AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯ್ರಾ ಜನ್ಮದಿನಕ್ಕೆ ವಿಶೇಷ ಕಿವಿಮಾತು ಹೇಳಿದ ನಟಿ ರಾಧಿಕಾ ಪಂಡಿತ್

ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ದಂಪತಿ ಪುತ್ರಿ ಆಯ್ರಾಗೆ ಇಂದು ಎರಡನೇ ವರ್ಷದ ಜನ್ಮದಿನದ ಸಂಭ್ರಮ. ರಾಧಿಕಾ ಪಂಡಿತ್​ ಮಗಳಿಗೆ ಜನ್ಮದಿನದ ಶುಭಾಶಯ ಕೋರುವುದರ ಜೊತೆಗೆ ಕಿವಿಮಾತೊಂದನ್ನು ಹೇಳಿದ್ದಾರೆ.

ಆಯ್ರಾ ಜನ್ಮದಿನಕ್ಕೆ ವಿಶೇಷ ಕಿವಿಮಾತು ಹೇಳಿದ ನಟಿ ರಾಧಿಕಾ ಪಂಡಿತ್
ಆಯ್ರಾ
shruti hegde
|

Updated on:Dec 02, 2020 | 11:50 AM

Share

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ದಂಪತಿ ಪುತ್ರಿ ಆಯ್ರಾಗೆ ಇಂದು ಎರಡನೇ ವರ್ಷದ ಜನ್ಮದಿನದ ಸಂಭ್ರಮ. ಈ ವಿಶೇಷ ದಿನದಂದು ರಾಧಿಕಾ ಪಂಡಿತ್​ ಮಗಳಿಗೆ ಜನ್ಮದಿನದ ಶುಭಾಶಯ ಕೋರುವುದರ ಜೊತೆಗೆ ಕಿವಿಮಾತೊಂದನ್ನು ಹೇಳಿದ್ದಾರೆ.

ಕಳೆದ ವರ್ಷ ಆಯ್ರಾ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದ ದಂಪತಿ, ಕೊರೋನಾ ಇರುವ ಕಾರಣ ಈ ಬಾರಿ ಮನೆಯಲ್ಲೇ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಜನ್ಮದಿನಕ್ಕೆ ವಿಶೇಷ ವಿಶ್​ ಕೂಡ ಮಾಡಿದ್ದಾರೆ ರಾಧಿಕಾ ಪಂಡಿತ್​.

2018 ರ ಡಿಸೆಂಬರ್ 2ರಂದು ಆಯ್ರಾ ಜನಿಸಿದ್ದಳು. ಮಗಳು ಹುಟ್ಟಿದ ನಂತರದಲ್ಲಿ ಯಶ್​ ದಂಪತಿ ಹೆಚ್ಚು ಸಂಭ್ರಮಿಸಿದ್ದರು. ಅಭಿಮಾನಿಗಳು ಕೂಡ ಯಶ್​ಗೆ ಮಗಳು ಹುಟ್ಟಿದ್ದ ವಿಚಾರ ಕೇಳಿ ಖುಷಿಯಾಗಿದ್ದರು. ಯಶ್​ ಮಗಳಿಗೆ ಏನು ಹೆಸರಿಡುತ್ತಾರೆ ಎನ್ನುವ ವಿಚಾರ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸ್ಟಾರ್​ ದಂಪತಿಗೆ ಮಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕೆ ರಾಧಿಕಾ ವಿಶೇಷವಾಗಿ ಹಾರೈಸಿದ್ದಾರೆ.

ನೀನು ನಮ್ಮ ಜೀವನದಲ್ಲಿ ಸಂತೋಷ ನೀಡಿದ್ದೀಯಾ ನಮ್ಮ ಪುಟಾಣಿ ಏಂಜಲ್​ಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ರಾಧಿಕಾ ಪಂಡಿತ್​ ಇನ್ಸ್​ಟಾಗ್ರಾಂನಲ್ಲಿ ವಿಶ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಬೇಗ ಬೆಳೆಯ ಬೇಡ, ಸಣ್ಣವಳಾಗಿಯೇ ಇರು ಎನ್ನುವ ಕಿವಿಮಾತು ಕೂಡ ಹೇಳಿದ್ದಾರೆ.

ಇನ್ನು ಯಶ್​ ಕೂಡ ಆಯ್ರಾ ಜನ್ಮದಿಕ್ಕೆ ಶುಭಾಶಯ ಕೋರಿ ವಿಡಿಯೋ ಒಂದನ್ನು ಹಾಕಿದ್ದಾರೆ.

View this post on Instagram

A post shared by Yash (@thenameisyash)

Published On - 11:09 am, Wed, 2 December 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ