AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನನ್ನು ಪ್ರೀತಿಸಬೇಡಿ, ನನಗೆ ಮದ್ವೆ ಆಗಿದೆ; ಪುನೀತ್​ ರಾಜ್​ಕುಮಾರ್​ ಹೀಗೆ ಅಂದಿದ್ಯಾಕೆ?

ಟೀಸರ್​ನಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಹೀರೋಯಿನ್​ ಬಂದು ಪುನೀತ್​ ಬಳಿ ನೀವು ಥೇಟ್​ ಅಣ್ಣನ ರೀತಿ ಕಾಣುತ್ತೀರಿ ಎಂದು ಹೇಳುತ್ತಾರೆ. ಇದೇ ವಿಚಾರವಾಗಿ ಪುನೀತ್​ಗೆ ಪ್ರಶ್ನೆ ಕೇಳಲಾಯಿತು.

ನನ್ನನ್ನು ಪ್ರೀತಿಸಬೇಡಿ, ನನಗೆ ಮದ್ವೆ ಆಗಿದೆ; ಪುನೀತ್​ ರಾಜ್​ಕುಮಾರ್​ ಹೀಗೆ ಅಂದಿದ್ಯಾಕೆ?
ರಾಜೇಶ್ ದುಗ್ಗುಮನೆ
|

Updated on: Mar 20, 2021 | 6:52 PM

Share

ಪುನೀತ್​ ರಾಜ್​ಕುಮಾರ್​ ನಟನೆಯ ಯುವರತ್ನ ಸಿನಿಮಾ ಏಪ್ರಿಲ್​ 1ರಂದು ತೆರೆಗೆ ಬರುತ್ತಿದೆ. ಇಂದು ರಿಲೀಸ್​ ಆದ ಚಿತ್ರದ ಟ್ರೇಲರ್​ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ. ಸಿನಿಮಾ ರಿಲೀಸ್​ಗೂ ಮೊದಲು ಪುನೀತ್​ ರಾಜ್​ಕುಮಾರ್​ ಟಿವಿ9 ಕನ್ನಡಕ್ಕೆ ವಿಶೇಷ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಅಪ್ಪು ವಿಶೇಷ ಮನವಿ ಒಂದನ್ನು ಮಾಡಿದ್ದಾರೆ. ಟೀಸರ್​ನಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಹೀರೋಯಿನ್​ ಬಂದು ಪುನೀತ್​ ಬಳಿ ನೀವು ಥೇಟ್​ ಅಣ್ಣನ ರೀತಿ ಕಾಣುತ್ತೀರಿ ಎಂದು ಹೇಳುತ್ತಾರೆ. ಹೌದು, ಆದ್ರೆ, ಅಣ್ಣ ಎಂದು ಮಾತ್ರ ಕರೆಯಬೇಡಿ ಎಂದು ಪುನೀತ್​ ಮನವಿ ಮಾಡುತ್ತಾರೆ. ಇದೇ ವಿಚಾರವಾಗಿ ಪುನೀತ್​ಗೆ ಪ್ರಶ್ನೆ ಕೇಳಲಾಯಿತು. ನೀವು ಈ ಡೈಲಾಗ್​ ಹೇಳಿದ್ದು, ನಾಯಕಿಗೋ ಅಥವಾ ಸಮಸ್ತ ಯುವತಿಯರಿಗೋ ಎಂದು ಕೇಳಲಾಯಿತು. ಇದಕ್ಕೆ ಪುನೀತ್​ ಫನ್ನಿಯಾಗಿ ಉತ್ತರಿಸಿದ್ದಾರೆ.

ನನ್ನನ್ನು ಯಾರೂ ಪ್ರೀತಿಸಬೇಡಿ. ನನಗೆ ಮದುವೆ ಆಗಿದೆ ಎಂದು ನಕ್ಕರು ಪುನೀತ್​. ನಂತರ ಮಾತನಾಡಿದ ಅವರು, ಅವರು ಪ್ರೀತಿ ಮಾಡಲಿ. ಅವರ ಪ್ರೀತಿ-ಅಭಿಮಾನವೇ ಇಲ್ಲಿವರೆಗೆ ತಂದು ನಿಲ್ಲಿಸಿದೆ ಎಂದು ಸಂತಸ ಹೊರಹಾಕಿದರು. ಇನ್ನು ಆಹಾರದಲ್ಲಿ ಏನು ಇಷ್ಟ ಎನ್ನು ಪ್ರಶ್ನೆಗೆ ಉತ್ತರಿಸಿದ ಪುನೀತ್​, ನನಗೆ ನಾನ್​ ವೆಜ್​ ಎಂದರೆ ತುಂಬಾನೇ ಇಷ್ಟ. ಊಟ ಎಂದ್ರೆ ಇಷ್ಟ. ಎಲ್ಲಾ ಊರುಗಳಲ್ಲಿ ಎಲ್ಲಾ ರೀತಿಯ ಊಟ ಮಾಡಿದ್ದೇನೆ ಎಂದರು.

ಪುನೀತ್​ ಹಾಗೂ ನಿರ್ದೇಶಕ ಸಂತೋಷ್​​​ ಆನಂದ್​​ರಾಮ್​ ಕಾಂಬಿನೇಷನ್​ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಯುವರತ್ನ. ಈ ಮೊದಲು ರಿಲೀಸ್​ ಆಗಿರುವ ಸಿನಿಮಾ ಟೀಸರ್​ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಪುನೀತ್​ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್​ಗೆ ಜತೆಯಾಗಿ ಸಯ್ಯೇಶಾ ನಟಿಸಿದ್ದಾರೆ. ಧನಂಜಯ್​ ಹಾಗೂ ಪ್ರಕಾಶ್​ ರಾಜ್​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್​ 1ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: Yuvarathnaa Trailer: ಕೌಂಟರ್​ ಕೊಟ್ರೆ ಎನ್​ಕೌಂಟರ್​​; ಯುವರತ್ನ ಟ್ರೇಲರ್​ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್​

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!