AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KGF Chapter 2 ಚಿತ್ರದ ಅಪ್​ಡೇಟ್​ಗಾಗಿ ಕಾದಿದ್ದ ಎಲ್ಲರಿಗೂ ಗುಡ್​-ನ್ಯೂಸ್ ನೀಡಿದ ಯಶ್​-ಪ್ರಶಾಂತ್​ ನೀಲ್​!

Yash: ಇತ್ತೀಚೆಗೆ ಇಡೀ ‘ಕೆಜಿಎಫ್​ ಚಾಪ್ಟರ್​ 2’ ತಂಡ ಒಂದು ಕಡೆ ಸೇರಿಕೊಂಡಿದೆ. ಪ್ರಶಾಂತ್​ ನೀಲ್​, ಯಶ್​, ಗರುಡ ರಾಮ್​, ನಿರ್ಮಾಪಕ ವಿಜಯ್ ಕಿರಗಂದೂರು ಮುಂತಾದವರ ಜೊತೆ ರಾಧಿಕಾ ಪಂಡಿತ್​ ಕೂಡ ಒಟ್ಟಾಗಿ ಕಾಲ ಕಳೆದಿದ್ದಾರೆ.

KGF Chapter 2 ಚಿತ್ರದ ಅಪ್​ಡೇಟ್​ಗಾಗಿ ಕಾದಿದ್ದ ಎಲ್ಲರಿಗೂ ಗುಡ್​-ನ್ಯೂಸ್ ನೀಡಿದ ಯಶ್​-ಪ್ರಶಾಂತ್​ ನೀಲ್​!
ವಿಜಯ್​ ಕಿರಗಂದೂರು- ಯಶ್​- ಪ್ರಶಾಂತ್​ ನೀಲ್​
ಮದನ್​ ಕುಮಾರ್​
| Edited By: |

Updated on:Mar 24, 2021 | 9:17 AM

Share

ಇಡೀ ಭಾರತೀಯ ಚಿತ್ರರಂಗವೇ ‘ಕೆಜಿಎಫ್​: ಚಾಪ್ಟರ್​ 2’ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಈ ಸಿನಿಮಾ ತಂಡದಿಂದ ಬರುವ ಎಲ್ಲ ಅಪ್​ಡೇಟ್​ಗಳಿಗಾಗಿ ಸಿನಿಪ್ರಿಯರು ಕಾಯುತ್ತ ಇರುತ್ತಾರೆ. ನಿರ್ದೇಶಕ ಪ್ರಶಾಂತ್​ ನೀಲ್​ ಮತ್ತು ‘ರಾಕಿಂಗ್​ ಸ್ಟಾರ್​​’ ಯಶ್​ ಬಳಗದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಅಭಿಮಾನಿಗಳದ್ದು. ಅಂಥ ಎಲ್ಲ ಫ್ಯಾನ್ಸ್​ಗಾಗಿ ಲೇಟೆಸ್ಟ್ ಮಾಹಿತಿ ಹಂಚಿಕೊಂಡಿದೆ ‘ಕೆಜಿಎಫ್​ 2’ ಟೀಮ್​.

ಹೇಗೆ ಸಾಗುತ್ತಿದೆ KGF 2 ಕೆಲಸ? ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಶೂಟಿಂಗ್​ ಈಗಾಗಲೇ ಮುಗಿದಿದೆ. ಜುಲೈ 16ರಂದು ಈ ಸಿನಿಮಾ ತೆರೆಕಾಣುವುದು ಕೂಡ ಖಚಿತ ಆಗಿದೆ. ಹಾಗಾದರೆ ಸದ್ಯ ಈ ಚಿತ್ರದ ಕೆಲಸಗಳು ಯಾವ ಹಂತದಲ್ಲಿವೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಅದಕ್ಕೆ ಪ್ರಶಾಂತ್​ ನೀಲ್​ ಉತ್ತರ ನೀಡಿದ್ದಾರೆ. ಸದ್ಯಕ್ಕೆ ಡಬ್ಬಿಂಗ್ ಕೆಲಸಗಳು ಭರದಿಂದ ಸಾಗುತ್ತಿವೆ. ಆ ಖುಷಿಯನ್ನು ಹಂಚಿಕೊಳ್ಳುವ ಸಲುವಾಗಿ ಪ್ರಶಾಂತ್​ ನೀಲ್​ ಹೊಸ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

ಡಬ್ಬಿಂಗ್​ ಶುರು ಮಾಡಿದ ರಾಕಿ ಭಾಯ್​! ಈ ಬಹುನಿರೀಕ್ಷಿತ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಬಹಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಈಗ ರಾಕಿ ಭಾಯ್​ ಅಲಿಯಾಸ್​ ಅಭಿಮಾನಿಗಳ ನೆಚ್ಚಿನ ‘ರಾಕಿಂಗ್​ ಸ್ಟಾರ್​’ ಯಶ್​ ಅವರು ಡಬ್ಬಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯಶ್ ಜೊತೆ ಇರುವ ಫೋಟೋವನ್ನು ಪ್ರಶಾಂತ್​ ನೀಲ್​ ಶೇರ್​ ಮಾಡಿಕೊಂಡಿದ್ದು, ‘ರಾಕಿ ಜೊತೆ ಡಬ್ಬಿಂಗ್​ ಮಾಡುವುದು ಯಾವಾಗಲೂ ರಾಕಿಂಗ್​ ಆಗಿರುತ್ತದೆ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಇತ್ತೀಚೆಗೆ ಇಡೀ ‘ಕೆಜಿಎಫ್​ ಚಾಪ್ಟರ್​ 2’ ತಂಡ ಒಂದು ಕಡೆ ಸೇರಿಕೊಂಡಿದೆ. ಪ್ರಶಾಂತ್​ ನೀಲ್​, ಯಶ್​, ಗರುಡ ರಾಮ್​, ನಿರ್ಮಾಪಕ ವಿಜಯ್ ಕಿರಗಂದೂರು ಮುಂತಾದವರ ಜೊತೆ ರಾಧಿಕಾ ಪಂಡಿತ್​ ಕೂಡ ಒಟ್ಟಾಗಿ ಕಾಲ ಕಳೆದಿದ್ದಾರೆ. ಆ ಸಂದರ್ಭದ ಫೋಟೋವನ್ನೂ ಪ್ರಶಾಂತ್​ ಹಂಚಿಕೊಂಡಿದ್ದಾರೆ. ‘ಅದ್ಭುತವಾಗಿ ಶುರುವಾದ ಈ ಪಯಣಕ್ಕೆ ಕೊನೆ ಇಲ್ಲ’ ಎಂದು ತಮ್ಮ ಕೆಜಿಎಫ್​ ಫ್ಯಾಮಿಲಿ ಜೊತೆಗಿನ ಜರ್ನಿಯನ್ನು ಪ್ರಶಾಂತ್​ ಬಣ್ಣಿಸಿದ್ದಾರೆ.

‘ಕೆಜಿಎಫ್​ 1’ ಸೂಪರ್​ ಹಿಟ್​ ಆಗಿದ್ದರಿಂದ ಚಾಪ್ಟರ್​ 2 ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಅವರ ಆಗಮನದಿಂದಾಗಿ ಚಿತ್ರದ ತೂಕ ಹೆಚ್ಚಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ 17.7 ಕೋಟಿ​ಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಚಿತ್ರದ ಮೇಲೆ ಸಿನಿಪ್ರಿಯರಿಗೆ ಯಾವ ಮಟ್ಟಿಗಿನ ಕಾತರ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ. ಇನ್ನು ‘ಕೆಜಿಎಫ್​ 2’ ಬಿಡುಗಡೆಗೂ ಮುನ್ನವೇ ಪ್ರಶಾಂತ್​ ನೀಲ್​ ‘ಸಲಾರ್​’ ಸಿನಿಮಾದ ಕಡೆಗೆ ಗಮನ ಹರಿಸಿದ್ದು ಆ ಬಗ್ಗೆಯೂ ಅಚ್ಚರಿಯ ಸುದ್ದಿಗಳು ಕೇಳಿಬರುತ್ತಿವೆ.

ಇದನ್ನೂ ಓದಿ: Yash: ಯಶ್​ ಪುತ್ರ ಹೇಳಿದ ಒಂದೇ ಪದಕ್ಕೆ ಮಿಲಿಯನ್​ ವ್ಯೂಸ್​! ಯಾವ ಸ್ಟಾರ್​ಗೂ ಕಮ್ಮಿ ಇಲ್ಲ ಯಥರ್ವ್​ ಹವಾ

ದುಡ್ಡು ಮಾಡೋಕೆ ಇಲ್ಲಿಗೆ ಬಂದಿಲ್ಲ, ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ: ಯಶ್​

Published On - 8:41 am, Wed, 24 March 21

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್