AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಬರ್ಟ್​ ಸಕ್ಸಸ್​ ಮೀಟ್​ ವೇದಿಕೆಯಲ್ಲೇ ನಿರ್ದೇಶಕ ತರುಣ್​ ಸುಧೀರ್​ ಮದುವೆ ಮಾತುಕತೆ!

ರಾಬರ್ಟ್​ ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸೇರಿತ್ತು. ನಿರ್ದೇಶಕ ತರುಣ್​ ಸುಧೀರ್​ ಅವರು ವೇದಿಕೆ ಏರುತ್ತಿದ್ದಂತೆಯೇ ದರ್ಶನ್​ ಒಂದು ಪ್ರಶ್ನೆ ಕೇಳಿಯೇ ಬಿಟ್ಟರು.

ರಾಬರ್ಟ್​ ಸಕ್ಸಸ್​ ಮೀಟ್​ ವೇದಿಕೆಯಲ್ಲೇ ನಿರ್ದೇಶಕ ತರುಣ್​ ಸುಧೀರ್​ ಮದುವೆ ಮಾತುಕತೆ!
ತರುಣ್​ ಸುಧೀರ್​ - ದರ್ಶನ್​
ಮದನ್​ ಕುಮಾರ್​
|

Updated on: Mar 17, 2021 | 1:40 PM

Share

ಖ್ಯಾತ ನಿರ್ದೇಶಕರ ತರುಣ್​ ಸುಧೀರ್​ ಅವರಿಗೆ ‘ರಾಬರ್ಟ್​’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಸಿಕ್ಕಿದೆ. ಸ್ಯಾಂಡಲ್​ವುಡ್​ನಲ್ಲಿ ತಾವೊಬ್ಬ ಭರವಸೆಯ ನಿರ್ದೇಶಕ ಎಂಬುದನ್ನು ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ರಾಬರ್ಟ್​ ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸೇರಿತ್ತು. ಅಲ್ಲಿಯೇ ತರುಣ್​ ಮದುವೆ ವಿಚಾರ ಪ್ರಸ್ತಾಪ ಆಗಿದೆ!

ಹೌದು, ನಿರ್ದೇಶಕ ತರುಣ್​ ಸುಧೀರ್​ ಅವರ ಮದುವೆ ಬಗ್ಗೆ ರಾಬರ್ಟ್​ ಸಕ್ಸಸ್​ ಮೀಟ್​ ವೇದಿಕೆಯಲ್ಲಿ ಚರ್ಚೆ ಆಗಿದೆ. ಅದಕ್ಕೆ ಕಾರಣ ಆಗಿದ್ದು ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಎಂಬುದು ವಿಶೇಷ. ಎಲ್ಲೆಡೆ ರಾಬರ್ಟ್​ ಸಿನಿಮಾ ಧೂಳೆಬ್ಬಿಸಿದೆ. ಬಾಕ್ಸ್​ ಆಫೀಸ್​ನಲ್ಲಿ 60 ಕೋಟಿ ರೂ.ಗಿಂತಲೂ ಹೆಚ್ಚಿನ ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ತರುಣ್​ ಸುಧೀರ್​ ಅವರು ವೇದಿಕೆ ಏರುತ್ತಿದ್ದಂತೆಯೇ ದರ್ಶನ್​ ಒಂದು ಪ್ರಶ್ನೆ ಕೇಳಿಯೇ ಬಿಟ್ಟರು. ಮದುವೆ ಯಾವಾಗ ಅಂತ ತರುಣ್​ಗೆ ಕೇಳಿ ಎಂದು ಕಾರ್ಯಕ್ರಮದ ನಿರೂಪಕಿಗೆ ದರ್ಶನ್​ ಸೂಚಿಸಿದರು.

‘ದರ್ಶನ್​ ಸರ್​ ಹೇಳುತ್ತಿದ್ದಾರೆ ಎಂದರೆ ನಾನು ಈ ಪ್ರಶ್ನೆ ಕೇಳಲೇ ಬೇಕು. ಮದುವೆ ಯಾವಾಗ ಮಾಡಿಕೊಳ್ತೀರಿ’ ಎಂದು ತರುಣ್​ಗೆ ನಿರೂಪಕಿ ಪ್ರಶ್ನೆ ಎಸೆದರು. ಕಿಂಚಿತ್ತೂ ನಿರೀಕ್ಷಿಸಿರದ ಇಂಥ ಸಂದರ್ಭದಲ್ಲಿ ತಮ್ಮ ಮದುವೆ ಬಗ್ಗೆ ಪ್ರಸ್ತಾಪ ಆಗಿದ್ದು ನೋಡಿ ತರುಣ್​ ಒಂದು ಕ್ಷಣ ನಾಚಿ ನೀರಾದರು. ‘ಸುಮ್ಮನೆ ಇರಿ ಬಾಸ್​’ ಎಂದು ಆತ್ಮೀಯತೆಯಿಂದ ದರ್ಶನ್​ರನ್ನು ಸುಮ್ಮನಿರಿಸಲು ಪ್ರಯತ್ನಿಸಿದರು. ಆದರೂ ಹಠ ಬಿಡದೆ ದರ್ಶನ್​ ಅದೇ ಪ್ರಶ್ನೆಯನ್ನು ಮತ್ತೆ ಕೇಳಿದರು. ‘ಇನ್ನೊಂದು ಸಿನಿಮಾ ಆದ ಮೇಲೆ ಬಾಸ್​’ ಎಂದು ತರುಣ್​ ನಾಚುತ್ತಲೇ ಉತ್ತರ ನೀಡಿದರು.

‘ಈ ಸಿನಿಮಾ ಇಷ್ಟು ದೊಡ್ಡ ಯಶಸ್ಸು ಆಗಲು ನನ್ನ ಹಿಂದೆ ದೊಡ್ಡದೊಂದು ಟೀಮ್​ ಕೆಲಸ ಮಾಡಿದೆ. ಅವರನ್ನು ಬೇರೆ ಯಾವುದೇ ವೇದಿಕೆಯಲ್ಲೂ ಕರೆಸಿಕೊಳ್ಳಲು ಆಗಿರಲಿಲ್ಲ. ಆದರೆ ಈ ವೇದಿಕೆಗೆ ಅವರನ್ನು ಕರೆಯುತ್ತೇನೆ. 108 ದಿನಗಳ ಸವಾಲಿನ ಚಿತ್ರೀಕರಣಕ್ಕೆ ಈ ಟೀಮ್​ ಸಾಥ್​ ನೀಡಿತು. ನಮ್ಮೆಲ್ಲರಿಗೂ ದರ್ಶನ್​ ಸರ್​ ಸ್ಫೂರ್ತಿ ಆಗಿದ್ದರು. ನಾವೆಲ್ಲರೂ ದರ್ಶನ್​ ಅಭಿಮಾನಿಗಳು’ ಎಂದು ತಮ್ಮ ಡೈರೆಕ್ಷನ್​ ಟೀಮ್ ಪರಿಚಯಿಸಿದರು ತರುಣ್​ ಸುಧೀರ್.

ಇದನ್ನೂ ಓದಿ: ಎಲ್ಲಾ ಪಾತ್ರಗಳನ್ನೂ ನಾನೇ ಮಾಡೋಕಾಗಲ್ಲ; ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹೀಗೆ ಅಂದಿದ್ಯಾಕೆ?

ಸಿಕ್ಕಿಬಿದ್ದ ‘ರಾಬರ್ಟ್​’ ಪೈರಸಿ ಮಾಡುತ್ತಿದ್ದ ವ್ಯಕ್ತಿ! ‘ದುಡ್ಡು ಕೊಟ್ಟರೆ ಹೊಸ ಕಾಪಿ ಶೇರ್ ಮಾಡ್ತೀನಿ’ ಎನ್ನುತ್ತಿದ್ದ ಆರೋಪಿ!

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More