Sign In

By signing in or creating an account, you agree with Associated Broadcasting Company's Terms & Conditions and Privacy Policy.

Roberrt: ರಾಜ್ಯಾದ್ಯಂತ ಇನ್ಮೇಲೆ ಡಿ ಬಾಸ್​ ಜಾತ್ರೆ! ಫ್ಯಾನ್ಸ್​ಗೆ ಧನ್ಯವಾದ ಹೇಳಲು ದರ್ಶನ್​ ದೊಡ್ಡ ನಿರ್ಧಾರ!

Darshan: ರಾಜ್ಯಾದ್ಯಂತ ಇರುವ ದರ್ಶನ್​ ಅಭಿಮಾನಿಗಳಿಗೆ ರಾಬರ್ಟ್​ ತಂಡದ ಕಡೆಯಿಂದ ಒಂದು ಸಿಹಿ ಸುದ್ದಿ ಸಿಕ್ಕಿದೆ. ಹಲವು ಜಿಲ್ಲೆಗಳಿಗೆ ಡಿ ಬಾಸ್​ ಭೇಟಿ ನೀಡಿ, ಅಭಿಮಾನಿಗಳಿಗೆ ಧನ್ಯವಾದ ಹೇಳಲಿದ್ದಾರೆ.

Roberrt: ರಾಜ್ಯಾದ್ಯಂತ ಇನ್ಮೇಲೆ ಡಿ ಬಾಸ್​ ಜಾತ್ರೆ! ಫ್ಯಾನ್ಸ್​ಗೆ ಧನ್ಯವಾದ ಹೇಳಲು ದರ್ಶನ್​ ದೊಡ್ಡ ನಿರ್ಧಾರ!
ದರ್ಶನ್​- ರಾಬರ್ಟ್​ ವಿಜಯ ಯಾತ್ರೆ ವೇಳಾಪಟ್ಟಿ
Follow us
ಮದನ್​ ಕುಮಾರ್​
|

Updated on: Mar 23, 2021 | 2:47 PM

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಅದ್ದೂರಿ ಯಶಸ್ಸು ಕಂಡಿದೆ. ಮೊದಲ ವಾರವೇ 78.36 ಕೋಟಿ ರೂ. ಗಳಿಸಿದ ಈ ಸಿನಿಮಾ ದರ್ಶನ್​ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ನೀಡಿದೆ. ಪ್ರೇಕ್ಷಕರು ಎರಡನೇ ವಾರ ಕೂಡ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಫ್ಯಾಮಿಲಿ ಪ್ರೇಕ್ಷಕರು ಸಹ ರಾಬರ್ಟ್​ಗೆ ಮನ ಸೋತಿದ್ದಾರೆ. ಕೊರೊನಾ ಎರಡನೇ ಅಲೆ ಭೀತಿ ನಡುವೆಯೂ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ದರ್ಶನ್​ ಸಜ್ಜಾಗಿದ್ದಾರೆ.

ರಾಬರ್ಟ್​ ಸಿನಿಮಾ ಗೆದ್ದರೆ ರಾಜ್ಯಾದ್ಯಂತ ಸಂಚರಿಸಿ ವಿಜಯ ಯಾತ್ರೆ ಮಾಡಬೇಕು ಎಂಬ ಆಲೋಚನೆ ಚಿತ್ರತಂಡಕ್ಕಿತ್ತು. ಆ ಬಗ್ಗೆ ಆಲೋಚನೆ ಮಾಡುವುದಾಗಿ ಚಿತ್ರದ ಸಕ್ಸಸ್​ ಮೀಟ್​ನಲ್ಲಿ ದರ್ಶನ್​ ಕೂಡ ಹೇಳಿದ್ದರು. ಆ ಕುರಿತು ತಂಡ ನಿರ್ಧಾರ ತೆಗೆದುಕೊಂಡಿದ್ದು, ಈಗ ವಿಜಯ ಯಾತ್ರೆಯ ವೇಳಾಪಟ್ಟಿಯನ್ನು ಹಂಚಿಕೊಂಡಿದೆ. ಮಾ.29ರಿಂದ ದರ್ಶನ್​ ರಾಜ್ಯ ಸಂಚಾರ ಶುರು ಮಾಡಲಿದ್ದಾರೆ.

ಮಾ.29ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆಗೆ ರಾಬರ್ಟ್​ ತಂಡದ ಜೊತೆ ದರ್ಶನ್​ ತೆರಳಲಿದ್ದಾರೆ. ಮಾ.30ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿಗೆ ಭೇಟಿ ನೀಡಲಿದ್ದಾರೆ. ಮಾ.31ರಂದು ತಿಪಟೂರು, ಹಾಸನ ಹಾಗೂ ಶಿವಮೊಗ್ಗದ ಅಭಿಮಾನಿಗಳನ್ನು ದರ್ಶನ್​ ಭೇಟಿ ಆಗಲಿದ್ದಾರೆ. ಏ.1ರಂದು ಗಂಡ್ಲುಪೇಟೆ, ಮಂಡ್ಯ, ಮೈಸೂರು ಹಾಗೂ ಮದ್ದೂರಿಗೆ ಡಿ ಬಾಸ್​ ಭೇಟಿ ನೀಡಿದ್ದಾರೆ.

ರಾಜ್ಯಾದ್ಯಂತ ದರ್ಶನ್​ಗೆ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಪ್ರತಿ ವರ್ಷ ತಮ್ಮ ನೆಚ್ಚಿನ ನಟನ ಬರ್ತ್​ಡೇ ಆಚರಿಸಲು ಬೆಂಗಳೂರಿಗೆ ಬರುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಈ ಬಾರಿ ಸಾಧ್ಯವಾಗಿರಲಿಲ್ಲ. ಈಗ ಸ್ವತಃ ದರ್ಶನ್​ ಅವರೇ ಎಲ್ಲ ಜಿಲ್ಲೆಗಳಿಗೂ ತೆರಳಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಿರುವುದು ವಿಶೇಷ. ರಾಬರ್ಟ್​ ಸಿನಿಮಾದ ಅಭೂತಪೂರ್ವ ಗೆಲುವಿಗೆ ಕಾರಣರಾದ ತಮ್ಮ ಎಲ್ಲ ಅಭಿಮಾನಿಗಳಿಗೆ ಈ ವೇಳೆ ದರ್ಶನ್​ ಧನ್ಯವಾದ ತಿಳಿಸಲಿದ್ದಾರೆ.

ದರ್ಶನ್​ ಅವರನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಮುಗಿಬೀಳುವುದು ಗ್ಯಾರಂಟಿ. ಅವರು ಹೋದಲ್ಲೆಲ್ಲ ಜಾತ್ರೆಯ ವಾತಾವರಣ ನಿರ್ಮಾಣ ಆಗುತ್ತದೆ. ಇನ್ನುಳಿದ ಜಿಲ್ಲೆಗಳಲ್ಲಿನ ವಿಜಯ ಯಾತ್ರೆ ಕುರಿತಂತೆ ಇನ್ನೂ ಹೆಚ್ಚಿನ ವಿವರವನ್ನು ಚಿತ್ರತಂಡ ಸದ್ಯದಲ್ಲೇ ಹಂಚಿಕೊಳ್ಳಲಿದೆ. ನಿರ್ದೇಶಕ ತರುಣ್​ ಸುಧೀರ್​, ನಾಯಕಿ ಆಶಾ ಭಟ್​ ಮುಂತಾದವರು ದರ್ಶನ್​ಗೆ ಸಾಥ್​ ನೀಡಲಿದ್ದಾರೆ.

ಇದನ್ನೂ ಓದಿ: Darshan: ರಿಯಲ್ ಸಾರಥಿ ಜೊತೆ ರೀಲ್​ ಸಾರಥಿ ಭೇಟಿ! ಡಿ ಬಾಸ್​ ದರ್ಶನ್​ ಬಾಲ್ಯದ ವಿಶೇಷ ವ್ಯಕ್ತಿ ಇವರು

ರಾಬರ್ಟ್​ ಸಕ್ಸಸ್​ ಮೀಟ್​ ವೇದಿಕೆಯಲ್ಲೇ ನಿರ್ದೇಶಕ ತರುಣ್​ ಸುಧೀರ್​ ಮದುವೆ ಮಾತುಕತೆ!

ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ