ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​

ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಿ. ಹಳ್ಳಿ ಜನ ಏನೋ‌ ಮಾತಾಡಿದಾರೆ, ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ. ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಅಂತ ಸುಮ್ಮನೆ ಕೂರೋಕಾಗಲ್ಲ. ಹಾಗಾಗಿ ನಾನೇ ಬಂದಿದ್ದೇನೆ. ಗ್ರಾಮಸ್ಥರಿಗೆ ಬೇಕಿದ್ರೆ ಕೇಳಲಿ ಸರ್ ಹತ್ತು ಎಕರೆಯನ್ನಾದ್ರೂ ಬಿಟ್ಟು ಕೊಡ್ತೀನಿ.

ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​
ಯಶ್​
Follow us
|

Updated on:Mar 09, 2021 | 5:27 PM

ಹಾಸನ: ಜಮೀನಿನ ದಾರಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ತಂದೆ, ತಾಯಿ ನಡುವೆ ಆಗಿರುವ ಜಗಳಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಗೆ ಭೇಟಿ ನೀಡಿದ ನಂತರ ಪ್ರತಿಕ್ರಿಯಿಸಿರುವ ನಟ ರಾಕಿಂಗ್​ ಸ್ಟಾರ್​ ಯಶ್​, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ. ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಎಲ್ಲಿಂದಲೋ‌ ಬಂದವರು ಅಂತಾರಂತೆ, ನಾನು ಇಲ್ಲೇ ಹುಟ್ಟಿ ಬೆಳೆದವನು ಸಾರ್, ನಾನು ಹಾಸನದಲ್ಲೂ ಮಾಡ್ತೀನಿ, ಬೆಳಗಾವಿಯಲ್ಲೂ ಮಾಡ್ತೀನಿ, ಮಂಗಳೂರಲ್ಲೂ ಮಾಡ್ತೀನಿ, ನಾವು ಸೆಲೆಬ್ರಿಟಿ ಆಗೋದೇ ತಪ್ಪು ಎನ್ನುವ ಹಾಗಾಗಿದೆ ಎಂದು ಗರಂ ಆಗಿದ್ದಾರೆ.

ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಅದನ್ನು ಬಗೆಹರಿಸಿಕೊಳ್ಳಲಿ. ಹಳ್ಳಿ ಜನ ಏನೋ‌ ಮಾತಾಡಿದಾರೆ, ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ. ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಅಂತ ಸುಮ್ಮನೆ ಕೂರೋಕಾಗಲ್ಲ. ಹಾಗಾಗಿ ನಾನೇ ಬಂದಿದ್ದೇನೆ. ಗ್ರಾಮಸ್ಥರಿಗೆ ಬೇಕಿದ್ರೆ ಕೇಳಲಿ ಸರ್ ಹತ್ತು ಎಕರೆಯನ್ನಾದ್ರೂ ಬಿಟ್ಟು ಕೊಡ್ತೀನಿ. ದುಡ್ದು ಮಾಡೋ ಹಾಗಿದ್ದರೆ ಬೆಂಗಳೂರಲ್ಲೇ ಮಾಡಬಹುದಿತ್ತು. ಅಲ್ಲಿ ಜಮೀನು ಮಾಡಿದ್ರೆ ಚೆನ್ನಾಗಿ ಹಣವೂ ಸಿಗ್ತಿತ್ತು. ನಾನು‌ ಹಾಸನದಲ್ಲಿ ಯಾಕೆ‌ ಜಮೀನು ಮಾಡಬೇಕು ಅರ್ಥ ಮಾಡ್ಕೊಳ್ಳಿ. ಮಾದರಿ ರೀತಿಯಲ್ಲಿ ಕೃಷಿ ಮಾಡಬೇಕೆಂದು ಮಾಡಿದ್ದೇನೆ ಎಂದು ಹಾಸನ ಜಿಲ್ಲೆ ದುದ್ದಾ ಪೊಲೀಸ್ ಠಾಣೆ ಎದುರು ನಟ ಯಶ್ ಹೇಳಿದ್ದಾರೆ.

ನಾವೂ ಅಪ್ಪ ಅಮ್ಮನಿಗೆ ಹುಟ್ಟಿದ ಮಕ್ಕಳೇ. ತಂದೆ ತಾಯಿಗೆ ಮಾತನಾಡಿದರೂ ನಮ್ಮ ಇಮೇಜ್ ಎಂದು ಕೂರಲು ಆಗಲ್ಲ. ಎಲ್ಲರೂ ಮೀಡಿಯಾ ಇದೆ, ಮೀಡಿಯಾ ಇದೆ ಅಂತಾರೆ ಇರ್ಲಿ ಬಿಡ್ರೀ. ರಸ್ತೆ ವಿವಾದ ಒಂದೂವರೆ ವರ್ಷದ ಹಿಂದೆಯೇ ಮುಗಿದಿದೆ. ರಸ್ತೆ ವಿವಾದ ದೊಡ್ಡದಲ್ಲ. ಹೀಗೆಲ್ಲ ಬಣ್ಣ ಕಟ್ಟುತ್ತಾರೆ ನೀವು ನಂಬೋಕೆ ಹೋಗ್ಬೇಡಿ ಎಂದು ಕಿಡಿಕಾರಿದ್ದಾರೆ. ಈ ಘಟನೆ ಸಂಬಂಧ ಬೇಸರ ವ್ಯಕ್ತಪಡಿಸಿರುವ ರಾಕಿಗ್ ಸ್ಟಾರ್, ಸ್ಕೂಲ್‌ ಮಾಡ್ತಾರಾ ಯಾರಾದ್ರೂ ಅಥವಾ ಬಡವರಿಗೆ ಅನುಕೂಲ ಆಗುತ್ತಾ ಬೇಕಿದ್ರೆ ಕೇಳಲಿ ನಾವೇ ಹತ್ತು ಎಕರೆ ಜಮೀನು‌ ಕೊಡುತ್ತೇವೆ. ನಮ್ಮ ತಂದೆ ತಾಯಿ ಕೂಡ ಹಳ್ಳಿ ಜನರೇ, ಅವರೂ ಮಾತನಾಡಿರಬಹುದು. ಆದರೆ, ತಂದೆ ತಾಯಿ ಜೊತೆ ಹಾಗೆ ಕೆಟ್ಟದಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ‌ಕೆಲ ಸ್ಥಳೀಯರ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ.

ಇದನ್ನೂ ಓದಿ:

ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಹಾಸನದಲ್ಲಿ ನಟ ಯಶ್ ತಂದೆ-ತಾಯಿ, ಗ್ರಾಮಸ್ಥರ ನಡುವೆ ಗಲಾಟೆ

ನಿಧಿ ಸುಬ್ಬಯ್ಯ ಮನೆ ಒಳಗೆ ಮಾಲೆ ಪಟಾಕಿ ಎಸೆದಿದ್ರಂತೆ ಯಶ್​! ಬಿಗ್​ ಬಾಸ್​ ಮನೆಯಲ್ಲಿ ಹೊರ ಬಿತ್ತು ಅಚ್ಚರಿ ವಿಚಾರ

Published On - 5:08 pm, Tue, 9 March 21

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು