ರಾಬರ್ಟ್ ವಿಜಯ ಯಾತ್ರೆ ವಿಚಾರದಲ್ಲಿ ಅಭಿಮಾನಿಗಳಿಗೆ ನಿರಾಸೆ; ದರ್ಶನ್ ಈ ನಿರ್ಧಾರ ಫ್ಯಾನ್ಸ್ ಒಳಿತಿಗಾಗಿ
ರಾಬರ್ಟ್ ಸಿನಿಮಾ ಗೆದ್ದರೆ ರಾಜ್ಯಾದ್ಯಂತ ಸಂಚರಿಸಿ ವಿಜಯ ಯಾತ್ರೆ ಮಾಡಬೇಕು ಎಂಬ ಆಲೋಚನೆ ಚಿತ್ರತಂಡಕ್ಕಿತ್ತು. ಮಾ.29ರಿಂದ ದರ್ಶನ್ ರಾಜ್ಯ ಸಂಚಾರ ಶುರು ಮಾಡುವುದಾಗಿ ಹೇಳಿದ್ದರು.
ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. ಬಾಕ್ಸ್ ಆಫೀಸ್ನಲ್ಲೂ ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ದರ್ಶನ್ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್ ನೀಡಿದೆ. ಇದೇ ಖುಷಿಗೆ ಅಭಿಮಾನಿಗಳಿಗೆ ಧನ್ಯವಾದ ಹೇಳಲು ದರ್ಶನ್ ಸಜ್ಜಾಗಿದ್ದರು. ಆದರೆ, ಈಗ ಕೊರೊನಾ ವೈರಸ್ ಹೆಚ್ಚುತ್ತಿರುವುದರಿಂದ ಚಿತ್ರತಂಡ ವಿಜಯ ಯಾತ್ರೆಯನ್ನು ರದ್ದು ಮಾಡಿದೆ. ರಾಬರ್ಟ್ ಸಿನಿಮಾ ಗೆದ್ದರೆ ರಾಜ್ಯಾದ್ಯಂತ ಸಂಚರಿಸಿ ವಿಜಯ ಯಾತ್ರೆ ಮಾಡಬೇಕು ಎಂಬ ಆಲೋಚನೆ ಚಿತ್ರತಂಡಕ್ಕಿತ್ತು. ಮಾ.29ರಿಂದ ದರ್ಶನ್ ರಾಜ್ಯ ಸಂಚಾರ ಶುರು ಮಾಡುವುದಾಗಿ ಹೇಳಿದ್ದರು. ಮಾ.29ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆಗೆ, ಮಾ.30ರಂದು ಧಾರವಾಡ, ಹುಬ್ಬಳ್ಳಿ, ಹಾವೇರಿಗೆ ಮಾ.31ರಂದು ತಿಪಟೂರು, ಹಾಸನ ಹಾಗೂ ಶಿವಮೊಗ್ಗ, ಏ.1ರಂದು ಗಂಡ್ಲುಪೇಟೆ, ಮಂಡ್ಯ, ಮೈಸೂರು ಹಾಗೂ ಮದ್ದೂರಿಗೆ ಡಿ ಬಾಸ್ ಭೇಟಿ ನೀಡಬೇಕಿತ್ತು.
#Roberrt ಚಿತ್ರಕ್ಕೆ ನೀವು ತೋರಿದ ಪ್ರೀತಿಗೆ , ಕೃತಜ್ಞತೆ ಹೇಳಲು ನಿಮ್ಮ್ ಊರಿಗೆ #DBoss ಹಾಗೂ #ರಾಬರ್ಟ್ ಚಿತ್ರತಂಡ ಬರುತಿದೆ. #Roberrt team will visit your city to salute u all for the love and support u showerd on us. More details tomorrow.#RoberrtVijayaYatre@umap30071 @PrabhakarVinnod pic.twitter.com/r5W7b2VWE6
— Tharun Sudhir (@TharunSudhir) March 23, 2021
ಆದರೆ, ವಿಜಯ ಯಾತ್ರೆ ರದ್ದಾಗಿರುವ ಬಗ್ಗೆ ದರ್ಶನ್ ಟ್ವೀಟ್ ಮಾಡಿದ್ದಾರೆ. ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದಗಳು ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.
ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದಗಳು ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ pic.twitter.com/u44VL8eXAk
— Darshan Thoogudeepa (@dasadarshan) March 27, 2021
ನಿಮ್ಮ ಆರೋಗ್ಯವೇ ನಮ್ಮ ಹಾಗೂ ಸರ್ಕಾರದ ಮೊದಲ ಆಧ್ಯತೆ. ದಯಮಾಡಿ ಮಾಸ್ಕ್ ಧರಿಸಿ ನಿಮ್ಮ ಜಾಗೃಕತೆಯಲ್ಲಿರಿ. ಈಗಿನ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಾವು ಖಂಡಿತ ನಿಮ್ಮ ಊರಿಗೆ ಆಗಮಿಸುತ್ತೇವೆ. ನಿಮ್ಮ ಪ್ರೀತಿ-ವಿಶ್ವಾಸ ಸದಾ ಹೀಗೆ ಇರಲಿ ಎಂದು ಅವರು