AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿಎಫ್​-2ನಲ್ಲಿ ಅನಂತ್​ ನಾಗ್​-ಪ್ರಕಾಶ್​ ರೈ​​ ಪಾತ್ರಕ್ಕೂ ಇರುವ ಸಂಬಂಧವೇನು? ಪ್ರಶಾಂತ್​ ನೀಲ್​ ಬಿಚ್ಚಿಟ್ರು ಅಸಲಿ ವಿಚಾರ

ಅನಂತ್​ ನಾಗ್​ ಪಾತ್ರ ಸಿನಿಮಾದಲ್ಲಿ ಇಲ್ಲ ಎಂಬುದನ್ನು ಚಿತ್ರತಂಡ ಒಪ್ಪಿಕೊಂಡಿಲ್ಲ. ಆದರೆ, ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಪ್ರಕಾಶ್​ ರೈ ಅವರ ಪಾತ್ರವೇ ಸಿನಿಮಾದ ಕಥೆಯ ವಿವರಣೆ ನೀಡಲಿದೆಯಂತೆ.

ಕೆಜಿಎಫ್​-2ನಲ್ಲಿ ಅನಂತ್​ ನಾಗ್​-ಪ್ರಕಾಶ್​ ರೈ​​ ಪಾತ್ರಕ್ಕೂ ಇರುವ ಸಂಬಂಧವೇನು? ಪ್ರಶಾಂತ್​ ನೀಲ್​ ಬಿಚ್ಚಿಟ್ರು ಅಸಲಿ ವಿಚಾರ
ಅನಂತ್​ ನಾಗ್​-ಪ್ರಕಾಶ್​ ರೈ
ರಾಜೇಶ್ ದುಗ್ಗುಮನೆ
|

Updated on: Mar 26, 2021 | 5:56 PM

Share

ಕೆಜಿಎಫ್​-2 ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಜನವರಿಯಲ್ಲಿ ರಿಲೀಸ್​ ಆಗಿದ್ದ ಸಿನಿಮಾದ ಟೀಸರ್​ ಈಗಾಗಲೇ ಹೊಸ ದಾಖಲೆ ಸೃಷ್ಟಿ ಮಾಡಿದೆ. ಸಿನಿಮಾ ಬಗ್ಗೆ ನಿರೀಕ್ಷೆ ಅಷ್ಟೇ ಅಲ್ಲ, ಕೆಲ ಗೊಂದಲ ಕೂಡ ಸೃಷ್ಟಿ ಆಗಿತ್ತು. ಈ ಗೊಂದಲವನ್ನು ನಿರ್ದೇಶಕ ಪ್ರಶಾಂತ್​ ನೀಲ್​ ಬಗೆಹರಿಸುವ ಕೆಲಸ ಮಾಡಿದ್ದಾರೆ. ಕೆಜಿಎಫ್​-1ರಲ್ಲಿ ಆನಂದ್​ ಇಂಗಳಗಿ ಪಾತ್ರದಲ್ಲಿ ಅನಂತ್​ ನಾಗ್​ ಕಾಣಿಸಿಕೊಂಡಿದ್ದರು. ಹಿರಿಯ ಪತ್ರಕರ್ತರಾಗಿ ಸಿನಿಮಾದ ಕಥೆಯನ್ನು ಅಚ್ಚುಕಟ್ಟಾಗಿ ವಿವರಿಸಿದ್ದರು. ಈ ಮಧ್ಯೆ ಅನಂತ್​ ನಾಗ್​ ಚಿತ್ರತಂಡದಿಂದ ಹೊರ ನಡೆದಿದ್ದರು ಎನ್ನುವ ಮಾತು ಕೇಳಿ ಬಂದಿದ್ದರೂ, ಚಿತ್ರತಂಡ ಇದನ್ನು ಅಲ್ಲಗಳೆದಿತ್ತು. ಇದಾದ ಬೆನ್ನಲ್ಲೇ ಪ್ರಕಾಶ್​ ರೈ ಅವರ ಪಾತ್ರವನ್ನು ಚಿತ್ರತಂಡ ಪರಿಚಯಿಸಿತ್ತು. ಇದರಿಂದ, ಅನಂತ್​ ನಾಗ್​ ಪಾತ್ರವನ್ನು ಪ್ರಕಾಶ್​ ರೈ ಮುಂದುವರಿಸುತ್ತಿದ್ದಾರಾ ಎನ್ನುವ ಅನುಮಾನ ಕಾಣಿಸಿಕೊಂಡಿತ್ತು. ಈ ಅನುಮಾನಕ್ಕೆ ಪ್ರಶಾಂತ್​ ನೀಲ್​ ಇಂದು ತೆರೆ ಎಳೆದಿದ್ದಾರೆ.

ಇಂದು (ಮಾ.26) ಪ್ರಕಾಶ್ ರೈ ಜನ್ಮದಿನ. ಹೀಗಾಗಿ, ಕೆಜಿಎಫ್​-2 ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಗಿಫ್ಟ್​ ಆಗಿ ಹೊಸ ಪೋಸ್ಟರ್​ ಒಂದನ್ನು ರಿಲೀಸ್ ಮಾಡಿದ್ದಾರೆ. ಇದರಲ್ಲಿ ಪ್ರಕಾಶ್ ಪಾತ್ರದ ಸಂಪೂರ್ಣ ಪರಿಚಯ ಸಿಕ್ಕಿದೆ. ಕೆಜಿಎಫ್​-2ನಲ್ಲಿ ವಿಜಯೇಂದ್ರ  ಇಂಗಳಗಿಯಾಗಿ ಪ್ರಕಾಶ್​ ರೈ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಅನಂತ್​ ನಾಗ್​ ಪಾತ್ರವೇ ಬೇರೆ ಇವರ ಪಾತ್ರವೇ ಬೇರೆ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸಿದಂತಾಗಿದೆ.

ಅನಂತ್​ ನಾಗ್​ ಪಾತ್ರ ಸಿನಿಮಾದಲ್ಲಿ ಇಲ್ಲ ಎಂಬುದನ್ನು ಚಿತ್ರತಂಡ ಒಪ್ಪಿಕೊಂಡಿಲ್ಲ. ಆದರೆ, ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಪ್ರಕಾಶ್​ ರೈ ಅವರ ಪಾತ್ರವೇ ಸಿನಿಮಾದ ಕಥೆಯ ವಿವರಣೆ ನೀಡಲಿದೆಯಂತೆ. ಇಂದು ರಿಲೀಸ್​ ಆಗಿರುವ ಪೋಸ್ಟರ್​ನಲ್ಲಿ ಒಂದಷ್ಟು ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿದೆ. ಸಿನಿಮಾ ರಿಲೀಸ್​ ಆದ ನಂತರ ಎಲ್ಲ ಪ್ರಶ್ನೆಗೆ ಉತ್ತರ ಸಿಗಲಿದೆ.

ಕೆಜಿಎಫ್​-2 ಸಿನಿಮಾ ಜುಲೈ 16ರಂದು ತೆರೆಗೆ ಬರುತ್ತಿದೆ. ಯಶ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಶ್ರೀನಿಧಿ ಶೆಟ್ಟಿ ಚಿತ್ರದ ನಾಯಕಿ. ಈ ಸಿನಿಮಾದಲ್ಲಿ ಬಾಲಿವುಡ್​ ಸ್ಟಾರ್​ ನಟ ಸಂಜಯ್​ ದತ್​ ಮುಖ್ಯ ವಿಲನ್​ ಆಗಿ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಹೊಸ ದಾಖಲೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: KGF Chapter 2: ಹಾಲಿವುಡ್​ ಸಿನಿಮಾದಲ್ಲಿ ಕೆಜಿಎಫ್​-2 ಡೈಲಾಗ್? ಏನಿದರ ಹಿಂದಿನ ರಹಸ್ಯ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More