ಬೇಸಿಗೆಯಲ್ಲೂ ಯಶ್​ ಪುತ್ರಿ ಎಷ್ಟೊಂದು ಕೂಲ್​! ಮುದ್ದು ಗೊಂಬೆ ಆಯ್ರಾ ಲುಕ್​ಗೆ ಮನಸೋಲದವರಿಲ್ಲ

ಬೇಸಿಗೆಯಲ್ಲೂ ಯಶ್​ ಪುತ್ರಿ ಎಷ್ಟೊಂದು ಕೂಲ್​! ಮುದ್ದು ಗೊಂಬೆ ಆಯ್ರಾ ಲುಕ್​ಗೆ ಮನಸೋಲದವರಿಲ್ಲ
ಆಯ್ರಾ- ಯಥರ್ವ್​

Radhika Pandit: ಕೂಲಿಂಗ್​ ಗ್ಲಾಸ್​ ಧರಿಸಿ ಆಯ್ರಾ ಕೂಲ್​ ಆಗಿ ಕಾಣುತ್ತಿದ್ದಾಳೆ. ಮುದ್ದಾಗಿ ಪೋಸ್​ ನೀಡುತ್ತ ಎಲ್ಲರನ್ನೂ ಸೆಳೆದುಕೊಳ್ಳುತ್ತಿದ್ದಾಳೆ. ಈ ಫೋಟೋ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.

Madan Kumar

| Edited By: Praveen Sahu

Mar 26, 2021 | 5:34 PM

ಬಾಲಿವುಡ್​ನಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲಿಯೂ ಕೂಡ ಸ್ಟಾರ್​ ಕಿಡ್​ಗಳು ಮಿಂಚುತ್ತಿದ್ದಾರೆ. ಸ್ಯಾಂಡಲ್​ವುಡ್​ನ ಸ್ಟಾರ್​ ದಂಪತಿ ಯಶ್​ ಮತ್ತು ರಾಧಿಕಾ ಪಂಡಿತ್​ ಮಕ್ಕಳಂತೂ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್​. ಅವರ ಫೋಟೋಗಳನ್ನು ಕಂಡರೆ ಅಭಿಮಾನಿಗಳಿಗೆ ಸಖತ್​ ಅಚ್ಚುಮೆಚ್ಚು. ಹಾಗಾಗಿ ರಾಧಿಕಾ ಅವರು ತಮ್ಮ ಮಕ್ಕಳ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

ಇತ್ತೀಚೆಗೆ ಆಯ್ರಾ ಫೋಟೋವನ್ನು ರಾಧಿಕಾ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಂಚಿಕೊಂಡಿರುವುದು ಸಖತ್​ ಕ್ಯೂಟ್​ ಆಗಿದೆ. ಈಗಂತೂ ಬೇಸಿಗೆ ಕಾಲ. ಅದಕ್ಕೆ ತಕ್ಕಂತೆಯೇ ಡ್ರೆಸ್​ ಮಾಡಿಕೊಂಡಿರುವ ಆಯ್ರಾ, ಕೂಲಿಂಗ್​ ಗ್ಲಾಸ್​ ಧರಿಸಿ ಕೂಲ್​ ಆಗಿ ಕಾಣುತ್ತಿದ್ದಾಳೆ. ಮುದ್ದಾಗಿ ಪೋಸ್​ ನೀಡುತ್ತ ಎಲ್ಲರನ್ನೂ ಸೆಳೆದುಕೊಳ್ಳುತ್ತಿದ್ದಾಳೆ. ಈ ಫೋಟೋ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಯಶ್​ ಮತ್ತು ರಾಧಿಕಾ ಪಂಡಿತ್ ಅವರ ಸೋಶಿಯಲ್​ ಮೀಡಿಯಾದಲ್ಲಿ ಆಯ್ರಾ ಮತ್ತು ಯಥರ್ವ್ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್​ ಸಿಗುತ್ತವೆ.

ಮದುವೆ ಬಳಿಕ ರಾಧಿಕಾ ಪಂಡಿತ್​ ಅವರು ಸಿನಿಮಾಗಳಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಮಕ್ಕಳ ಪಾಲನೆಗೆ ಅವರು ಹೆಚ್ಚಿನ ಸಮಯ ಮೀಸಲಿಟ್ಟಿದ್ದಾರೆ. ಅವರು ಮತ್ತೆ ಚಿತ್ರರಂಗಕ್ಕೆ ಮರಳಬೇಕು ಎಂದು ಅಭಿಮಾನಿಗಳು ಆಗಾಗ ಬೇಡಿಕೆ ಇಡುತ್ತಲೇ ಇರುತ್ತಾರೆ. ಸೂಕ್ತ ಕಥೆ ಮತ್ತು ಪಾತ್ರಕ್ಕಾಗಿ ರಾಧಿಕಾ ಪಂಡಿತ್​ ಕಾಯುತ್ತಿರುವಂತಿದೆ….

ಇನ್ನು, ಯಶ್ ಕೂಡ ಫ್ಯಾಮಿಲಿಗಾಗಿ ಹೆಚ್ಚು ಸಮಯ ಮೀಸಲಿಡುತ್ತಾರೆ. ಸದ್ಯ ಅವರು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಡಬ್ಬಿಂಗ್​ ಆರಂಭಿಸಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ನಿರ್ದೇಶಕ ಪ್ರಶಾಂತ್​ ನೀಲ್​ ಹಂಚಿಕೊಂಡಿದ್ದರು. ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಮಕ್ಕಳ ಜೊತೆ ಕಾಲ ಕಳೆಯಲು ಯಶ್​ ಸಮಯ ಹೊಂದಿಸಿಕೊಳ್ಳುತ್ತಾರೆ…

ಕೆಲವೇ ದಿನಗಳ ಹಿಂದೆ ಪುತ್ರ ಯಥರ್ವ್​ ಜೊತೆ ಇರುವ ವಿಡಿಯೋವನ್ನು ಯಶ್​ ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ ಏರೋಪ್ಲೇನ್​ ಎನ್ನುವ ಬದಲು ಯಥರ್ವ್​ ಮುದ್ದಾಗಿ ‘ಅಪಾಪೀನ್​’ ಎಂದಿರುವುದು ಹೈಲೈಟ್​ ಆಗಿತ್ತು. ಇನ್​ಸ್ಟಾಗ್ರಾಮ್​ನಲ್ಲಿ ಆ ವಿಡಿಯೋಗೆ ಮಿಲಿನಯ್​ಗಟ್ಟಲೆ ವೀವ್ಸ್​ ಸಿಕ್ಕಿತ್ತು. ಈ ಹಿಂದೆ ಯಥರ್ವ್​ಗೆ ಆಯ್ರಾ ಲಾಲಿ ಹಾಡುತ್ತಿರುವ ವಿಡಿಯೋ ಕೂಡ ತುಂಬ ವೈರಲ್​ ಆಗಿತ್ತು.

ಇದನ್ನೂ ಓದಿ: KGF Chapter 2 ಚಿತ್ರದ ಅಪ್​ಡೇಟ್​ಗಾಗಿ ಕಾದಿದ್ದ ಎಲ್ಲರಿಗೂ ಗುಡ್​-ನ್ಯೂಸ್ ನೀಡಿದ ಯಶ್​-ಪ್ರಶಾಂತ್​ ನೀಲ್​!

ಆಯ್ರಾ ಜನ್ಮದಿನಕ್ಕೆ ವಿಶೇಷ ಕಿವಿಮಾತು ಹೇಳಿದ ನಟಿ ರಾಧಿಕಾ ಪಂಡಿತ್

Follow us on

Related Stories

Most Read Stories

Click on your DTH Provider to Add TV9 Kannada