ಕೆಜಿಎಫ್​ 2’ ಕ್ರೇಜ್​ ಜೋರಾಗಿದೆ.

Yash: ನೇಪಾಳದಲ್ಲೂ ಯಶ್​ ಹವಾ! ದೇಶ-ಭಾಷೆ ಮೀರಿದ ಅಭಿಮಾನಕ್ಕೆ ಇಲ್ಲಿದೆ ಲೇಟೆಸ್ಟ್​​ ಉದಾಹರಣೆ
ಯಶ್​- ಕೆಜಿಎಫ್​ ಚಾಪ್ಟರ್​ 2
ಮದನ್​ ಕುಮಾರ್​
| Edited By: |

Updated on:Mar 29, 2021 | 11:13 AM

Share

‘ಕೆಜಿಎಫ್​’ ಸಿನಿಮಾ ಬಿಡುಗಡೆ ಆದ ಬಳಿಕ ನಟ ಯಶ್​ ಕೇವಲ ಸ್ಯಾಂಡಲ್​ವುಡ್​ ಸ್ಟಾರ್​ ಆಗಿ ಉಳಿದಿಲ್ಲ. ಅವರ ಖ್ಯಾತಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಹಬ್ಬಿದೆ ಎಂಬುದು ಗೊತ್ತಿದೆ. ಅಷ್ಟೇ ಅಲ್ಲ, ದೇಶದ ಆಚೆಯೂ ಯಶ್​ಗೆ ಅಭಿಮಾನಿಗಳು ಇದ್ದಾರೆ. ದೇಶ-ಭಾಷೆಗಳನ್ನೂ ಮೀರಿ ಅವರನ್ನು ಜನರು ಇಷ್ಟಪಡುತ್ತಿದ್ದಾರೆ. ಕೆಜಿಎಫ್​: ಚಾಪ್ಟರ್​ 2’ ಸಲುವಾಗಿ ನೇಪಾಳದ ಪ್ರಜೆಗಳು ಕೂಡ ಕಾಯುತ್ತಿದ್ದಾರೆ. ಅದಕ್ಕೆ ಇಂಟರ್​ನೆಟ್​ನಲ್ಲಿ ಹರಿದಾಡುತ್ತಿರುವ ಒಂದು ಫೋಟೋ ಸಾಕ್ಷಿ ಒದಗಿಸುತ್ತಿದೆ.

ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್​ ಆಗಿ ‘ಕೆಜಿಎಫ್​: ಚಾಪ್ಟರ್​ 1’ ರಿಲೀಸ್​ ಆಗಿತ್ತು. ನಿರೀಕ್ಷೆಗೂ ಮೀರಿದ ಯಶಸ್ಸು ಆ ಸಿನಿಮಾಗೆ ಸಿಕ್ಕಿತ್ತು. ಪರಿಣಾಮವಾಗಿ ‘ಕೆಜಿಎಫ್​: ಚಾಪ್ಟರ್​ 2’ ಕೂಡ ಅದಕ್ಕಿಂತಲೂ ದೊಡ್ಡಮಟ್ಟದ ಹೈಪ್​ ಸೃಷ್ಟಿ ಮಾಡಿದೆ. ಆ ಚಿತ್ರವನ್ನು ನೋಡಲು ಭಾರತ ಮಾತ್ರವಲ್ಲದೆ ನೇಪಾಳದಲ್ಲಿ ಇರುವ ಸಿನಿಪ್ರಿಯರು ಕೂಡ ಕಾಯುತ್ತಿದ್ದಾರೆ. ಅಲ್ಲಿಯೂ ಸಹ ಕೆಜಿಎಫ್​ ಕ್ರೇಜ್​ ಜೋರಾಗಿದೆ. ನೇಪಾಳದ ವಾಹನಗಳ ಮೇಲೆ ‘ಕೆಜಿಎಫ್​ 2’ ಎಂದು ಬರೆದಿರುವ ಫೋಟೋ ಈಗ ವೈರಲ್​ ಆಗಿದೆ.

ವಾಹನದ ಮೇಲೆ ‘ಕೆಜಿಎಫ್​ 2’ ಎಂದು ಬರೆಯಲಾಗಿದೆ ಎಂದಮಾತ್ರಕ್ಕೆ ಇದು ಚಿತ್ರತಂಡ ಮಾಡುತ್ತಿರುವ ಪ್ರಮೋಷನ್​ ಎಂದುಕೊಳ್ಳಬೇಡಿ. ಬದಲಿಗೆ, ನೇಪಾಳದ ಯಶ್ ಅಭಿಮಾನಿಯೊಬ್ಬರ ಲಾರಿ ಹಿಂಬದಿಯಲ್ಲಿ ಕಾಣಿಸಿದ ಬರಹ ಇದು. ರಾಕಿಂಗ್ ಸ್ಟಾರ್​ ಮೇಲಿನ ಅಭಿಮಾನಕ್ಕಾಗಿ ಹಾಗೂ ಕೆಜಿಎಫ್​ 2 ಸಿನಿಮಾ ಮೇಲಿನ ನಿರೀಕ್ಷೆಗಾಗಿ ಆ ಅಭಿಮಾನಿಯು ತನ್ನ ಲಾರಿ ಹಿಂದೆ ‘KGF 2 Coming Soon’ ಎಂದು ಬರೆಸಿಕೊಂಡಿದ್ದಾರೆ. ಯಶ್​ ಹವಾ ನೇಪಾಳದಲ್ಲೂ ಇದೆ ಎಂಬುದಕ್ಕೆ ಇದು ಸಾಕ್ಷಿ ಒದಗಿಸುತ್ತಿದೆ. ಈ ಫೋಟೋ ಕಂಡು ಯಶ್​ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಸದ್ಯ, ಕೆಜಿಎಫ್​: ಚಾಪ್ಟರ್​ 2 ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗಿವೆ. ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಯಶ್​ ಅವರು ಡಬ್ಬಿಂಗ್​ ಆರಂಭಿಸಿದ್ದಾರೆ. ಕೆಜಿಎಫ್​ 2 ತಂಡಕ್ಕೆ ಸಂಜಯ್​ ದತ್​, ರವೀನಾ ಟಂಡನ್​, ಪ್ರಕಾಶ್​ ರೈ ಮುಂತಾದವರ ಆಗಮನ ಆಗಿರುವುದರಿಂದ ಚಿತ್ರದ ತೂಕ ಇನ್ನಷ್ಟು ಹೆಚ್ಚಿದೆ. ಜುಲೈ 16ರಂದು ವಿಶ್ವಾದ್ಯಂತ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿಕ್ಕ ಟೀಸರ್​ 17.8 ಕೋಟಿಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

nepal lorry

ವೈರಲ್​ ಆಗುತ್ತಿರುವ ನೇಪಾಳ ಲಾರಿ ಫೋಟೋ

‘ಕೆಜಿಎಫ್​ 2’ ತಂಡದಿಂದ ಸಿಗುವ ಎಲ್ಲಾ ಅಪ್​ಡೇಟ್​ಗಳಿಗಾಗಿ ಯಶ್​ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾದ ಪ್ರಚಾರಕಾರ್ಯಗಳಿಗೆ ಚಿತ್ರತಂಡದಿಂದ ಚಾಲನೆ ಸಿಗುವ ನಿರೀಕ್ಷೆ ಇದೆ. ಟ್ರೇಲರ್​ ಮತ್ತು ಹಾಡುಗಳ ಮೇಲೆ ಸಿನಿಪ್ರಿಯರು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್​-2ನಲ್ಲಿ ಅನಂತ್​ ನಾಗ್​-ಪ್ರಕಾಶ್​ ರೈ​​ ಪಾತ್ರಕ್ಕೂ ಇರುವ ಸಂಬಂಧವೇನು? ಪ್ರಶಾಂತ್​ ನೀಲ್​ ಬಿಚ್ಚಿಟ್ರು ಅಸಲಿ ವಿಚಾರ 

KGF Chapter 2 ಚಿತ್ರದ ಅಪ್​ಡೇಟ್​ಗಾಗಿ ಕಾದಿದ್ದ ಎಲ್ಲರಿಗೂ ಗುಡ್​-ನ್ಯೂಸ್ ನೀಡಿದ ಯಶ್​-ಪ್ರಶಾಂತ್​ ನೀಲ್​!

Published On - 9:25 am, Mon, 29 March 21

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!
ಲಕ್ಕುಂಡಿಯಲ್ಲಿ 3 ತಲೆಯ ನಾಗರಕಲ್ಲು ಪ್ರಾಚ್ಯಾವಶೇಷ ಪತ್ತೆ!