ಬಳ್ಳಾರಿಯಲ್ಲಿ ತಾವು ನಂಬಿದ ದೇವರ ದರ್ಶನ ಪಡೆದ ಪುನೀತ್ ರಾಜ್ಕುಮಾರ್! ಯಾವುದು ಆ ದೇವರು?
ಸದ್ಯ ಪುನೀತ್ ರಾಜ್ಕುಮಾರ್ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಇದೇ ವೇಳೆ ಬಳ್ಳಾರಿಗೆ ಭೇಟಿ ನೀಡಿ ತಾವು ನಂಬಿದ ದೇವರ ದರ್ಶನವನ್ನು ಪಡೆದುಕೊಂಡಿದ್ದಾರೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏ.1ರಂದು ಅದ್ದೂರಿಯಾಗಿ ಈ ಸಿನಿಮಾ ತೆರೆಗೆ ಬರಲಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ‘ಯುವರತ್ನ’ ತೆರೆಕಾಣಲಿದ್ದು, ಭರ್ಜರಿಯಾಗಿಯೇ ಪ್ರಚಾರ ಮಾಡಲಾಗುತ್ತಿದೆ. ಅದಕ್ಕಾಗಿ ಪುನೀತ್ ರಾಜ್ಕುಮಾರ್ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ.
ಮಾ.21ರಿಂದ 23ರವರೆಗೆ ಮೊದಲ ಹಂತದ ರಾಜ್ಯ ಪ್ರವಾಸ ಮಾಡುತ್ತಿರುವ ಯುವರತ್ನ ಚಿತ್ರತಂಡ ಇಂದು (ಮಾ.22) ಬಳ್ಳಾರಿಗೆ ಭೇಟಿ ನೀಡಿತ್ತು. ಪುನೀತ್ ರಾಜ್ಕುಮಾರ್ ಜೊತೆ ನಟ ಧನಂಜಯ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಸಾಥ್ ನೀಡಿದ್ದರು. ಪುನೀತ್ ಅವರನ್ನು ನೋಡಲು ಬಳ್ಳಾರಿ ಜನರು ಮುಗಿಬಿದ್ದಿದ್ದರು.
ತಮ್ಮನ್ನು ನೋಡಲು ಬಂದ ಸಾವಿರಾರು ಅಭಿಮಾನಿಗಳ ಎದುರಿನಲ್ಲಿ ಪುನೀತ್ ಮಾತನಾಡಿದರು. ‘ಕನಕ ದುರ್ಗಮ್ಮ ದೇವಿ ದರ್ಶನ ಆಯ್ತು. ಆ ದೇವರ ದರ್ಶನ ನಡೆದ ಜಾಗದಲ್ಲಿ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡು ಹೇಳಿದ್ದು ಕೂಡ ಆಯ್ತು. ದೇವರ ದರ್ಶನಕ್ಕೂ ಮುಂಚೆ ನಾವು ನಂಬಿರುವ ದೇವರ ದರ್ಶನ ಆಗಿಹೋಯ್ತು. ಈ ಪ್ರೀತಿ ವಿಶ್ವಾಸಕ್ಕೆ ನಾವು ಏನು ಮಾತನಾಡಿದರೂ ಕಮ್ಮಿ’ ಎನ್ನುವ ಮೂಲಕ ಅಭಿಮಾನಿಗಳೇ ತಾವು ನಂಬಿದ ದೇವರು ಎಂದು ಪುನೀತ್ ಮತ್ತೊಮ್ಮೆ ಹೇಳಿದ್ದಾರೆ.
View this post on Instagram
ಅಭಿಮಾನಿಗಳು ಹಾಕಿದ ಹೂವು, ಶಿಳ್ಳೆ, ಚಪ್ಪಾಳೆ, ಜೈಕಾರ ಕಂಡು ಪುನೀತ್ ಫಿದಾ ಆಗಿದ್ದಾರೆ. ಬಳ್ಳಾರಿ ಜೊತೆ ತಮಗೆ ಇರುವ ಸಂಬಂಧವನ್ನು ಅವರು ನೆನಪಿಸಿಕೊಂಡರು. ‘ನನ್ನ ಅರಸು, ಪವರ್ ಸಿನಿಮಾಗಳ ಹಾಡು ಇಲ್ಲೇ ಬಿಡುಗಡೆ ಆಗಿತ್ತು. ದೊಡ್ಮನೆ ಹುಡುಗ ಹಾಡು ಇಲ್ಲೇ ಶೂಟಿಂಗ್ ಆಗಿತ್ತು. ಈಗ ಯುವರತ್ನಗೋಸ್ಕರ ಇಲ್ಲಿಗೆ ಬಂದಿದ್ದೇನೆ. ಯುವರತ್ನ ಎಂದರೆ ನಾನಲ್ಲ. ಪ್ರತಿಯೊಬ್ಬ ಯುವಕನೂ, ಇಲ್ಲಿರುವ ಎಲ್ಲರೂ ಯುವರತ್ನಗಳೇ’ ಎಂದು ಪುನೀತ್ ಹೇಳಿದ್ದಾರೆ.
View this post on Instagram
ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಒಟ್ಟಿಗೆ ಮುಗಿಬಿದ್ದಿದ್ದರಿಂದ ಕೆಲವು ಕಾಲ ನೂಕು ನುಗ್ಗಲು ಉಂಟಾಗಿತ್ತು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಚ್ ಕೂಡ ಮಾಡಬೇಕಾಯಿತು. ಪುನೀತ್ ಜೊತೆ ವೇದಿಕೆಯಲ್ಲಿ ಸಾಥ್ ನೀಡಿದ ಡಾಲಿ ಧನಂಜಯ ಅವರು ‘ಯುವರತ್ನ’ ಸಿನಿಮಾದ ಡೈಲಾಗ್ ಹೇಳಿ ಎಲ್ಲರನ್ನೂ ರಂಜಿಸಿದರು.
ಇದನ್ನೂ ಓದಿ: ನನ್ನನ್ನು ಪ್ರೀತಿಸಬೇಡಿ, ನನಗೆ ಮದ್ವೆ ಆಗಿದೆ; ಪುನೀತ್ ರಾಜ್ಕುಮಾರ್ ಹೀಗೆ ಅಂದಿದ್ಯಾಕೆ?