AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಬರ್ಟ್​’ ಸೂಪರ್​ ಹಿಟ್​ ಆದಮೇಲೂ ಚಿತ್ರತಂಡದಿಂದ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​! ಏನದು?

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ವೃತ್ತಿಜೀವನಕ್ಕೆ ‘ರಾಬರ್ಟ್​’ ಸಿನಿಮಾ ದೊಡ್ಡ ಮೈಲೇಜ್​ ನೀಡಿದೆ. 10 ದಿನಗಳ ಬಳಿಕವೂ ಪ್ರೇಕ್ಷಕರು ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಈಗ ಇನ್ನೊಂದು ಗುಡ್​ ನ್ಯೂಸ್​ ಕೂಡ ಸಿಕ್ಕಿದೆ.

‘ರಾಬರ್ಟ್​’ ಸೂಪರ್​ ಹಿಟ್​ ಆದಮೇಲೂ ಚಿತ್ರತಂಡದಿಂದ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​! ಏನದು?
ರಾಬರ್ಟ್ ಸಿನಿಮಾದಲ್ಲಿ ದರ್ಶನ್​
ಮದನ್​ ಕುಮಾರ್​
| Edited By: |

Updated on: Mar 22, 2021 | 9:28 AM

Share

ಕೊರೊನಾ ಕಾರಣದಿಂದ ಸೈಲೆಂಟ್​ ಆಗಿದ್ದ ಕನ್ನಡ ಚಿತ್ರರಂಗಕ್ಕೆ ರಾಬರ್ಟ್​ ಸಿನಿಮಾ ಹೊಸ ಚೈತನ್ಯ ನೀಡಿದೆ. ರಾಜ್ಯಾದ್ಯಂತ ಹೌಸ್​ಫುಲ್​ ಪ್ರದರ್ಶನಗಳು ನಡೆದು ನಿರ್ಮಾಪಕರ ಮೊಗದಲ್ಲಿ ನಗು ಅರಳಿಸಿದೆ. ಮೊದಲ ವಾರ 78.36 ಕೋಟಿ ರೂ. ಗಳಿಸಿದ ಈ ಸಿನಿಮಾ ದರ್ಶನ್​ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ನೀಡಿದೆ. ಪ್ರೇಕ್ಷಕರು ಇನ್ನೂ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಈಗ ಅಭಿಮಾನಿಗಳಿಗೆ ಇನ್ನೊಂದು ಗುಡ್​ ನ್ಯೂಸ್​ ಕೂಡ ಸಿಕ್ಕಿದೆ.

ರಾಬರ್ಟ್​ ರಿಲೀಸ್​ಗೂ ಮುನ್ನ ಹಾಡುಗಳು ಸಿಕ್ಕಾಪಟ್ಟೆ ಸೌಂಡು ಮಾಡಿದ್ದವು. ಅದರಲ್ಲೂ ‘ಜೈ ಶ್ರೀರಾಮ್​..’ ಹಾಡು ಹೆಚ್ಚು ಜನರನ್ನು ಸೆಳೆದುಕೊಂಡಿತ್ತು. 2020ರ ಏಪ್ರಿಲ್​ 2ರಂದು ಇದರ ಲಿರಿಕಲ್​ ವಿಡಿಯೋ ಬಿಡುಗಡೆ ಆಗಿತ್ತು. ಈಗವರೆಗೂ ಅದು 13 ಮಿಲಿಯನ್​ ಬಾರಿ ವೀಕ್ಷಣೆ ಕಂಡಿದೆ. ಅಲ್ಲದೆ, ಚಿತ್ರಮಂದಿರದಲ್ಲಿಯೂ ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ಈಗ ಅದರ ವಿಡಿಯೋ ಸಾಂಗ್​ ಲಭ್ಯ ಆಗುತ್ತಿದೆ.

ಮಾ.22ರಂದು ಸಂಜೆ 4.05ಕ್ಕೆ ಆನಂದ್​ ಆಡಿಯೋ ಯೂಟ್ಯೂಬ್​ ಚಾನಲ್​ ಮೂಲಕ ‘ಜೈ ಶ್ರೀರಾಮ್​…’ ವಿಡಿಯೋ ಸಾಂಗ್​ ಬಿಡುಗಡೆ ಆಗುತ್ತಿದೆ. ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಶಂಕರ್​ ಮಹದೇವನ್​ ಧ್ವನಿ ನೀಡಿದ್ದಾರೆ. ನಾಗೇಂದ್ರ ಪ್ರಸಾದ್​ ಸಾಹಿತ್ಯ ಬರೆದಿದ್ದಾರೆ. ಬೃಹತ್​ ಸೆಟ್​ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ಆಂಜನೇಯನ ಗೆಟಪ್​ನಲ್ಲಿ ದರ್ಶನ್​ ಕಾಣಿಸಿಕೊಂಡಿದ್ದಾರೆ. ರಾಮನಾಗಿ ಬಾಲನಟ ಜೇಸನ್​ ಡಿಸೋಜಾ ಮೋಡಿ ಮಾಡಿದ್ದಾರೆ. ‘ರಾಬರ್ಟ್​’ ಗೆಲುವಿನಲ್ಲಿ ‘ಜೈ ಶ್ರೀರಾಮ್​..’ ಹಾಡಿನ ಕೊಡುಗೆ ಕೂಡ ದೊಡ್ಡದಿದೆ.

8 ದಿನಗಳಲ್ಲಿ ಈ ಚಿತ್ರ ಬರೋಬ್ಬರಿ 78.36 ಕೋಟಿ ರೂ. ಗಳಿಸಿದೆ. ತರುಣ್​ ಸುಧೀರ್​ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನವೇ 17.24 ಕೋಟಿ ರೂ. ಬಾಚಿಕೊಂಡಿತು. ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ರೂ. ಹರಿದುಬಂತು. ಒಂದು ವಾರದ ಬಳಿಕವೂ ರಾಬರ್ಟ್​ ನಾಗಾಲೋಟ ಮುಂದುವರೆದಿದೆ. ಫ್ಯಾಮಿಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವುದು ರಾಬರ್ಟ್​ ತಂಡಕ್ಕೆ ಪ್ಲಸ್​ ಪಾಯಿಂಟ್ ಆಗಿದೆ.

ಇದನ್ನೂ ಓದಿ: ರಾಬರ್ಟ್​ ಸಕ್ಸಸ್​ ಮೀಟ್​ ವೇದಿಕೆಯಲ್ಲೇ ನಿರ್ದೇಶಕ ತರುಣ್​ ಸುಧೀರ್​ ಮದುವೆ ಮಾತುಕತೆ!

ಮಂತ್ರಾಲಯದ ಗೋಶಾಲೆಯಲ್ಲಿ ಕಾಲ ಕಳೆದ ಡಿ ಬಾಸ್​ ದರ್ಶನ್​! ವಿಡಿಯೋ ವೈರಲ್​