Feel the Power Promo: ಡ್ಯಾನ್ಸ್​ನಲ್ಲಿ ಪುನೀತ್​ಗೆ ಯಾರು ಸಾಟಿ? ಪ್ರೋಮೋ ಹಾಡಿನಲ್ಲೇ ಪವರ್​ ತೋರಿಸಿದ ಪವರ್​ ಸ್ಟಾರ್​!

Yuvarathnaa Video Song Promo: ಇಂದು (ಮಾ.17) ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನ. ಕೊರೊನಾ ಕಾರಣದಿಂದ ಅಪ್ಪು ಮನೆ ಎದುರು ಸಡಗರ ಇಲ್ಲದಿದ್ದರೂ ಆನ್​ಲೈನ್​ನಲ್ಲಿ ಸಂಭ್ರಮಾಚರಣೆ ಮಾಡಲು ಹಲವು ಕಾರಣಗಳು ಸಿಕ್ಕಿವೆ.

Feel the Power Promo: ಡ್ಯಾನ್ಸ್​ನಲ್ಲಿ ಪುನೀತ್​ಗೆ ಯಾರು ಸಾಟಿ? ಪ್ರೋಮೋ ಹಾಡಿನಲ್ಲೇ ಪವರ್​ ತೋರಿಸಿದ ಪವರ್​ ಸ್ಟಾರ್​!
ಪುನೀತ್​ ರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on: Mar 17, 2021 | 11:42 AM

ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಮಾ.17 ಎಂದರೆ ನಿಜಕ್ಕೂ ಹಬ್ಬ. ತಮ್ಮ ನೆಚ್ಚಿನ ನಟನ ಜನ್ಮದಿನಕ್ಕೆ ಸೋಶಿಯಲ್​ ಮೀಡಿಯಾ ಮೂಲಕ ಫ್ಯಾನ್ಸ್​ ಶುಭಕೋರುತ್ತಿದ್ದಾರೆ. ಅಪ್ಪು ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಹೊಸ ಹೊಸ ಕಾರಣಗಳು ಸಿಕ್ಕಿವೆ. ಹೊಸ ಸಿನಿಮಾಗಳು ಅನೌನ್ಸ್​ ಆಗಿವೆ. ಪೋಸ್ಟರ್​ಗಳು ಬಿಡುಗಡೆ ಆಗಿವೆ. ಅದರ ಜೊತೆ ‘ಯುವರತ್ನ’ ಸಿನಿಮಾದಿಂದ ‘ಫೀಲ್​ ದ ಪವರ್​’ ಪ್ರೋಮೋ ಸಾಂಗ್​ ಹೊರಬಂದಿದೆ.

‘ಯುವರತ್ನ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಎಲ್ಲಿಲ್ಲದ ನಿರೀಕ್ಷೆ ಇದೆ. ಹಾಗಾಗಿ ಈ ಚಿತ್ರತಂಡದಿಂದ ಬರುವ ಎಲ್ಲ ಅಪ್​ಡೇಟ್​ಗಳಿಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ಕಾದಿರುತ್ತಾರೆ. ಇಂದು ಪುನೀತ್​ ಬರ್ತ್​ಡೇ ಸಲುವಾಗಿ ‘ಫೀಲ್​ ದ ಪವರ್​’ ಪ್ರೋಮೋ ಹಾಡು ಬಿಡುಗಡೆ ಆಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಇದು​ ರಿಲೀಸ್​ ಆಗಿದ್ದು, ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇದು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಯೂಟ್ಯೂಬ್​ನಲ್ಲಿ ನಾಗಾಲೋಟ ಮುಂದುವರಿಸಿದೆ.

ಪುನೀತ್​ ಎಂದರೆ ಡಾನ್ಸ್​ಗೆ ಫೇಮಸ್​. ಈಗಾಗಲೇ ಅದು ಸಾಬೀತಾಗಿದೆ ಕೂಡ. ಡ್ಯಾನ್ಸ್​ನಲ್ಲಿ ಅವರಿಗೆ ಯಾರೂ ಸಾಟಿ ಇಲ್ಲ ಎಂಬುದಕ್ಕೆ ‘ಫೀಲ್​ ದ ಪವರ್​’ ಹಾಡು ಕೂಡ ಸಾಕ್ಷಿಯಾಗಿದೆ. ಪ್ರೇಕ್ಷಕರು ನಿಬ್ಬೆರಗಾಗಿ ನೋಡುವಂತಹ ರೀತಿಯಲ್ಲಿ ಪುನೀತ್​ ಸ್ಟೆಪ್ಸ್​ ಹಾಕಿದ್ದಾರೆ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಇದು ಪರ್ಫೆಕ್ಟ್​ ಗಿಫ್ಟ್​ ಎಂದು ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ. ಈ ಹಾಡಿನಿಂದಾಗಿ ‘ಯುವರತ್ನ’ ಸಿನಿಮಾ ಮೇಲಿನ ಕ್ರೇಜ್​ ಇನ್ನಷ್ಟು ಹೆಚ್ಚಾಗಿದೆ.

ಸಂತೋಷ್​ ಆನಂದ್​ರಾಮ್​ ನಿರ್ದೇಶನದ ‘ಯುವರತ್ನ’ ಸಿನಿಮಾದಲ್ಲಿ ಪುನೀತ್​ಗೆ ಜೋಡಿಯಾಗಿ ಸಾಯೇಶಾ ನಟಿಸಿದ್ದಾರೆ. ಕನ್ನಡದ ಜೊತೆ ತೆಲುಗಿನಲ್ಲಿಯೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಸದ್ಯ ಧೂಳೆಬ್ಬಿಸುತ್ತಿರುವ ‘ಫೀಲ್​ ದ ಪವರ್​’ ಪ್ರೋಮೋ ಸಾಂಗ್​ಗೆ ಎಸ್​. ಥಮನ್​ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್​ ಆನಂದ್​ ರಾಮ್​ ಸಾಹಿತ್ಯ ಬರೆದಿದ್ದಾರೆ. ಜಾನಿ ಮಾಸ್ಟರ್​ ನೃತ್ಯ ನಿರ್ದೇಶನ ಮಾಡಿದ್ದಾರೆ. ಶಶಾಂಕ್​ ಶೇಷಗಿರಿ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ. ಮಾ.20ರಂದು ಚಿತ್ರದ ಟ್ರೇಲರ್​ ರಿಲೀಸ್​ ಆಗಲಿದ್ದು, ಅದಕ್ಕಾಗಿಯೂ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಫೀಲ್​ ದ ಪವರ್ ಕನ್ನಡ ಸಾಂಗ್​

ಫೀಲ್​ ದ ಪವರ್ ತೆಲುಗು ಸಾಂಗ್​

ಈ ಸಿನಿಮಾದಲ್ಲಿ ಖ್ಯಾತ ಕಲಾವಿದರ ದಂಡೇ ಇದೆ. ಪೋಷಕ ಪಾತ್ರಗಳಲ್ಲಿ ಪ್ರಕಾಶ್​ ರಾಜ್​, ದಿಗಂತ್​, ಸೋನೂ ಗೌಡ, ಡಾಲಿ ಧನಂಜಯ, ರಾಧಿಕಾ ಶರತ್​ ಕುಮಾರ್, ತ್ರಿವೇಣಿ ರಾವ್​ ಮುಂತಾದವರು ನಟಿಸಿದ್ದಾರೆ. ಸ್ಪೆಷಲ್​ ಹಾಡಿನಲ್ಲಿ ಕಾವ್ಯಾ ಶೆಟ್ಟಿ ಹೆಜ್ಜೆ ಹಾಕಿದ್ದಾರೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ