AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್​; ಸಿನಿಮಾ ಯಾವುದು?

ವಿಸ್ಮಯಾ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಡಿಯರ್​ ಕಣ್ಮಣಿ ಚಿತ್ರಕ್ಕೆ ಭವ್ಯಾ ಗೌಡ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ಈ ಮೊದಲು ನಟಿ ಸಾತ್ವಿಕಾ ಚಿತ್ರ ತಂಡ ಸೇರಿಕೊಂಡಿದ್ದರು.

ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್​; ಸಿನಿಮಾ ಯಾವುದು?
ಭವ್ಯಾ ಗೌಡ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on:Mar 29, 2021 | 2:24 PM

Share

ಹೀರೋಯಿನ್​ಗಳಿಗೆ ಕಿರುತೆರೆಯಲ್ಲಿ ನಟಿಸುತ್ತಿರುವಾಗ ಬೆಳ್ಳಿ ಪರದೆಯಲ್ಲಿ ನಟಿಸೋಕೆ ಆಫರ್​ ಬರೋದು ಕಾಮನ್. ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದ ಅನೇಕ ಕಲಾವಿದರಿದ್ದಾರೆ. ಈಗ ಈ ಸಾಲಿಗೆ ಗೀತಾ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಭವ್ಯ ಗೌಡ ಕೂಡ ಸೇರ್ಪಡೆ ಆಗಿದ್ದಾರೆ. ಅವರು, ಈಗ ಸ್ಯಾಂಡಲ್​ವುಡ್​ಗೆ ಕಾಲಿಡೋಕೆ ಸಜ್ಜಾಗಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ವಿಸ್ಮಯಾ ಗೌಡ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಡಿಯರ್​ ಕಣ್ಮಣಿ ಚಿತ್ರಕ್ಕೆ ಭವ್ಯಾ ಗೌಡ ನಾಯಕಿಯಾಗಿ ಎಂಟ್ರಿಕೊಟ್ಟಿದ್ದಾರೆ. ಈ ಮೊದಲು ನಟಿ ಸಾತ್ವಿಕ ಚಿತ್ರ ತಂಡ ಸೇರಿಕೊಂಡಿದ್ದರು. ಈಗ ಚಿತ್ರಕ್ಕೆ ಹೊಸ ಎಂಟ್ರಿಯಾಗಿ ಭವ್ಯಾ ಗೌಡ ಸೇರಿಕೊಂಡಿದ್ದಾರೆ.

ಡಿಯರ್​ ಕಣ್ಮಣಿಗೆ ಕಿಶನ್​ ಬಿಳಗಲಿ ಮತ್ತು ಪ್ರವೀಣ್ ಹೀರೋ. ಹಾಗಾಗಿ ಈ ಸಿನಿಮಾದಲ್ಲಿ ಇಬ್ಬರು ಹೀರೋಯಿನ್​ ಇದ್ದಾರೆ. ಸಾತ್ವಿಕಾ ಮತ್ತು ಭವ್ಯಾ ಗೌಡ ಅವರನ್ನು ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ. ಆದರೆ ಯಾರು ಯಾರಿಗೆ ಜೋಡಿಯಾಗಲಿದ್ದಾರೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.

ಗೀತಾ ಧಾರಾವಾಹಿಯಲ್ಲಿ ಭವ್ಯಾ ಗೌಡ ಪಾತ್ರ ಭಿನ್ನವಾಗಿತ್ತು. ಕಾಲೇಜು ಹುಡುಗಿಯಾಗಿ ಅವರು ನಟಿಸುತ್ತಿದ್ದಾರೆ. ಆದರೆ, ಈ ಪಾತ್ರಕ್ಕಿಂತ ಡಿಯರ್​ ಕಣ್ಮಣಿ ಸಿನಿಮಾದ ಪಾತ್ರ ಭಿನ್ನವಾಗಿರಲಿದೆಯಂತೆ. ಈ ಮೊದಲಿನಿಂದಲೂ ಅವರು ಸಿನಿಮಾ ಆಫರ್​ಗಾಗಿ ಕಾದಿದ್ದರು. ಒಂದೊಳ್ಳೆಯ ಕಥೆ ಸಿಕ್ಕರೆ ನಟಿಸುವ ಆಲೋಚನೆ ಅವರದ್ದಾಗಿತ್ತು. ಈಗ ಕೊನೆಗೂ ಅವರಿಗೆ ಬೆಳ್ಳಿ ತೆರೆ ಆಫರ್​ ಸಿಕ್ಕಂತಾಗಿದೆ.

ಈ ಸಿನಿಮಾಗೆ ಇತ್ತೀಚೆಗಷ್ಟೇ ಕಿಚ್ಚ ಸುದೀಪ್​ ಚಾಲನೆ ನೀಡಿದ್ದರು. ಹೀಗಾಗಿ, ಸಿನಿಮಾಗೆ ಆರಂಭದಲ್ಲೇ ಜನಪ್ರಿಯತೆ ಸಿಕ್ಕಿತ್ತು. ಈಗ ಚಿತ್ರಕ್ಕೆ ಭವ್ಯಾ ಗೌಡ ಕೂಡ ಸೇರ್ಪಡೆಯಾಗಿರುವುದು ಪಾತ್ರವರ್ಗ ಹಿರಿದಾದಂತಾಗಿದೆ. ಗೀತಾ ಧಾರಾವಾಹಿ ಮೂಲಕ ಭವ್ಯಾ ಮನೆ ಮಾತಾಗಿದ್ದಾರೆ. ಈಗ ಅವರು ಬೆಳ್ಳಿ ಪರದೆಗೆ ಕಾಲಿಡುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಖುಷಿಯಾಗಿದ್ದಾರಂತೆ.

ಇದನ್ನೂ ಓದಿ: ಬೇಸಿಗೆಯಲ್ಲೂ ಯಶ್​ ಪುತ್ರಿ ಎಷ್ಟೊಂದು ಕೂಲ್​! ಮುದ್ದು ಗೊಂಬೆ ಆಯ್ರಾ ಲುಕ್​ಗೆ ಮನಸೋಲದವರಿಲ್ಲ

Published On - 4:03 pm, Sat, 27 March 21

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ