ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಹಾಸನದಲ್ಲಿ ನಟ ಯಶ್ ತಂದೆ-ತಾಯಿ, ಗ್ರಾಮಸ್ಥರ ನಡುವೆ ಗಲಾಟೆ

Yash Parents: ಯಶ್ ತಂದೆ ಅರುಣ್‌ಕುಮಾರ್, ತಾಯಿ ಪುಷ್ಪ ಜಮೀನಿನ ಬಳಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು ಈ ವೇಳೆ ಕೆಲಸ ಮಾಡಿಸದಂತೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಯಶ್ ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಗಲಾಟೆ ಶುರುವಾಗಿದೆ.

  • TV9 Web Team
  • Published On - 8:55 AM, 9 Mar 2021
ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಹಾಸನದಲ್ಲಿ ನಟ ಯಶ್ ತಂದೆ-ತಾಯಿ, ಗ್ರಾಮಸ್ಥರ ನಡುವೆ ಗಲಾಟೆ
ನಟ ಯಶ್ ತಂದೆ-ತಾಯಿ, ಗ್ರಾಮಸ್ಥರ ನಡುವೆ ಗಲಾಟೆ

ಹಾಸನ : ಸ್ಯಾಂಡಲ್​ವುಡ್ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ತಂದೆ-ತಾಯಿ ಜೊತೆ ಗ್ರಾಮಸ್ಥರು ಜಗಳಕ್ಕೆ ಇಳಿದಿರುವ ಘಟನೆ ಹಾಸನದಲ್ಲಿ ನಡೆದಿದೆ. ಜಮೀನಿಗೆ ರಸ್ತೆ ನಿರ್ಮಿಸೋ ವಿಚಾರಕ್ಕೆ ಯಶ್ ಫ್ಯಾಮಿಲಿ ನಡುವೆ ಜಿಲ್ಲೆಯ ತಿಮ್ಮೇನಹಳ್ಳಿ ಗ್ರಾಮದ ಜನ ಗಲಾಟೆಗೆ ಮುಂದಾಗಿದ್ದಾರೆ. ನಟ ಯಶ್ ತಂದೆ ಅರುಣ್ ಕುಮಾರ್‌ ಹಾಗೂ ತಾಯಿ ಪುಷ್ಪ ಜಮೀನಿನ ಬಳಿ ಕೆಲಸ ಮಾಡೋವಾಗ ಗ್ರಾಮಸ್ಥರ ನಡುವೆ ವಾಗ್ವಾದ ಶುರುವಾಗಿದೆ.

ಯಶ್ ತಂದೆ ಅರುಣ್‌ಕುಮಾರ್, ತಾಯಿ ಪುಷ್ಪ ಜಮೀನಿನ ಬಳಿ ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು ಈ ವೇಳೆ ಕೆಲಸ ಮಾಡಿಸದಂತೆ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಯಶ್ ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ಮತ್ತು ಕೆಲ ರಾಕಿಂಗ್ ಸ್ಟಾರ್ ಯಶ್ ಬೆಂಬಲಿಗರು ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಸ್ಥಳಕ್ಕೆ ದುದ್ದ ಪೊಲೀಸರು ಭೇಟಿ ನೀಡಿದ್ದು ಮಧ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿದಿದೆ.

ಇದನ್ನೂ ಓದಿ: Radhika Pandit Birthday : ಮನೆ ಬಳಿ ಬರಬೇಡಿ ಅಂತೀರಿ, ಹಾಗಾದ್ರೆ ಸಿನಿಮಾ ಯಾಕೆ ರಿಲೀಸ್​ ಮಾಡ್ತೀರಿ? ಫ್ಯಾನ್ಸ್​ ಖಡಕ್​ ಪ್ರಶ್ನೆ!